ತಿಪಟೂರು:
ಜಲಶಕ್ತಿ ಅಭಿಯಾನದಡಿ ಇಂದು ಬೆಳಗ್ಗೆ 6.30ಕ್ಕೆ ಕರೆಕೋಡಿ ರಸ್ತೆಯಿಂದ ಎ.ಪಿ.ಎಂ.ಸಿ ಯಾರ್ಡ್‍ನಲ್ಲಿನ ಗಣಪತಿ ದೇವಾಲಯದ ವರೆಗೆ ನಗರಸಭೆಯ ಸಿಬ್ಬಂದಿ ಮತ್ತು ಕೆಲವು ಸಾರ್ವಜನಿಕರು ವಾಕಥಾನ್‍ನಲ್ಲಿ ಭಾಗವಹಿಸಿ ಪರಿಸರಸಂರಕ್ಷಣೆ ಮತ್ತು ನೀರನ್ನು ಮಿತವಾಗಿ ಬಳಸಬೇಕೆಂದು ಘೋಷಣೆ ಕೂಗುತ್ತಾ ಭಾಗವಹಿಸಿದ್ದರು.
ನಗರದಲ್ಲಿ ಒಂದು ಕಡೆ ಜಲಶಕ್ತಿ ಅಭಿಯಾನದಲ್ಲಿ ನೀರನ್ನು ಉಳಿಸಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ನಗರದಲ್ಲಿ ನಡೆಯುತ್ತಿರುವ ಪೈಪ್‍ಲೈನ್ ಕಾಮಗಾರಿ, ಯು.ಜಿ.ಡಿ ಕಾಮಗಾರಿಗಳಿಂದ ನಗರದೆಲ್ಲಡೆ ಕುಡಿಯುವ ನೀರಿನ ಪೈಪ್‍ಲೈನ್‍ಗಳು ಹೊಡೆದು ಚಿತ್ರವಾಗಿದ್ದು ಸಾಕಷ್ಟು ನೀರು ಪೋಲಾಗಿ ಹೋಗುತ್ತಿದ್ದರು ಅದರ ಕಡೆಗಮನಹರಿಸದೆ ಸರ್ಕಾರವು ಕಡ್ಡಾಯವಾಗಿ ಮಾಡಲೇ ಬೇಕಾಗಿರುವುದರಿಂದ ದಾಖಲಾತಿಗೋಸ್ಕರ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆಂಬುದು ಕಾಣಬಹುದಾಗಿದೆ.
ಇನ್ನು ನಗರದಲ್ಲಿ ಯಾವಯಾವ ಕಾಮಗಾರಿಗಳು ನಡೆಯುತ್ತಿವೆಯೆಂಬುದು ನಗರಸಭೆಯವರಿಗೆ ಗೊತ್ತಿದೆಯೋ ಗೊತ್ತಿಲ್ಲವೆಂಬಂತಿದ್ದಾರೆ. ನಗರದ ರಸ್ತೆಗಳು ಸಂಪೂರ್ಣವಾಗಿ ಹಾಳಗಿರುವ ಬಗ್ಗೆ, ಹಾಳಾಗಿರುವ ರಸ್ತೆಗಳು ಕಳಪೆಕಾಮಗಾರಿ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಗಮನಹರಿಸುತ್ತಿಲ್ಲ, ಮತ್ತೆ ಹಾಳಾದ ರಸ್ತೆಯಲ್ಲಿ ವಾಹನಗಳು ಸಿಕ್ಕಿಕೊಂಡು ಸವಾರರ ಸಮಸ್ಯೆಯಂತು ಹೇಳತೀರದು.
ಇನ್ನೂ ಹಾಲ್ಕುರಿಕೆ ರಸ್ತೆಯಲ್ಲಂತು ಪೈಪ್‍ಗಳು ಹೊಡೆದು ನೀರು ಪ್ರವಾಹೋಪಾದಿಯಲ್ಲಿ ರಸ್ತೆಯಲ್ಲಿ ಹರಿಯುತ್ತಿದ್ದು ನಗರಸಭೆಯ ಅಧಿಕಾರಿಗಳು ಸ್ವಲ್ಪವಾದರು ಗಮನ ಹರಿಸಿದರೆ ನಿಜವಾದ ಜಲಶಕ್ತಿ ಅಭಿಯಾನಕ್ಕೆ ಅರ್ಥಬರುತ್ತದೆ. ಜೊತೆ ಬೀದಿದೀಪಗಳು ಸರಿಯಾಗಿ ಉರಿಯದೆ ಸಾರ್ವಜನಿಕರು ಪರಪಾಟಲು ಪಡುತ್ತಿದ್ದರು ನಗರಸಭೆಯ ಸಿಬ್ಬಂದಿಗೆ ಇದ್ಯಾವೂದು ಕಾಣದೆ ಬರಿ ಜಲಶಕ್ತಿ ಅಭಿಯಾನವೆಂದು ಹೋಡಾಡುತ್ತಿರುವುದು ವಿಪರ್ಯಾಸವಾಗಿದೆ.
ಸಾರ್ವಜನಿಕರು ಇರುವಕಡೆ ಯಾವುದಾರೂ ಅಭಿಯಾನಮಾಡಿದರೆ ಯಾರಿಗಾದರು ಅರ್ಥವಾಗುತ್ತದೆ. ಆದರೆ ನಗರಸಭೆಯವರು ಮಾತ್ರ ಏಕೋ ಸಾರ್ವಜನಿಕರನ್ನು ಕಂಡರೆ ಆಗದವರಂತೆ ಯಾರು ಇಲ್ಲದ ಪ್ರದೇಶಗಳಲ್ಲಿ ಪ್ರಚಾರಮಾಡುತ್ತಿರುವುದು ಎಷ್ಟು ಸರಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
