ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ: ಶೇ.100 ನಿಗದಿಗೆ ಕಾಲಮಿತಿ ಅಗತ್ಯ

ತುಮಕೂರು:

     ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಒಂದಾಗಿದೆ. ಚುನಾವಣೆಗೆ ಮೊದಲು ಜಾರಿ ಮಾಡಿದ ಈ ಯೋಜನೆಯಿಂದ 5 ಎಕರೆ ಜಮೀನು ಹೊಂದಿರುವ ಪ್ರತಿಯೊಬ್ಬ ರೈತರಿಗೆ ವಾರ್ಷಿಕ ರೂ.6000 ರೈತರ ಖಾತೆಗೆ ನೇರವಾಗಿ ತಲಾ ರೂ.2000 ದಂತೆ ಮೂರು ಕಂತುಗಳಲ್ಲಿ ಜಮಾ ಆಗಲಿದೆ.

      ತುಮಕೂರು ಸಂಸದರಾದ ಜಿ.ಎಸ್.ಬಸವರಾಜು ಅವರು ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ ಅವರೊಂದಿಗೆ ನಡೆಸಿದ ಸಭೆಯಲ್ಲಿ ಈ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಸುಮಾರು 310699 ಕುಟುಂಬಗಳು ಈ ಯೋಜನೆಯಿಂದ ಲಾಭ ಪಡೆಯಬಹುದಾಗಿದೆ. ಈವರೆಗೆ ತುಮಕೂರು ಜಿಲ್ಲೆಯ ಕೇವಲ 20029 ಜನರಿಗೆ ಮಾತ್ರ ಮೋದಿ ದುಡ್ಡು ತಲುಪಿದೆ.

      ಮೋದಿಯವರ 2ನೇ ಅವಧಿಯ ಮೊದಲ ಸಚಿವ ಸಂಪುಟದಲ್ಲಿ ಎಲ್ಲಾ ರೈತರಿಗೂ ಈ ಯೋಜನೆಯನ್ನು ವಿಸ್ತರಿಸಿದ್ದಾರೆ. ಆದ್ದರಿಂದ ಇನ್ನೂ ಹೆಚ್ಚಿನ ರೈತರಿಗೆ ಅನುಕೂಲವಾಗಲಿದೆ ಎಂಬ ಮಾಹಿತಿಯನ್ನು ಪಡೆದ ಸಂಸದರು ಶೇ.100 ಜಾರಿಗೆ ಸಂಬಂಧಿಸಿದ ಅಧಿಕಾರಿಗಳು ಸಭೆ ನಡೆಸಿ ಸ್ವಯಂ ಕಾಲಮಿತಿ ನಿಗದಿಗೊಳಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

      ರೈತ ಸಂಪರ್ಕ ಕೇಂದ್ರಗಳು, ಬಾಪೂಜಿ ಕೇಂದ್ರ ಸೇವಾ ಕೇಂದ್ರಗಳು ಮತ್ತು ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪ್ರತಿ ಗ್ರಾಮಗಳಲ್ಲಿನ ಅರ್ಹ ರೈತರ ಪಟ್ಟಿಯನ್ನು  ಎನ್ನುವ ವಿಶಿಷ್ಟ ಗುರುತಿನ ಸಂಖ್ಯೆಯೊಂದಿಗೆ ಪ್ರಕಟಿಸಬೇಕು.

     ವಿಶೇಷ ಎಂದರೆ ಪ್ರತಿ ಗ್ರಾಮ ಲೆಕ್ಕಿಗರ ವ್ಯಾಪ್ತಿಯಲ್ಲಿ ಶೇಕಡಾವಾರು ಪಟ್ಟಿ ಪೋರ್ಟ್‍ನಲ್ಲಿ ದೊರೆಯಲಿದೆ. ಆದ್ದರಿಂದ ಈ ಜವಾಬ್ದಾರಿಯ ಹೊಣೆಗಾರಿಕೆ ಗ್ರಾಮ ಲೆಕ್ಕಿಗರ ಜೊತೆಗೆ ಆ ವ್ಯಾಪ್ತಿಯ ಅಧಿಕಾರಿಗಳು ಹೊರಬೇಕಾಗುತ್ತದೆ. ಆದ್ದರಿಂದ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ಹೋಗಿ ಮೋದಿ ದುಡ್ಡನ್ನು ಪಡೆಯಲು ಸಹಕರಿಸಲು ಸೂಚಿಸಿದರು. ದಿಶಾ ಸಮಿತಿಯಲ್ಲಿ ಪ್ರತಿ ಗ್ರಾಮ ಲೆಕ್ಕಿಗರ ಶೇಕಡವಾರು ಪಟ್ಟಿ ಸಿದ್ಧಪಡಿಸಿ ಪ್ರಗತಿ ಪರಿಶೀಲನೆ ನಡೆಸಲು ಖಡಕ್ ಸೂಚನೆ ನೀಡಿದ್ದಾರೆ.

    ಗ್ರಾಮ ಲೆಕ್ಕಿಗರ ವ್ಯಾಪ್ತಿಯಲ್ಲಿನ ರೈತರ ಸೋಶಿಯಲ್ ಮೀಡಿಯಾ ಗ್ರೂಪ್ ರಚಿಸಿ, ರೈತರಿಗೆ ಆಗಿದ್ದಾಂಗ್ಗೆ ಎಲ್ಲಾ ಮಾಹಿತಿಯನ್ನು ಪ್ರಕಟಿಸಿದರೆ ರೈತರಿಗೆ ಅನುಕೂಲವಾಗಲಿದೆ. ಇದು ಮೋದಿಜಿಯವರ ಡಿಜಿಟಲ್ ಇಂಡಿಯಾಗೆ ಪೂರಕವಾಗಲಿದೆ. ಈ ಬಗ್ಗೆಯೂ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು.

    ಪಕ್ಷದ ಕಾರ್ಯಕರ್ತರಿಗೆ ಕರೆ: ಬಿಜೆಪಿ ಪಕ್ಷದ ಪ್ರತಿ ಗ್ರಾಮ ಮಟ್ಟ/ಬೂತ್ ಸಮಿತಿ ಪದಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಅರ್ಹ ರೈತರಿಗೆ ಯೋಜನೆಯ ಲಾಭ ಪಡೆಯಲು ರೈತರಿಗೆ ಮೋದಿ ದುಡ್ಡು ಎಂಬ ಜನಜಾಗೃತಿ ಆಂದೋಲನ ಮಾಡಲು ಕರೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ