ತುಮಕೂರು
ನಗರದ ಬಟವಾಡಿ ಎಪಿಎಂಸಿ ಯಾರ್ಡಿನ ಟಿಜಿಎಂಸಿ ಬ್ಯಾಂಕಿನ ಕಿಟಕಿಯ ಕಂಬಿಗಳನ್ನು ಮುರಿದು ಕಳವು ಮಾಡಲು ಪ್ರಯತ್ನಿಸಿದ್ದ ಪ್ರಕರಣ ದಿ: 4.10.2019 ರಂದು ನಡೆದಿತ್ತು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.21 ರಂದು ಬೆಳಗ್ಗೆ 10.30ರ ಸಮಯದಲ್ಲಿ ಕ್ಯಾತ್ಸಂದ್ರ ವೃತ್ತ ನಿರೀಕ್ಷಕ ಆರ್.ಜಿ.ಚನ್ನೇಗೌಡ ನೇತೃತ್ವದ ತಂಡ ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿಗೆ ಸೇರಿದ ದೊಡ್ಡದಾಳವಟ್ಟದ ಉದಯ್‍ಕುಮಾರ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದೂರು, ಟೂಡಾ ಲೇಔಟ್, ಹರಳೂರು ಗ್ರಾಮಗಳಲ್ಲಿರುವ ಒಂಟಿ ಮನೆಗಳಲ್ಲಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ 3 ಸ್ವತ್ತು ಕಳವು ಪ್ರಕರಣಗಳು ಮತ್ತು 1 ಕಳವು ಯತ್ನ ಪ್ರಕರಣದಲ್ಲಿ ಭಾಗಿ ಯಾಗಿರುವುದಾಗಿ ವಿಚಾರಣಾ ವೇಳೆಯಲ್ಲಿ ತಿಳಿಸಿದ್ದಾನೆ. ಆರೋಪಿತನಿಂದ ಸುಮಾರು 3 ಲಕ್ಷದ 75 ಸಾವಿರ ರೂ. ಬೆಲೆ ಬಾಳುವ ಚಿನ್ನಾಭರಣ, ಒಂದು ಕೆಎ-64 ಎಸ್-3774 ಹೋಂಡಾ ಶೈನ್ ಬೈಕನ್ನು ವಶಪಡಿಸಿಕೊಂಡಿರುತ್ತಾರೆ.
ಅಡಿಷನಲ್ ಎಸ್ಪಿ ಉದೇಶ್, ಡಿಎಸ್ಪಿ ತಿಪ್ಪೇಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕ್ಯಾತ್ಸಂದ್ರ ವೃತ್ತ ನಿರೀಕ್ಷಕ ಆರ್.ಜಿ. ಚಿನ್ನೇಗೌಡ, ಪಿಎಸ್‍ಐಗಳಾದ ರಾಮಪ್ರಸಾದ್ ಮತ್ತು ಎಂ.ಎನ್. ಮಂಜುಳಾ ಹಾಗೂ ಸಿಬ್ಬಂದಿಯನ್ನು ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
