ಚಿತ್ರದುರ್ಗ ಕ್ಷೇತ್ರದಲ್ಲಿ ಟಿಕೆಟ್ ಖಾತರಿಯ ಭರವಸೆ

ಚಿತ್ರದುರ್ಗ:

       ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಹದಿನೆಂಟು ಮಂದಿ ಆಕಾಂಕ್ಷಿಗಳಿದ್ದು, ಅದರಲ್ಲಿ ನಾನು ಕೂಡ ಒಬ್ಬ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಲಿಂಗಸೂರು ಮಾಜಿ ಶಾಸಕ ಮಾನಪ್ಪ ವಜ್ಜಲ್ ತಮ್ಮ ಇಂಗಿತ ವ್ಯಕ್ತಪಡಿಸಿದರು.

       ಐಶ್ವರ್ಯಫೋರ್ಟ್‍ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಐವರು ಶಾಸಕರು ಮತ್ತು ಬಿಜೆಪಿ.ಪಕ್ಷದ ವರಿಷ್ಟರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದನಾಗಿದ್ದೇನೆ. ಟಿಕೇಟ್ ಯಾರಿಗಾದರೂ ಕೊಡಲಿ ಎಲ್ಲರೂ ಒಗ್ಗಟ್ಟಾಗಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ನರೇಂದ್ರಮೋದಿಯನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡುವುದೇ ನಮ್ಮ ಗುರಿ ಎಂದು ಹೇಳಿದರು.

      ಚಿತ್ರದುರ್ಗ ಲೋಕಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಅವಕಾಶ ಸಿಗುವ ವಿಶ್ವಾಸ ಇರುವ ಕಾರಣ ಕ್ಷೇತ್ರಕ್ಕೆ ಬಂದಿದ್ದೇನೆ. ಕಳೆದ ಆರು ತಿಂಗಳಿಂದ ಇಡೀ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಜನಸಾಮಾನ್ಯರಿಂದ ನನಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ನನಗೆ ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸವೂ ಮೂಡಿದೆ ಎಂದು ಹೇಳಿದರು

       ಚಿತ್ರದುರ್ಗ ಪಾರ್ಲಿಮೆಂಟ್ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು ಯಾರು ಬೇಕಾದರೂ ಸ್ಪರ್ದಿಸಬಹುದು. ಸ್ಥಳೀಯರಿಗೆ ಟಿಕೆಟ್ ಕೊಡಿ ಎನ್ನುವುದು ತಪ್ಪುಲ್ಲ, ಹೊರಗಿನ ಗೆಲ್ಲುವ ಸಾಮಥ್ರ್ಯ ಇರುವ ವ್ಯಕ್ತಿಗೆ ಟಿಕೆಟ್ ಕೊಟ್ಟರೂ ತಪ್ಪೇನಿಲ್ಲ. ನಮಗೆ ಕ್ಷೇತ್ರದಲ್ಲಿ ಗೆಲುವು ಮುಖ್ಯ. ಮತ್ತೆ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ ಆಗಬೇಕು ಎನ್ನುವುದು ನಮ್ಮ ಮುಖ್ಯ ಗುರಿ. ಅದಕ್ಕಾಗಿ ನಾವು ಸಂಕಲ್ಪ ಮಾಡಿದ್ದೇವೆ ಎಂದು ಮಾನಪ್ಪ ವಜ್ಜಲ್ ಸ್ಪಷ್ಟ ಪಡಿಸಿದರು.

        ಕ್ಷೇತ್ರದಲ್ಲಿ ಹಲವು ಸುತ್ತು ಪ್ರವಾಸ ಮಾಡಿದ್ದು, ಎಲ್ಲಾ ಕಡೆಯೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಟಿಕೇಟ್ ಹಂಚಿಕೆ ವಿಚಾರವಾಗಿ ವರಿಷ್ಟರಿಗೆ ನನ್ನ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೋ ಎಂಬುದನ್ನು ಕಾದು ನೋಡುತ್ತಿದ್ದೇವೆ. ಲಿಂಗಸೂರಿನಲ್ಲಿ ಹತ್ತು ವರ್ಷ ಶಾಸಕನಾಗಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿರುವುದರಿಂದ ಮಾನಪ್ಪ ವಜ್ಜಲ್ ಎಂದು ನನ್ನನ್ನು ಯಾರು ಬೇಕಾದರೂ ಗುರುತಿಸುತ್ತಾರೆ. ಎಲ್ಲಾ ಜಾತಿಯ ಮತದಾರರ ವಿಶ್ವಾಸವನ್ನು ಗಳಿಸಿದ್ದೇನೆ ಎಂದರು
ಪ್ರತಿ ಹಳ್ಳಿಗಳಲ್ಲಿಯೂ ಸಿ,ಸಿ.ರಸ್ತೆ ಮಾಡಿಸಿದ್ದೇನೆ.

        ಜಿಲ್ಲೆಯ ಐವರು ಬಿಜೆಪಿ.ಶಾಸಕರು ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದನಾಗಿದ್ದೇನೆ. ಟಿಕೇಟ್ ನನಗೆ ನೀಡಿದರೂ ಸಂತೋಷ. ಬೇರೆಯವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು ಪರವಾಗಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸಿಕೊಳ್ಳುವುದಾಗಿ ಭರವಸೆ ನೀಡಿದರು.

       ಲಿಂಗಸೂರಿನಲ್ಲಿ ನಾನು ಶಾಸಕನಾಗಿದ್ದಾಗ 501 ಜೋಡಿ ಸಾಮೂಹಿಕ ಲಗ್ನ ಮಾಡಿಸಿ ಲಕ್ಷಾಂತರ ಮಂದಿಗೆ ಅನ್ನಸಂತರ್ಪಣೆ ಮಾಡಿದ್ದೇನೆ. 101 ದೇವಸ್ಥಾನಗಳನ್ನು ಜೀರ್ಣೋದ್ದಾರಗೊಳಿಸಿದ್ದೇನೆ. ಸ್ವಂತ ಖರ್ಚಿನಲ್ಲಿ ನೇತ್ರ ತಪಾಸಣೆ ನಡೆಸಿ ಉಚಿತವಾಗಿ ಲೈನ್ಸ್‍ಗಳನ್ನು ಅಳವಡಿಸಿದ್ದೇನೆ. ನಾಲ್ಕು ಕಡೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಹಾಕಿಸಿದ್ದೇನೆ. ನನ್ನ ಕ್ಷೇತ್ರದಲ್ಲಿ ನೀರಾವರಿ ಯೋಜನೆಯನ್ನು ಹೋರಾಟ ಮಾಡಿ ಅನುಷ್ಟಾನಕ್ಕೆ ತಂದಿದ್ದೇನೆ.

       ಈ ವಿಚಾರದಲ್ಲಿ ನನಗೂ ಸಾಕಷ್ಟು ಅನುಭವವಿದೆ ಎಂದು ಹೇಳಿದರು ಕಳೆದ ಆರು ತಿಂಗಳಿನಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಜನಸಂಪರ್ಕವಿಟ್ಟುಕೊಂಡಿದ್ದೇನೆ. ವರಿಷ್ಟರು ಟಿಕೇಟ್ ನೀಡಿದರೆ ಸ್ಪರ್ಧಿಸುತ್ತೇನೆ. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಜನಸೇವೆ ಮಾಡಿಕೊಂಡಿರುತ್ತೇನೆ. ಭದ್ರಾಮೇಲ್ದಂಡೆ ಯೋಜನೆ ವಿಳಂಭವಾಗಿದೆ. ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸಬೇಕಾಗಿದೆ. ಯೋಜನೆಯ ಕಾಮಗಾರಿ ಚುರುಕಿನಿಂದ ನಡೆಯುತ್ತಿಲ್ಲ ಎಂದು ಹೇಳಿದರು

      ಚಿತ್ರದುರ್ಗ ಜಿಲ್ಲೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಕುಡಿಯುವ ನೀರು, ಮೂಲಭೂತ ಸೌಲಬ್ಯಗಳ ಕೊರತೆ ಜಿಲ್ಲೆಯಲ್ಲಿ ಸಾಕಷ್ಟು ಇದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ಗೆದ್ದರೆ ಚಿತ್ರದುರ್ಗ ಕ್ಷೇತ್ರವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ವಾಗ್ದಾನ ಮಾಡಿದರು.

        ಪಕ್ಷದ ನಾಯಕರು ಈ ಬಾರಿ ಇಲ್ಲಿ ನನಗೆ ಅವಕಾಶ ಮಾಡಿಕೊಡತ್ತಾರೆ ಎನ್ನುವ ಭರವಸೆ ಇಂದ ಬಂದಿದ್ದೇನೆ. ಅವರು ಟಿಕೆಟ್ ಕೊಟ್ಟರೆ ಗೆಲ್ಲುತ್ತೇನೆ. ಪಕ್ಷದ ನಾಯಕರು ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ನಾನು ಬದ್ದನಾಗಿದ್ದೇನೆ. ಚುನಾವಣೆ ಬಳಿಕವೂ ಇಲ್ಲೇ ಇದ್ದು ಜನ ಸೇವೆ ಮಾಡುವುದಾಗಿಯೂ ಮಾನವಪ್ಪ ವಜ್ಜಲ್ ನುಡಿದರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲಂಸೀತಾರಾಮರೆಡ್ಡಿ, ರುದ್ರಮುನಿ, ಗೋವಿಂದರೆಡ್ಡಿ, ಪಕ್ಷದ ಮುಖಂಡರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೆದ್ರೆ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link