ಹುಳಿಯಾರು:
ಹುಳಿಯಾರಿನ ಒಣಕಾಲುವೆ ಬಳಿಯ 2 ಕಾಂಡಿಮೆಂಟ್ಸ್‍ಗಳಲ್ಲಿ ಭಾನುವಾರ ರಾತ್ರಿ ಕಳ್ಳತನವಾಗಿದೆ.ಇಲ್ಲಿನ ಶ್ರೀ ಸೀತಾರಾಮ ಕಲ್ಯಾಣ ಮಂಟಪದ ಮುಂಭಾಗದಲ್ಲಿರುವ ಮುಕುಂದಯ್ಯ ಎಂಬುವವರ ಕಾಂಡಿಮೆಂಟ್ಸ್‍ನ ಹಿಂಭಾಗದ ತಗಡಿನ ಶೀಟ್‍ಗಳನ್ನು ಕಟ್ ಮಾಡಿ ಒಳ ನುಗ್ಗಿರುವ ಕಳ್ಳರು ಸರಿಸುಮಾರು 10 ಸಾವಿರ ರೂ. ಮೌಲ್ಯದ ಸಿಗರೇಟ್, ಗುಟುಕ, ಕೂಲ್ ಡ್ರಿಂಕ್ಸ್‍ಗಳನ್ನು ಕದ್ದೊಯ್ದಿದ್ದಾರೆ.
ಅಲ್ಲದೆ ತಿಪಟೂರು ರಸ್ತೆಯ ಮುನಿಯಪ್ಪ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಕಂಪ್ಯೂಟರ್ ಮಾನಿಟರ್ ಸೇರಿದಂತೆ ಇಲ್ಲೂ ಸಹ ಸಿಗರೇಟ್, ಗುಟುಕ, ತಂಪುಪಾನೀಯಗಳನ್ನು ಕಳ್ಳತನ ಮಾಡಿದ್ದಾರೆ.ಹುಳಿಯಾರು ಪಿಎಸ್‍ಐ ಕೆ.ಟಿ.ರಮೇಶ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಂಗಡಿ ಮಾಲೀಕರಿಂದ ವಿವರಣೆ ಪಡೆದುಕೊಂಡರು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.