ಬೆಂಗಳೂರು
ಮಾಜಿ ರಾಜ್ಯಸಭಾ ಸದಸ್ಯ ಕಾಂಗ್ರೆಸ್ ಮುಖಂಡ ಅನಿಲ್‍ಲಾಡ್ ಅವರನ್ನು ಗುಂಡಿಕ್ಕಿ ಕೊಲ್ಲುವುದಾಗಿ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಜೀವ ಬೆದರಿಕೆ ಯ ಮೊಬೈಲ್ ಸಂದೇಶ ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ವ್ಯವಹಾರಿಕ ಸಂಬಂಧ ಹೊಂದಿದ್ದ ಶಿವಕುಮಾರ್ ಸಾಲ ಪಡೆದಿದ್ದ ಹಣವನ್ನು ಹಿಂತಿರುಗಿಸಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಅನಿಲ್ ಲಾಡ್ ದೂರು ದಾಖಲಿಸಿದ್ದರು.ಇದಾದ ಕೆಲವೇ ದಿನಗಳ ನಂತರ ಕಳೆದ ಡಿ.5 ರಂದು ಅನಿಲ್‍ಲಾಡ್ ಅವರಿಗೆ ಮೊಬೈಲ್ ಮೆಸೇಜ್ ಕಳುಹಿಸಿರುವ ಭೂಗತ ಪಾತಕಿ ರವಿಪೂಜಾರಿ ಹೆಸರಲ್ಲಿ ಬೆದರಿಕೆ ಹಾಕಲಾಗಿದೆ.
ಜೀವ ಬೆದರಿಕೆ ಹಾಕಿರುವುದರಿಂದ ಶಿವಕುಮಾರ್ ಹಾಗೂ ರವಿ ಪೂಜಾರಿ ನಡುವಿನ ಸಂಬಂಧ ಏನು ಎನ್ನುವುದರ ಬಗ್ಗೆ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಗಣಿ ಉದ್ಯಮಿಯೂ ಆಗಿರುವ ಅನಿಲ್ ಲಾಡ್ 15 ಕೋಟಿ ರೂ. ಹಣವನ್ನು ಬೆಂಗಳೂರು ಮೂಲದ ಶಿವಕುಮಾರ್ ಅವರಿಗೆ ನೀಡಿದ್ದರು ಕೆಲದಿನಗಳ ನಂತರ ಹಣ ವಾಪಸ್ ಕೇಳಿದ್ದರು.
ಹಣ ಹಿಂದಿರುಗಿಸುವ ಬದಲಾಗಿ ಅನಿಲ್ ಲಾಡ್ ಅವರಿಗೆ ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ಅನಿಲ್ ಲಾಡ್ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ನಡುವೆ ವಿದೇಶದಲ್ಲಿ ಅಡಗಿ ಕುಳಿತಿರುವ ರವಿ ಪೂಜಾರಿ ಡಿಸೆಂಬರ್ 5ರಂದು ಜೀವ ಬೆದರಿಕೆ ಹಾಕಿದ್ದಾನೆ.
ರವಿ ಪೂಜಾರಿ ಹೆಸರಿನಲ್ಲಿ ಅಂತರಾಷ್ಟ್ರೀಯ ಸಂಖ್ಯೆಯಿಂದ ಬಂದಿರುವ ಮೆಸೇಜ್‍ನಲ್ಲಿ ಶಿವಕುಮಾರ್ ನೀಡಬೇಕಿದ್ದ ಹಣ ಮರೆತು ಬಿಡಿ. ಇಲ್ಲವಾದರೆ ನಿನ್ನನ್ನು ಗುಂಡಿಕ್ಕಿ ಕೊಲ್ಲುತ್ತೇನೆ ಎಂದು ರವಿ ಪೂಜಾರಿ ಬೆದರಿಕೆ ಹಾಕಿದ್ದಾನೆ. ಸದ್ಯ ಅನಿಲ್ ಲಾಡ್ ಗೃಹ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಪ್ರಕರಣದ ಕುರಿತು ತನಿಖೆಯನ್ನು ಮಾಡುವಂತೆ ಮನವಿ ಮಾಡಿದ್ದಾರೆ.
ಗೃಹ ಸಚಿವರ ಸೂಚನೆ
ಗೃಹ ಸಚಿವರು ಪೊಲೀಸ್ ಇಲಾಖೆಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಬೆದರಿಕೆ ಸಂದೇಶ ಬಂದಿರುವ ನಂಬರ್ ಅಂತರಾರಾಷ್ಟ್ರೀಯ ಸಂಖ್ಯೆ ಆಗಿರುವುದಿರಿಂದ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣದಲ್ಲಿ ರವಿಪೂಜಾರಿ ಮಧ್ಯಪ್ರವೇಶ ಮಾಡಿದ್ದು ಯಾಕೆ ಶಿವಕುಮಾರ್ ಹಾಗೂ ರವಿ ಪೂಜಾರಿ ನಡುವಿನ ಸಂಬಂಧ ಏನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುವ ಸಾಧ್ಯತೆ ಇದೆ. ಅಲ್ಲದೇ ಅನಿಲ್ ಲಾಡ್ ಹಾಗೂ ಶಿವಕುಮಾರ್ ನಡುವೆ ಯಾವ ರೀತಿಯ ವ್ಯವಹಾರ ನಡೆದಿದೆ ಎಬುವುದರ ಬಗ್ಗೆಯೂ ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ.
ಲಾಡ್ ಮನವಿ
ಈ ನಡುವೆ ಭೂಗತ ಪಾತಕಿ ರವಿ ಪೂಜಾರಿ ಜೀವ ಬೆದರಿಕೆಯ ಮೆಸೇಜ್ ಹಾಕಿದ್ದು ಸೂಕ್ತ ರಕ್ಷಣೆ ಹಾಗೂ ಕ್ರಮ ಜರಗಿಸುವಂತೆ ಕೋರಿ ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಕೇಂದ್ರ ವಿಭಾಗ ಡಿಸಿಪಿ ದೇವರಾಜ್ ಅವರಿಗೆ ಅನಿಲ್‍ಲಾಡ್ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಹಿಂದೆಯೂ ಅನಿಲ್ ಲಾಡ್ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಬೆದರಿಕೆಯ ಕುರಿತು ದೂರು ನೀಡಿದ್ದರು. ಈ ಸಂಬಂಧ ಎಫ್‍ಐಆರ್‍ದಾಖಲಿಸಿದ್ದ ಪೊಲೀಸರು, ಉದ್ಯಮಿಯಿಂದ ಬೆದರಿಕೆ ಎಂದು ನಮೂದಿಸಿದ್ದರು. ಇದೀಗ ರವಿ ಪೂಜಾರಿ ಕೂಡ ಬೆದರಿಕೆ ಹಾಕಿದ್ದಾನೆಂದು ಅನಿಲ್ ಲಾಡ್ ಡಿಸಿಪಿ ದೇವರಾಜ್ ಹಾಗೂ ಪರಮೇಶ್ವರ್‍ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ