ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದ ತಿಪ್ಪಾರೆಡ್ಡಿ

ಚಿತ್ರದುರ್ಗ

     ರಾಜ್ಯ ಬಿಜೆಪಿ ನಾಯಕತ್ವದ ಬಗ್ಗೆ ಭಿನ್ನಮತ ಭುಗಿಲೆದ್ದಿದ್ದು, ಅನೇಕ ಹಿರಿಯ ಶಾಸಕರು ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈಗಾಗಲೇ ಹಲವು ಶಾಸಕರು ಗುಪ್ತ ಸಭೆ ನಡೆಸಿ ಸಿಎಂ ಬದಲಾವಣೆಗೆ ವರಿಷ್ಟರ ಮೇಲೆ ಒತ್ತಡ ಹೇರುವ ಕಾರ್ಯತಂತ್ರ ರೂಪಿಸಿದ್ದಾರೆ.

     ಈ ನಡುವೆ ಚಿತ್ರದುರ್ಗದಲ್ಲಿ ಹಿರಿಯ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರೂ ಸಹ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ. ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ ಇರುವುದು ಸತ್ಯವೆಂದು ಬಹಿರಂಗ ಪಡಿಸಿದ್ದಾರೆ

     ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ಪಕ್ಷದಲ್ಲಿನ ಹಿರಿಯ ಶಾಸಕರನ್ನು ಕಡೆಗಣಿಸಿದ್ದಾರೆ. ಸಚಿವ ಸ್ಥಾನ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ತೋರಬೇಕಾದ ಮುಖ್ಯಮಂತ್ರಿಗಳೇ ತಮಗೆ ಬೇಕಾದವರಿಗೆ ಸಚಿವ ಸ್ಥಾನ ಹಂಚಿಕೆ ಮಾಡಿದ್ದಾರೆ. ಅಲ್ಲದೆ ಶಾಸಕರಿಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ.

     ಇದೇ ಕಾರಣದಿಂದಾಗಿ ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಂಡಿರುವುದು ನಿಜ ಎಂದು ತಿಪ್ಪಾರೆಡ್ಡಿ ಹೇಳಿದ್ದಾರೆ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಬಿಜೆಪಿ ಶಾಸಕರಲ್ಲಿ ಅಸಮಧಾನ ಮತ್ತು ಭಿನ್ನಮತ ಇರುವುದು ಸತ್ಯ. ಬಹುತೇಕ ಶಾಸಕರಿಗೆ ಸರ್ಕಾರದಲ್ಲಿ ಮನ್ನಣೆ ಸಿಗುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕರನ್ನು ಕಡೆಗಣಿಸಿದ್ದಾರೆ.ಮೂರು ವರ್ಷ ಅಧಿಕಾರದಲ್ಲಿ ಇರುತ್ತೇವೆ ಎಂದು ಮನಸ್ಸಿಗೆ ಬಂದಂತೆ ಅಡಳಿತ ನಡೆಸುತ್ತಿದ್ದಾರೆ ಎನ್ನುವ ಭಾವನೆ ವ್ಯಕ್ತವಾಗುತ್ತಿದೆ ಎಂದರು

    ಬಿಜೆಪಿ ಸರ್ಕಾರದ ಮಂತ್ರಿಮಂಡಲದಲ್ಲಿ ಬೇಕಾದವರಿಗೆ ಸ್ಥಾನ ನೀಡಿ, ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ. ಸಚಿವ ಸ್ಥಾನ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲದೆ ನೀಡಲಾಗಿದೆ. ಅನೇಕ ಸಮಾಜದ ಹಿರಿಯ ಶಾಸಕರಿಗೆ ಸ್ಥಾನ ಸಿಕ್ಕಿಲ್ಲ. ಹೀಗಾದರೆ ಸರ್ಕಾರ ನಡೆಸುವುದು ಕಷ್ಟ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ

    ಸರ್ಕಾರದ ಬಗ್ಗೆ ಅಸಮಧಾನ ಹೊಂದಿರುವ ಕೆಲವು ಶಾಸಕರು ಸಭೆ ನಡೆಸಿದ್ದಾರೆ. ಕೊರೋನಾ ಇರುವ ಕಾರಣ ಹೆಚ್ಚು ಶಾಸಕರು ಸೇರಿಲ್ಲ. ಸಭೆ ನಡೆಸಿದ ಕೆಲವು ಶಾಸಕರು ನನ್ನೊಂದಿಗೂ ಮಾತನಾಡಿದ್ದಾರೆ ಎಂದರು

ಮಂತ್ರಿಸ್ಥಾನಕ್ಕೆ ಪಟ್ಟು;

     ಜನಸಂಘದಿಂದ ಬಜೆಪಿಯವರೆಗೂ ಅನೇಕ ಮಹನೀಯರು ದೇಶ, ಪಕ್ಷ ಬಲವರ್ಧನೆಗೆ ಶ್ರಮಿಸಿದ್ದಾರೆ. ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಆಶಯಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳುವುದಿಲ್ಲ ಎನ್ನುತ್ತಲೇ ನಮ್ಮಂತಹ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕಾದ್ದು ಪಕ್ಷದ ಕರ್ತವ್ಯ ಎಂದು ತಿಪ್ಪಾರೆಡ್ಡಿ ಹೇಳಿದರು

     ಈ ಹಿಂದೆ ಮಂತ್ರಿಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಸಾದ್ಯವಾಗಲಿಲ್ಲ. ಕಾಂಗ್ರೆಸ್ ಕೆಲ ಶಾಸಅಕರ ತ್ಯಾಗದಿಂದ ಸರ್ಕಾರ ರಚನೆ ಆದಗಲೂ ಮಂತ್ರಿ ಸ್ಥಾನ ದೊರೆಯುತ್ತದೆ ಎಂಬ ವಿಶ್ವಾಸವಿತ್ತು. ಪಕ್ಷದ ಹಿರಿಯುರು ನೀಡಿದ್ದ ಭರವಸೆ ಈಡೇರಲಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದರು ಮುಂದಿನ ದಿನಗಳಲ್ಲಿ ದೊರೆಯುವ ವಿಶ್ವಾಸವಿದೆ. ನಮ್ಮ ನಾಯಕರಾಗಿರುವ ಯಡಿಯೂರಪ್ಪ ಮತ್ತು ವರಿಷ್ಠರು ನಮ್ಮ ಅಭಿಪ್ರಾಯಗಳಿಗೆ ಸ್ಪಂದಿಸುತ್ತಾರೆನ್ನುವ ವಿಶ್ವಾಸವಿದೆ ಎಂದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap