ಚಳ್ಳಕೆರೆ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಕಳ್ಳ

ಚಳ್ಳಕೆರೆ

   ನಗರದ ಬಳ್ಳಾರಿ ರಸ್ತೆಯ ಮೊದಲನೇ ಕ್ರಾಸ್ ಮತ್ತು ಪ್ರಮುಖ ರಸ್ತೆಯಲ್ಲಿ ಒಟ್ಟು 3 ಬಂಗಾರದ ಅಂಗಡಿಗಳ ಬೀಗವನ್ನು ಒಡೆದು ಕಳ್ಳತನಕ್ಕೆ ಯತ್ನಿಸಿದ ಪ್ರಕರಣ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಕಡಿಮೆಯಾಗಿದ್ದು, ಜನರಲ್ಲಿದ್ದ ಆತಂಕ ದೂರವಾಗಿತ್ತು. ಆದರೆ, ಬುಧವಾರ ಬೆಳಗಿನ ಜಾವ ಮೂರು ಬಂಗಾರದ ಅಂಗಡಿಗಳಲ್ಲಿ ಕಳ್ಳರು ಕಳ್ಳತನಕ್ಕೆ ಯತ್ನಿಸಿರುವುದು ಇಲ್ಲಿನ ವರ್ತಕರನ್ನು ಭಯಭೀತರನ್ನಾಗಿ ಮಾಡಿದೆ.

  ಬಳ್ಳಾರಿ ರಸ್ತೆಯ ಮೇಘನಾ ಜ್ಯೂಯಲರ್ಸ್, ಓಂ.ಜ್ಯೂಯಲರ್ಸ್ ಮತ್ತು ವೆಂಕಟೇಶ್ವರ ಜ್ಯೂಯಲರ್ಸ್ ಅಂಗಡಿಗಳ ಕಬ್ಬಿಣದ ಗೇಟ್ ಮುಂಭಾಗದಲ್ಲಿ ಹಾಕಿದ್ದ ಬೀಗವನ್ನು ಕಳ್ಳರು ಒಡೆದು ಬೇರೆ ಕಡೆ ಬಿಸಾಕಿ ರೋಲಿಂಗ್ ಶೆಟ್ ಎತ್ತಿ ಒಳಕ್ಕೆ ನುಗ್ಗಲು ಯತ್ನಿಸಿದರಾದರೂ ಸಫಲವಾಗಿಲ್ಲ. ಕೆಲಹೊತ್ತು ಕಳ್ಳರು ಅಂಗಡಿಯ ಒಳಗೆ ಪ್ರವೇಶಿಸಿ ಬಂಗಾರ ಆಭರಣ ದೋಚುವ ಯತ್ನ ಸಫಲವಾಗಿಲ್ಲ. ಕಾರಣ ಮೂರು ಅಂಗಡಿಗಳು ಒಂದೇ ಕಡೆ ಇದ್ದು, ಇಲ್ಲಿ ಹಗಲು, ರಾತ್ರಿ ಎನ್ನದೆ ವಾಹನ ಓಡಾಟಗಳ ಸಂಚಾರವಿರುತ್ತದೆ.

    ಕಳ್ಳತನ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅಂಗಡಿಗಳ ಮಾಲೀಕರು ಕೇವಲ ಮಳಿಗೆ ಬೀಗವನ್ನು ಮಾತ್ರ ಕಳ್ಳ ಹೊಡೆದಿದ್ದು, ಒಳಗೆ ನುಗ್ಗುವ ಅವನ ಪ್ರಯತ್ನ ಸಫಲವಾಗಿಲ್ಲ. ಬಾರಿಗಾತ್ರದ ಬೀಗವನ್ನು ಅಂಗಡಿಗೆ ಹಾಕಲಾಗಿತ್ತು. ಬಹಳ ಪರಿಶ್ರಮದ ನಂತರ ಕಳ್ಳ ಒಳನುಗ್ಗಿ ಬಂಗಾರದ ಆಭರಣ ದೋಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಗಂಟೆಗಟ್ಟಲೇ ಸಣಸಾಡಿ ವಾಪಾಸ್ ಆಗಿರುತ್ತಾನೆ. ಮೂರು ಅಂಗಡಿಗಳ ಮಾಲೀಕರು ಕಳ್ಳತನದ ಯತ್ನದ ಬಗ್ಗೆ ಕಳವಳಗೊಂಡಿದ್ದು, ಪೊಲೀಸರು ಇನ್ನೂ ಮುಂದಾದರೂ ಚಾಕಚಕತ್ಯೆಯಿಂದ ಕಾರ್ಯನಿರ್ವಹಿಸಬೇಕೆಂದು ತಿಳಿಸಿದ್ಧಾರೆ.

ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಭೇಟಿ :-

    ಸುದ್ದಿ ತಿಳಿಯುತ್ತಲೇ ಡಿವೈಎಸ್ಪಿ ಎಸ್.ರೋಷನ್ ಜಮೀರ್‍ರೊಂದಿಗೆ ಆಗಮಿಸಿದ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮಹಲಿಂಗ ನಂದಗಾವಿ ಮೂರೂ ಅಂಗಡಿಗಳ ಸಿಸಿ ಟಿ.ವಿಯ ಪೂಟೇಜ್‍ನ್ನು ಪರಿಶೀಲಿಸಿದರು. ಒಬ್ಬನೇ ವ್ಯಕ್ತಿ ಮೂರು ಅಂಗಡಿಗಳ ಬೀಗವನ್ನು ಕಬ್ಬಿಣದ ಹಾರೆಯಿಂದ ಹೊಡೆದಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದು, ಕೂಡಲೇ ಕಳ್ಳನನ್ನು ಬಂಧಿಸುವುದಾಗಿ ತಿಳಿಸಿದರು.

    ಕಳ್ಳತನ ಯತ್ನ ಹಿನ್ನೆಲೆಯಲ್ಲಿ ಮೂರು ಅಂಗಡಿಗಳ ಮಾಲೀಕರಿಗೆ ಎಚ್ಚರಿಸಿದ ಪೊಲೀಸರು ನಿಮ್ಮ ಅಂಗಡಿಗಳ ಮುಂಭಾಗದಲ್ಲಿ ಸಿಸಿ ಟಿ.ವಿಯೊಂದಿಗೆ ಅಲರಾಂ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಸಿಸಿ ಟಿ.ವಿಯ ಪೂಟೇಜ್‍ಗಳನ್ನು ನಿಮ್ಮ ಮೊಬೈಲ್‍ನಲ್ಲೇ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಿಕೊಳ್ಳಿ. ಮೂರು ಅಂಗಡಿಯ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ ಇಬ್ಬನೇ ಇರಬಹುದು ಎಂದು ಅಭಿಪ್ರಾಯಪಟ್ಟಿರುವ ಪೊಲೀಸ್ ಇಲಾಖೆ ಕೂಡಲೇ ಅವನನ್ನು ಬಂಧಿಸುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಪಿಎಸ್‍ಐ ನೂರ್ ಆಹಮ್ಮದ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link