ಮಂಗಳೂರು:
ಹಳೆ ಬಂದರು ಮೀನುಗಾರಿಕಾ ಡೆಕ್ ನಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ದೋಣಿಯನ್ನು ರಾತ್ರಿಹೊತ್ತಿನಲ್ಲಿ ಹಗ್ಗ ತುಂಡರಿಸಿ ಕಡಲಿಗೆ ಬಿಟ್ಟ ಘಟನೆ ವರದಿಯಾಗಿದೆ.
ಖಾಲಿಯಿದ್ದ ಬೋಟ್ ಸಮುದ್ರದಲ್ಲಿ ತೇಲಿಕೊಂಡು ಹೋಗಿ ತೀರದಿಂದ ಸ್ವಲ್ಪ ದೂರದಲ್ಲಿ ಬಂಡೆಗಳ ಬಂಡೆಗೆ ತಾಗಿ ಮುಳುಗಡೆಯಾಗಿದೆ . ಬಜಾಲ್ ನಿವಾಸಿಯಾದ ಮೌರಿಸ್ ಎಂಬುವವರಿಗೆ ಸೇರಿದ ಬೋಟ್ ಇದಾಗಿದ್ದು ಗುರುತು ಪತ್ತೆಯಾಗದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಅನುಮಾನಿಸಲಾದೆ.
ಈ ಕೃತ್ಯವನ್ನು ಗಾಂಜಾ ವ್ಯಸನಿಗಳು ಎಸಗಿರಬಹುದು ಎಂದು ಮೀನುಗಾರರು ಶಂಕೆ ವ್ಯಕ್ತಪಡಿಸಿದ್ದಾರೆ. ಬೋಟಿಗೆ ಸಾಕಷ್ಟು ಹಾನಿಯಾಗಿದ್ದು, ಇತರೇ ಬೋಟ್‍ಗಳ ಸಹಾಯದಿಂದ ದಡಕ್ಕೆ ಎಳೆದು ತರುವ ಪ್ರಯತ್ನ ನಡೆಸಿದ್ದರೂ ಕಡಲಿನ ಅಲೆಗಳ ಅಬ್ಬರಕ್ಕೆ ಬೋಟ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದಾಗಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ.ಬೋಟ್‍ನ ಹಗ್ಗ ತುಂಡರಿಸಿ ಬಿಟ್ಟ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಬೋಟ್ ಮಾಲೀಕರು ಬಂದರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.