ಹಿರಿಯೂರು:
ತಾಲೂಕಿನ ಖಂಡೇನಹಳ್ಳಿ ಗ್ರಾಮದ ಶ್ರೀಗುರುತಿಪ್ಪೇರುದ್ರಸ್ವಾಮಿ ರಥೊತ್ಸವ ವಿಜೃಂಣೆಯಿಂದ ಜರುಗಿತು. ಜಾತ್ರೋತ್ಸವದ ಅಂಗವಾಗಿ ಗಂಗಾಪೂಜೆ. ಕಲಶ ಸ್ಥಾಪನೆ, ನವಗ್ರಹ ಆವಾಹನೆ, ಅರ್ಚನೆ, ನವಗ್ರಾಹದಿ ಮೃತ್ಯುಂಜಯ ಹೋಮ, ಬಲಿಪ್ರಧಾನ ಪೂರ್ಣಾಹುತಿ, ಶ್ರೀ ಸ್ವಾಮಿಗೆ ವಿಶೇಷ ಪುಷ್ವಾಲಂಕಾರ. ಗ್ರಾಮದ ಸುಮಂಗಲಿಯರಿಂದ ಆರತಿಸೇವೆ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಲಂಕರಿಸಿದ ಶ್ರೀ ಸ್ವಾಮಿಯನ್ನು ಮೆರವಣಿಗೆ ಮೂಲಕ ಹೂವಿನ ರಥದಲ್ಲಿ ಪ್ರತಿಷ್ಠಾಪಿಸಿ ಸಂಜೆ 5 ಗಂಟೆಗೆ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಜಾತ್ರಾ ಮಹೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳು ಜರುಗಿದವು. ಗ್ರಾಮದ ಕಲಾ ತಂಡದವರಿಂದ ಕಿನ್ನರಗೊಂಬೆ ಕುಣಿತ ಜಾತ್ರೆಯಲ್ಲಿ ನೆರೆದಿದ್ದ ಭಕ್ತರ ಆಕರ್ಷಣೆಯಾಗಿತ್ತು. ಡೊಳ್ಳುಕುಣಿತ, ವೀರಗಾಸೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಾತ್ರಾ ಮಹೋತ್ಸವದಲ್ಲಿ ಗ್ರಾ.ಪಂ. ಸದಸ್ಯರು, ತಾಪಂ. ಸದಸ್ಯರು, ದೇವಸ್ಥಾನ ಸೇವಾಸಮಿತಿ ಹಾಗೂ ವಿವಿಧ ಸಂಘಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








