ತೋವಿನಕೆರೆ: ಎಸ್‍ಬಿಐ ಸೀಲ್ ಡೌನ್

ತೋವಿನಕೆರೆ
 
      ಗ್ರಾಮದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‍ನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.ಅನಾರೋಗ್ಯದಿಂದ ಹಲವು ದಿನಗಳ ಕಾಲ ರಜಾ ತೆಗೆದುಕೊಂಡಿದ್ದ ಸಿಬ್ಬಂದಿಗೆ ಕೊರೊನಾ ಸೊಂಕು ಈಗ ದೃಢ ಪಟ್ಟಿರುತ್ತದೆ. ಸೋಂಕಿತ ವ್ಯಕ್ತಿ ರಜಾ ಮೇಲಿರುವುದ ರಿಂದ ಗ್ರಾಹಕರು ಆತಂಕಕ್ಕೆ ಒಳಗಾಗಿಲ್ಲ. ಸಿಬ್ಬಂದಿಗೆ ಕೊರೊನಾ ಬಂದಿರುವ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರಿಗೆ ಬಿಟ್ಟರೆ ಸ್ಥಳೀಯ ಕಂದಾಯ, ಆರೋಗ್ಯ ಮತ್ತು ಗ್ರಾಮ ಪಂಚಾಯ್ತಿ ಯವರಿಗೆ ಯಾವ ಮಾಹಿತಿಯು ಇರಲಿಲ್ಲ.

    ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದ ನಂತರ ತಾಲ್ಲೂಕು ಅಡಳಿತಕ್ಕೆ ಮಾಹಿತಿ ನೀಡಿ ತಾತ್ಕಾಲಿಕವಾಗಿ ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲು ತಿರ್ಮಾನಿಸಲಾಯಿತು. ಪ್ರಥಮ ಹಾಗೂ ದ್ವಿತೀಯ ಸಂಪರ್ಕದ ವ್ಯಕ್ತಿಗಳನ್ನು ಕ್ವಾರೆಂಟ್ಯನ್ ಮಾಡಲಾಗಿದೆ. ಭಾನುವಾರ ಬ್ಯಾಂಕ್‍ನವರು, ಸೋಮವಾರ ಗ್ರಾಮ ಪಂಚಾಯ್ತಿಯವರು ಸ್ಯಾನಿಟೈಸ್ ಮಾಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap