ಚಿತ್ರದುರ್ಗ
ಸಂಘ ಸಂಸ್ಥೆಗಳು ಜನ ಸಾಮಾನ್ಯರ ಸಮಸ್ಯೆಗಳು ಮತ್ತು ಜಿಲ್ಲೆಯ ಅಭವೃದ್ದಿ ಕುರಿತು ಚಿಂತನೆ ಮಾಡಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷನ್ಮುಖಪ್ಪ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ನೆರಳು ಸಮಾಜ ಸೇವಾ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ಹಲವಾರು ಸೇವಾ ಸಂಸ್ಥೆಗಳು ಇವೆ ಅವುಗಳಿಗಿಂತ ವಿಭೀನ್ನವಾಗಿ ಜನತೆಯ ಸಮಸ್ಯೆಗಳತ್ತ ಗಮನ ನೀಡುವುದರ ಮೂಲಕ ಅದಕ್ಕೆ ಸಾಧ್ಯವಾದಷ್ಟು ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಜನತೆ ಮನ್ನಣೆಯನ್ನು ಗಳಿಸಿ ಎಂದು ಕರೆ ನೀಡಿದರು.
ಸೇವಾ ಸಂಸ್ಥೆಯು ಉದ್ಘಾಟನಾ ಸಮಾರಂಭಕ್ಕೆ ಮಾತ್ರವೇ ಮೀಸಲಾಗದೆ ನಗರಕ್ಕೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಕರ್ಯ ಹಾಗೂ ನೀರಾವರಿ ಯೋಜನೆ ಜಾರಿಯಾಗುವತ್ತ ಆದ್ಯತೆಯನ್ನು ನೀಡುವಂತೆಯೂ ಅವರು ಸಲಹೆ ಮಾಡಿದರು
ಚಿತ್ರದುರ್ಗ ನಗರ ವಿವಿಧ ರೀತಿಯ ಮೂಲಭೂತ ಸೌಕರ್ಯಗಳಿಂದ ಬಳಲುತ್ತಿದೆ ನಗರದಲ್ಲಿ ರಸ್ತೆಗಳು ಸರಿಯಿಲ್ಲ ಶೌಚಾಲಯಗಳು ಕಂಡು ಬರುತ್ತಿಲ್ಲ ಇದರ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುವುದರ ಮೂಲಕ ಅವುಗಳು ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದರು
ಚಿತ್ರದುರ್ಗ ಜಿಲ್ಲೆ ಬರಗಾಲದಿಂದ ಕೊಡಿದ ಜಿಲ್ಲೆಯಾಗಿದೆ ಇಲ್ಲಿ ನೀರಾವರಿಯಾಗಲಿ ಇಲ್ಲ ಭದ್ರಾ ಯೋಜನೆಯೊಂದೆ ಆಧಾರವಾಗಿದೆ ಆದು ಶೀಘ್ರವಾಗಿ ಆಗುವಂತೆ ಸರ್ಕಾರದ ಮೇಲೆ ಒತ್ತಡವನ್ನು ತರಬೇಕಿದೆ, ಭದ್ರಾ ಮೇಲ್ದಂಡೆಯಿಂದ ಚಿತ್ರದುರ್ಗ ತಾಲ್ಲೂಕಿಗೆ ಕೇವಲ 6 ಕೆರೆಗಳು ಮಾತ್ರವೇ ಭರ್ತಿ ಮಾಡಲು ಆವಕಾಶ ಕಲ್ಪಿಸಲಾಗಿದೆ ಇದನ್ನು ಹೊರೆತು ಪಡಿಸಿ 16 ಕರೆಗಳಿಗೆ ನೀರು ಭರ್ತಿ ಮಾಡುವ ಯೋಜನೆಯನ್ನು ಸರ್ಕಾರಕ್ಕೆ ನೀಡಲಾಗಿದೆ ನೀರಾವರಿ ಸಚಿವರು ಸಹಾ ಇದರ ಬಗ್ಗೆ ಆಸಕ್ತಿಯನ್ನು ಹೊಂದಿದ್ಧಾರೆ ಕೆರೆ ತುಂಬಿಸುವ ಯೋಜನೆಗೆ ಆದತ್ಯೆ ನೀಡುತ್ತೇನೆ ಎಂದಿದ್ಧಾರೆ ಇದರೊಂದಿಗೆ ಸಾಸ್ವವೆ ಹಳ್ಳ ಯೋಜನೆಯಡಿ ಪಶ್ಚಿಮ ಭಾಗದ ಕೆರೆಗಳಿಗೆ ನೀರನ್ನು ಭರ್ತಿ ಮಾಡಲು ಸಹಾ ಸರ್ಕಾರದ ಮುಂದೆ ಯೋಜನೆ ಇದ್ದು ಈಗಾಗಲೇ ಸಂಬಂಧಪಟ್ಟ ಇಲಾಖೆಗಳ ಅನುಮತಿಯನ್ನು ಪಡೆದಿದ್ದು ಸಚಿವ ಸಂಪುಟದ ಅನುಮೋದನೆ ಪಡೆಯಬೇಕಿದೆ ಎಂದು ಹೇಳಿದರು.
ಸೈಯದ್ ವಲಿ ಖಾದ್ರಿ ಮಾತನಾಡಿ ಸಂಸ್ಥೆಯ ಹೆಸರೇ ಹೇಳುವಂತೆ ನೆರಳು ಜೀವನದಲ್ಲಿ ವಿವಿಧ ರೀತಿಯ ಸಂಕಷ್ಟಗಳಿಂದ ನೊಂದವರಿಗೆ ಅವರ ಸಮಸ್ಯೆಯನ್ನು ಆಲಿಸಿ ಅದಕ್ಕೆ ಪರಿಹಾರವನ್ನು ಕೊಡಿಸುವ ಕಾರ್ಯವನ್ನು ಮಾಡುವುದರ ಮೂಲಕ ನಿಜವಾದ ನೆರಳಾಗಿ ಕೆಲಸ ಮಾಡುವಂತೆ ಆಶಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಲಕ್ಷ್ಮಣ್, ನರೇನಹಳ್ಳಿ ಅರುಣ್ ಕುಮಾರ್‍ಉದ್ಯಮಿ ಮಹಡಿ ಶಿವಮೂರ್ತಿ, ಮಂಜುನಾಥ್ ಕಳ್ಳಹಟ್ಟಿ, ಪಾರಂಪರಿಕ ವ್ಥದ್ಯರಾದ ವಿರೇಶ್, ಜಾನಪದ ಕಲಾವಿದ ಗಂಜಿಗಟ್ಟಿ ಕೃಷ್ಣಮೂರ್ತಿ, ಆರ್.ಮಹೇಶ್ ಭಾಗವಹಿಸಿದ್ದರು. ನೆರಳು ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ಆರ್.ಶ್ರೀರಾಮ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ