ಸಮಯ ಹೊಂದಾಣಿಕೆ ನಿಮ್ಮಕೈಯ್ಯಲ್ಲಿದೆ: ಕೆ.ಬಿ. ಜಯಣ್ಣ

ತುಮಕೂರು:

      ನೀವು ಮಾಡಬೇಕಿರುವ ಸಾಧನೆಯೇನು ಎಂಬುದನ್ನು ತಿಳಿಯಬೇಕಾದರೆ ನಿಮ್ಮ ಅವಶ್ಯಕತೆಗಳನ್ನು ತಿಳಿಯಿರಿ.ಅವುಗಳನ್ನು ಪೂರೈಸುವಲ್ಲಿ ಸಂಸ್ಥೆಯು ಸದಾ ಶ್ರಮಿಸುತ್ತದೆ. ಓದುವ ಹಂಬಲ ನಿಮಗಿದ್ದರೆ ಸಮಯವನ್ನು ಹೊಂದಿಸುವುದು ಕಷ್ಟವಲ್ಲ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರೂ ಅಧ್ಯಕ್ಷರೂ ಆದ ಕೆ.ಬಿ. ಜಯಣ್ಣ ಹೇಳಿದರು.

       ಅವರು ವಿದ್ಯಾನಿಧಿ ಕಾಲೇಜಿನಲಿ ್ಲಆಯೋಜಿಸಲಾಗಿದ್ದ ರ್ಯಾಂಕ್ ಸ್ಟೂಡೆಂಟ್ ಲರ್ನಿಂಗ್ ಸಿಸ್ಟಮ್ ನ ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

       ಇದೇ ಸಂದರ್ಭದಲ್ಲಿ ಮಾತನಾಡಿದಕಾಲೇಜಿನ ಪ್ರಾಂಶುಪಾಲ ಸಿದ್ಧೇಶ್ವರ ಸ್ವಾಮಿಎಸ್‍ಆರ್, ‘ನೀವು ಗಳಿಸುವ ಜ್ಞಾನ ನಿಮ್ಮ ಬದುಕಿಗೆ ಪೂರಕವಾಗಿ ಉಳಿಯುತ್ತದೆ.ಮಾಡಬೇಕಾದ ಕೆಲಸವನ್ನು ಮುಂದೂಡುವ ಪ್ರವೃತ್ತಿಯನ್ನು ಬಿಡಿ, ಇಂದಿನ ಕೆಲಸ ಇಂದೇ ಮಾಡಬೇಕು ಎಂಬ ಛಲ ಇದ್ದರೆ ಮಾತ್ರ ಸಾಧನೆ ಸಾಧ್ಯ’ ಎಂದರು.

        ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧೆಇರುವುದು ಒಳ್ಳೆಯದು.ಇದರಿಂದಅವರಲ್ಲಿನ ಸಾಮಥ್ರ್ಯ ವೃದ್ಧಿಸುತ್ತದೆ.ನಿಮ್ಮ ಪ್ರಯತ್ನ, ಉಪನ್ಯಾಸಕರ ಸೂಕ್ತ ಮಾರ್ಗದರ್ಶನಇದ್ದರೆಯಶಸ್ಸುಖಂಡಿತಾ. ಹಳೆಯ ವಿಧಾನಗಳನ್ನು ಬಿಟ್ಟುಕಾಲಕ್ಕನುಗುಣವಾಗಿ ಹೊಸ ತಂತ್ರಜ್ಞಾನದ ಬಳಕೆಯನ್ನು ನಾವು ಕಲಿಯಬೇಕು. ಪ್ರಾಮಾಣಿಕ ಪರಿಶ್ರಮಕ್ಕೆ ಫಲ ದೊರೆತೇದೊರೆಯುತ್ತದೆಎಂದು ವಿಜ್ಞಾನ ವಿಭಾಗದ ಸಂಯೋಜಕರಾದ ಜಿ ವಿ ರಮಣರೆಡ್ಡಿ ಹೇಳಿದರು.

        ರ್ಯಾಂಕ್ ಸ್ಟೂಡೆಂಟ್‍ಡಾಟ್‍ಕಾಮ್ ನ ಕಾರ್ಯನಿರ್ವಾಹಕ ಪ್ರಬಂಧಕರಾದರಘುನಾಥ್ ಮಾತನಾಡಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದಿಂದಾಗುವ ಪ್ರಯೋಜನಗಳನ್ನು ವಿವರಿಸಿದರು. ಈ ಸಂದರ್ಭಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿ/ ನಿಯರನ್ನುಅಭಿನಂದಿಸಲಾಯಿತು. ಉಪನ್ಯಾಸಕ ವೃಂದದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಪ್ರಜ್ಞಾಕಾರ್ಯಕ್ರಮ ನಿರೂಪಿಸಿದರು. ನಿತ್ಯಶ್ರೀ ಪ್ರಾರ್ಥಿಸಿ, ನಿಶಾ ಜೆ ಹೊಸಮನಿ ಸ್ವಾಗತಿಸಿ, ನಿರಂಜನ್ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link