ಅಯೋಧ್ಯಾ ವರದಿ ದೇಶದ ಪರೀಕ್ಷೆಯ ಕಾಲ : ಬುಖಾರಿ

ನವದೆಹಲಿ

   ಇದೇ ತಿಂಗಳ 17 ಅಥವಾ ಅಷ್ಟರೊಳಗೆ ಅಯೋಧ್ಯಾ ಭೂ ವಿವಾದದ ಕುರಿತು ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗಲಿದ್ದು, ಇದು ರಾಷ್ಟ್ರಕ್ಕೆ ‘ಪರೀಕ್ಷಾ ಸಮಯ’ ಎಂದು ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಹೇಳಿದ್ದಾರೆ.

  “ಸಾಂವಿಧಾನಿಕ ಶ್ರೇಷ್ಠತೆಯು ಮೇಲುಗೈ ಸಾಧಿಸುತ್ತದೆ ಮತ್ತು ಕಾನೂನಿನ ನಿಯಮವು ರಾಜಿಯಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ರಾಷ್ಟ್ರಕ್ಕೆ ಪರೀಕ್ಷೆಯ ಸಮಯ ಎಂದು ಶಾಹಿ ಇಮಾಮ್ ಶುಕ್ರವಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.”ಬಾಬರಿ ಮಸೀದಿಯ ಮೊಕದ್ದಮೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ನಾನು ವಿವಿಧ ಭಾಗಗಳ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ”.

   “ಉಭಯ ಕೋಮಿನಲ್ಲಿ ಭಾವೋದ್ರೇಕಗಳು ಹೆಚ್ಚಾಗುತ್ತಿದ್ದರೂ, ಸಂಯಮ ಮತ್ತು ನ್ಯಾಯಾಂಗದಲ್ಲಿ ನಂಬಿಕೆಯನ್ನು ಪ್ರದರ್ಶಿಸುವಂತೆ ನಾನು ಭಾರತೀಯ ಮನಸ್ಸಾಕ್ಷಿಯನ್ನು ಒತ್ತಾಯಿಸುತ್ತೇನೆ” ಎಂದಿದ್ದಾರೆ.ವಿವಾದದ ಬಗ್ಗೆ ತೀರ್ಪು ಹೊರಬರುವಾಗ ಶಾಂತಿ ಖಚಿತಪಡಿಸಿಕೊಳ್ಳುವಂತೆ ಬಿಜೆಪಿ ಮತ್ತು ಆರ್ ಎಸ್ ಎಸ್  ನಾಯಕರು ಅಲ್ಪಸಂಖ್ಯಾತ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link