ಸಚಿವ ಸ್ಥಾನ ಕೊಡದಿದ್ದರೆ ಸಾಮೂಹಿಕ ರಾಜೀನಾಮೆ
ಚಿತ್ರದುರ್ಗ:
ಆರನೇ ಬಾರಿಗೆ ಶಾಸಕರಾಗಿರುವ ಹಿರಿಯ ರಾಜಕಾರಣಿ ಜಿ.ಹೆಚ್.ತಿಪ್ಪಾರೆಡ್ಡಿಗೆ ಈ ಬಾರಿ ಸಚಿವ ಸ್ಥಾನ ನೀಡದಿದ್ದರೆ ಬಿಜೆಪಿ ಸದಸ್ಯರುಗಳೆಲ್ಲಾ ಸಾಮೂಹಿಕವಾಗಿ ರಾಜಿನಾಮೆ ನೀಡುವುದಾಗಿ ನಗರಸಭೆ ಸದಸ್ಯ ಶ್ರೀನಿವಾಸ್ ಪಕ್ಷದ ವರಿಷ್ಟರಿಗೆ ಬೆದರಿಕೆ ಹಾಕಿದರು.
ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ನಡೆಸಿದ ತಿಪ್ಪಾರೆಡ್ಡಿ ಅವರ ಬೆಂಬಲಿಗರು, ಈ ಸರ್ಕಾರದಲ್ಲಿ ತಿಪ್ಪಾರೆಡ್ಡಿ ಅವರಿಗೆ ಮಂತ್ರಿ ಸ್ಥಾನ ಕೊಡಲೇಬೇಕು. ಚಿತ್ರದುರ್ಗದ ಅಭಿವೃದ್ದಿಯ ದೃಷ್ಠಿಯಿಂದಲೂ ಅವರನ್ನು ವರಿಷ್ಟರು ಪರಿಗಣಿಸಬೇಕು ಎಂದು ಆಗ್ರಹಿಸಿದರು
ನಗರಸಭೆ ಸದಸ್ಯ ಹೆಚ್.ಶ್ರೀನಿವಾಸ್ ಮಾತನಾಡಿ ಕಳೆದ ಸಾರಿಯೇ ಸಚಿವ ಸ್ಥಾನ ಕೈತಪ್ಪಿದಾಗ ಬೀದಿಗಿಳಿದು ಹೋರಾಟ ಮಾಡಿದ್ದೆವು. ಆದರೆ ಈ ಬಾರಿ ಆ ಹಾದಿ ತುಳಿಯದಂತೆ ನಗರಸಭೆ, ಜಿ.ಪಂ., ತಾ.ಪಂ, ಗ್ರಾ.ಪಂ.ಸದಸ್ಯರುಗಳೆಲ್ಲಾ ಸೇರಿ ಪಕ್ಷಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇವೆ ಎಂದರು
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಯಾವುದೆ ಕಾರಣಕ್ಕೂ ಜಾತಿ ಆಧಾರದ ಮೇಲೆ ಮಂತ್ರಿಗಿರಿ ನೀಡಬಾರದು. ಕಾಂಗ್ರೆಸ್‍ನ ಹತ್ತು ಮಂದಿ ಪಕ್ಷ ತೊರೆದು ಉಪಚುನಾವಣೆಯಲ್ಲಿ ಗೆದ್ದುಬಂದು ಪಕ್ಷಕ್ಕೆ ಸಹಕಾರ ನೀಡಿದ್ದಾರೆ. ಅವರುಗಳಿಗೆಲ್ಲಾ ಸಚಿವ ಸ್ಥಾನ ಕೊಡಲಿ ನಮ್ಮದೇನು ಅಭ್ಯಂತರವಿಲ್ಲ. ಆದರೆ ಅನುಭವಿ, ನುರಿತ, ಹಿರಿಯ ರಾಜಕೀಯ ಪಟು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರ ಸೇವೆಯನ್ನು ಪರಿಗಣಿಸಿ ಮಂತ್ರಿ ಸ್ಥಾನ ನೀಡಬೇಕು.
ಚಿತ್ರದುರ್ಗ ನಗರಸಭೆಯಲ್ಲಿ ಹದಿನೇಳು ಮಂದಿ ಬಿಜೆಪಿ ಸದಸ್ಯರುಗಳಿದ್ದೇವೆ. ಅದರಂತೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿರುವ ಪಕ್ಷದ ಸದಸ್ಯರುಗಳೆಲ್ಲಾ ಫೆ.6 ನೇ ತಾರೀಖಿನವರೆಗೆ ಕಾಯುತ್ತೇವೆ. ಒಂದು ವೇಳೆ ಈ ಬಾರಿಯೂ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಚಿವ ಸ್ಥಾನ ನೀಡದೆ ನಾಯಕರುಗಳು ವಂಚಿಸಿದರೆ ಮಾತ್ರ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ತಕ್ಕ ಪಾಠ ಕಲಿಸುತ್ತೇವೆಂದು ಎಚ್ಚರಿಸಿದರು. ನಗರಸಭೆ ಸದಸ್ಯರುಗಳಾದ ಹರೀಶ್, ವೆಂಕಟೇಶ್, ಜಯಪ್ಪ, ಪ್ರಾಣೇಶ್, ಜಿ.ಆರ್.ಹಳ್ಳಿ ಪ್ರಸನ್ನ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ, ಸದಸ್ಯೆ ಕೊಲ್ಲಿಲಕ್ಷ್ಮಿ ಸೇರಿದಂತೆ ಅನೇಕ ಸದಸ್ಯರುಗಳು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ