ತಿಪಟೂರು
ತಾಲ್ಲೂಕಿನ ಹಾಲ್ಕುರಿಕೆ ಸಮೀಪವಿರುವ ಕಾಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.ಸುಮಾರು ಮೂರು ಸಾವಿರ ಎಕರೆಗಿಂತಲೂ ಹೆಚ್ಚಿರುವ ಹಾಲ್ಕುರಿಕೆ ಕಾಡಿಗೆ ಬೆಂಕಿ ತಗುಲಿದ್ದು, ಅಪಾರ ನಷ್ಟವಾಗಿದೆ. ಬೆಂಕಿ ನಂದಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಮುಂದಾಗುತ್ತಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದೆ.
ಮೊದಲೆ ಈ ಬಾರಿ ಬಿಸಿಲು ಹೆಚ್ಚಿದ್ದು, ಇಂತಹ ಸಂದರ್ಭದಲ್ಲಿ ಕಾಡಿಗೆ ಬೆಂಕಿ ಬಿದ್ದರೆ ಇದನ್ನು ಆರಿಸುವುದು ತುಂಬಾ ಕಷ್ಟ. ಕೆಲ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿದ್ದು, ನಮ್ಮ ಇಲಾಖೆಯ ಸಿಬ್ಬಂದಿಯ ಶ್ರಮದಿಂದ ಅಪಾರ ನಷ್ಟವಾಗುವುದನ್ನು ತಪ್ಪಿಸಲಾಗಿದೆ. ಬೆಂಕಿ ಹಚ್ಚಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಶಿಕ್ಷಿಸಲಾಗುವುದು. ದಯವಿಟ್ಟು ಈ ರೀತಿ ಯಾರು ಕೂಡ ಕಾಡಿಗೆ ಬೆಂಕಿ ಹಾಕಬೇಡಿ ಎಂದು ಅರಣ್ಯ ವಲಯಾಧಿಕಾರಿ ರಾಕೇಶ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ