ಚಿಕ್ಕಮಗಳೂರು:
ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಜನವಿರೋಧಿ ನೀತಿ ಹಾಗೂ ರಾಜ್ಯದ ಇನ್ನಿತರೆ ಜ್ವಲಂತ ಸಮಸ್ಯೆಗಳ ಬಗ್ಗೆ ಸಕ್ರಿಯ ಪ್ರತಿಪಕ್ಷವಾಗಿ ಧ್ವನಿಯೆತ್ತಲಿದ್ದೇವೆ ಹೊರತು ಅನಗತ್ಯವಾಗಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸಭೆಗೆ ಶಾಸಕರು ಬರುವುದು ಜನರ ಪ್ರತಿನಿಧಿಯಾಗಿ ಯಾಗಿ. ಹೀಗಾಗಿ ಜನರ ಧ್ವನಿಯಾಗಿ ಕೆಲಸ ಮಾಡಬೇಕು ಎಂದರು.ಸಚಿವ ಸಿ.ಟಿ.ರವಿ ವಿರುದ್ಧ ಕಿಡಿಕಾರಿದ ಅವರು, ಸಿ.ಟಿ.ರವಿಗೆ ಎಂದಿಗೂ ಸತ್ಯ ಹೇಳಿ ಗೊತ್ತಿಲ್ಲ. ಅವರ ಮೈತುಂಬಾ ಇರುವುದು ಬರೀ ಸುಳ್ಳು. ಸುಳ್ಳನ್ನೇ ಮೈಗೂಡಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರಲ್ಲದೇ , ಬಿಜೆಪಿಯವರ ಅಭಿವೃದ್ಧಿಯಾಗಿದೆಯೇ ಹೊರತು ಕ್ಷೇತ್ರದ, ಜನರ ಅಭಿವೃದ್ಧಿಯಾಗಿಲ್ಲ. ಹಳ್ಳಿಯ ಜನರು ಇದನ್ನೇ ಹೇಳುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಕೇಂದ್ರದ ಬಜೆಟ್ ನಾಳೆ ಮಂಡನೆಯಾಗಲಿದ್ದು ಕಳೆದ ಬಾರಿ ಬಜೆಟ್ 27 ಲಕ್ಷ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದರು. ಈ ಬಗ್ಗೆ ನಾಳೆ ತಿಳಿಯಲಿದೆ. ಸ್ವರ್ಗ ಸೃಷ್ಟಿ ಮಾಡುತ್ತೇವೆ ಎಂದವರು ಈಗ ನರಕ ಸೃಷ್ಟಿಸಿದ್ದಾರೆ ಎಂದರು.
ಬಿಜೆಪಿ ಪ್ರಕಾರ ಜಿಡಿಪಿ ಶೇ 4.5 ಇದೆ.ನನ್ನ ಪ್ರಕಾರ ಶೇ. 2.5ರಷ್ಟು.10ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಈಗ ಲಕ್ಷಾಂತರ ಉದ್ಯೋಗ ಕಡಿತವಾಗಿದೆ. ದೇಶದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದನ್ನು ಮುಚ್ಚಿ ಹಾಕಲು ಸಿಎಎ, ಎನ್ ಅರ್ ಸಿ ಮೂಲಕ ಬೇರೆ ಕಡೆ ಸೆಳೆಯಲು ನಾಟಕ ವಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ