ಸೊಳ್ಳೆಗಳ ಆಗರ ತಲವಾಗಲು ಗ್ರಾಮ

ಹರಪನಹಳ್ಳಿ:

    ವೈರಲ್ ಫಿವರ್‍ಗೆ ಇಡೀ ಹರಿಜನ ಕಾಲೋನಿಯೇ ಮಲಗಿದ ಘಟನೆ ತಾಲೂಕಿನ ಗುಂಡಗತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲವಾಗಲು ಗ್ರಾಮದಲ್ಲಿ ಜರುಗಿದೆ.

    ಜ್ವರ ತಾಲೂಕಿನ ನಾಲ್ಕು ದಿಕ್ಕುಗಳಲ್ಲೂ ಪಸರಿಸುತ್ತಿದೆ ಎನ್ನುವುದಕ್ಕೆ ಪ್ರಸ್ತುತ ತಲವಾಗಲೇ ಸಾಕ್ಷಿಕರಿಸುತ್ತಿದೆ. 450 ಮನೆಗಳ ಗ್ರಾಮದಲ್ಲಿ 60 ಮನೆಗಳ ಹರಿಜನ ಕೇರಿಯಿದೆ. ಕೇರಿಯ ಪ್ರತೀ ಮನೆಯಲ್ಲೂ ಇಬ್ಬರಿಂದ ಮೂರು ಜನ ಹಾಸಿಗೆ ಹಿಡಿದಿದ್ದಾರೆ.

    ಕೆಲವರು ಸರ್ಕಾರಿ ಆಸ್ಪತ್ರೆಗೆ, ಖಾಸಗೀ ಆಸ್ಪತ್ರೆಗೆ ದಾಖಲಾದರೆ ಇನ್ನೂ ಕೆಲವರು ಜಿಲ್ಲಾಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.ಕಿರಿದಾದ ರಸ್ತೆಯ ಓಣಿಗಳಲ್ಲಿ ಚರಂಡಿ ನೀರು ತುಂಬಿ ಹರಿಯುತ್ತಿದ್ದು ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಾಗಿರುವುದರಿಂದ ಜ್ವರ ಹೆಚ್ಚಾಗಿ ಹರಡಿದೆ ಎನ್ನಲಾಗಿದೆ. ಸ್ವಚ್ಚತೆಗೆ ಗ್ರಾಮ ಪಂಚಾಯಿತಿ ಮುಂದಾಗಿಲ್ಲ. ಹೀಗೆ ಆದರೆ ಇಡೀ ಗ್ರಾಮವೇ ಜ್ವರದಿಂದ ಬಳಲುವುದು ತಪ್ಪುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

   ಪಿಡಿಓ ಗ್ರಾಮಕ್ಕೆ ಬೇಟಿ ನೀಡಿ ಇನ್ನು ವಾರದೊಳಗೆ ಸ್ವಚ್ಚ ಮಾಡಿಸುವುದಾಗಿ ಹೇಳುತ್ತಾರೆ. ಜ್ವರ ಬಂದ ಮೇಲೆ ಸ್ವಚ್ಚತೆ ಗಮನಿಸುವುದಕ್ಕಿಂತ ಮೊದಲೆ ಕ್ರಮ ಕೈಗೊಂಡಿದ್ದರೆ ಸಮಸ್ಯೆಯಾದರೂ ಕಡಿಮೆಯಾಗುತ್ತಿತ್ತು. ಆರೋಗ್ಯಾಧಿಕಾರಿಗಳು ಇಡೀ ಗ್ರಾಮಕ್ಕೆ ಜ್ವರ ಹರಡುವ ಮುನ್ನ ಕೇರಿಗೆ ಬೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಿ ಎನ್ನುವುದು ಅವರ ಬೇಡಿಕೆಯಾಗಿದೆ.ಕಾಲೋನಿ ಅವ್ಯವಸ್ಥೆಯ ಬಗ್ಗೆ ಮೂರು ತಿಂಗಳಿನಿಂದ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡುತ್ತಿದ್ದರೂ ಗಮನ ನೀಡಿಲ್ಲ. ಕೀಲು ಊತ ಹಾಗೂ ವಿಪರೀತ ನೋವಿನಿಂದ ಬಳಲುತ್ತಿದ್ದೇವೆ. ಹೆಚ್ಚಿನ ಚಿಕಿತ್ಸೆಗೆ ಆರ್ಥಿಕ ತೊಂದರೆಯಲ್ಲಿನ ಜನ ಇರುವ ವ್ಯವಸ್ಥೆಯಲ್ಲೆ ಕಾಲ ನೂಕುತ್ತಿದ್ದಾರೆ. ಆದರೆ ಅತೀವ ಕೀಲು ನೋವು ನಮ್ಮನ್ನು ಬಾಧಿಸುತ್ತಿದೆ. ಎಂತಹ ಜ್ವರ ಎಂದು ಆರೋಗ್ಯಾಧಿಕಾರಿಗಳೇ ಗ್ರಾಮಕ್ಕೆ ಬೇಟಿ ನೀಡಿ ಜನರ ಸಂಕಷ್ಟ ಹೇಳುವುದರೊಂದಿಗೆ ಸಮಸ್ಯೆ ಬಗೆಹರಿಸಬೇಕಿದೆ ಎನ್ನುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap