ಬೆಂಗಳೂರು
ಕಾಂಗ್ರೆಸ್ ಪಕ್ಷದಲ್ಲಿ ಇದ್ದಷ್ಟು ಸಮರ್ಥ ನಾಯಕತ್ವ, ಸಾಮೂಹಿಕ ನಾಯಕತ್ವ ಬೇರೆ ಯಾವುದೇ ಪಕ್ಷದಲ್ಲಿಲ್ಲ ಎಂದು ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ. ಎಸ್.ಆರ್.ಪಾಟೀಲ್, ಬಿಜೆಪಿಯಲ್ಲಿ ಕಿತ್ತಾಟಗಳು ಹೆಚ್ಚಾಗಿದ್ದು, ಯಡಿಯೂರಪ್ಪ ಸ್ಥಾನಕ್ಕೆ ತೊಂದರೆಯುಂಟು ಮಾಡಲು ಅವರ ಪಕ್ಷದಲ್ಲಿಯೇ ಕಾದುಕುಳಿತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಎಂದಿಗೂ ತನ್ನ ತತ್ವ ಸಿದ್ಧಾಂತಗಳನ್ನು ಬಿಟ್ಟುಕೊಟ್ಟಿಲ್ಲ.
ಕಾಂಗ್ರೆಸ್ ಪಕ್ಷ ವಿಪಕ್ಷವಾಗಿ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಜನರನ್ನು ಎಚ್ಚರಿಸುತ್ತಿದೆ ಎಂದರು.ಸರ್ಕಾರ ಕಾಯಿದೆಗಳನ್ನು ಪಾಸ್ ಮಾಡಲೆಂದಷ್ಟೇ ಅಧಿವೇಶನ ಕರೆದಿದೆ ಹೊರತು, ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಲ್ಲ. ಕಲಾಪಕ್ಕೆ ಕಡಿಮೆ ಸಮಯಗಳನ್ನು ನೀಡಿದ್ದು, ಇರುವ ಸ್ವಲ್ಪ ಸಮಯದಲ್ಲಿಯೇ ಸರ್ಕಾರದ ವೈಫಲ್ಯಗಳನ್ನು ಖಂಡಿಸುವ ಕೆಲಸ ಕಾಂಗ್ರೆಸ್ ಮಾಡಲಿದೆ.
ಮೇಲ್ಮನೆ ಹಾಗೂ ಕೆಳಮನೆಯಲ್ಲಿ ರೈತ ವಿರೋಧಿ ಕಾಯಿದೆಗಳು, ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಪ್ರಕರಣ ಗೃಹ ಇಲಾಖೆ ವೈಫಲ್ಯ, ಕಾನೂನು ಸುವ್ಯವಸ್ಥೆ ಕಾಪಾಸುವಲ್ಲಿ ಸರ್ಕಾರದ ನಿರ್ಲಕ್ಷ್ಯ, ಡ್ರಗ್ಸ್ ಪ್ರಕರಣ ಸೇರಿದಂತೆ ಸರ್ಕಾರದ ಜನವಿರೋಧಿಗಳ ಕುರಿತು ಸದನದಲ್ಲಿ ಧ್ವನಿಯೆತ್ತಲಾಗುವುದು. ಡ್ರಗ್ಸ್ ಪ್ರಕರಣವನ್ನು ಮುಂದೆಬಿಟ್ಟು ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಬಿಡುವುದಿಲ್ಲ. ಕಡಿಮೆ ಸಮಯವಿದೆ ಎಂದು ಸದನದಲ್ಲಿ ವಿಪಕ್ಷವಾಗಿ ಸುಮ್ಮನೆ ಕುಳಿತು ಕೊಳ್ಳದೇ ಜನರಿಗಾಗಿ ಧ್ವನಿಯೆತ್ತದೇ ಇರುವುದಿಲ್ಲ.
ಈಗಾಗಲೇ ತಾವು ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸ್ಪೀಕರ್ ಗೆ ಅಧಿವೇಶನದ ಅವಧಿಯನ್ನು ಅಕ್ಟೋಬರ್ 15 ರವರೆಗೆ ವಿಸ್ತರಿಸುವಂತೆ ಪತ್ರ ಬರೆದಿದ್ದೇವೆ. ಜನವಿರೋಧಿ ಸರ್ಕಾರದ ವಿರುದ್ಧ ಜನರೇ ಮುಂದಿನ ದಿನಗಳಲ್ಲಿ ಕಡಿಮೆ ಮತಗಳನ್ನು ನೀಡುವ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ಎಸ್.ಆರ್.ಪಾಟೀಲ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ