ರಾಷ್ಟ್ರೀಯ ಆರೋಗ್ಯ ಸ್ವಚ್ಛತಾ ಅಭಿಯಾನದಲ್ಲಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ

ತಿಪಟೂರು :

          ರಾಷ್ಟ್ರೀಯ ಆರೋಗ್ಯ ಸ್ವಚ್ಚತಾ ಅಭಿಯಾನದ ಕಾರ್ಯಕ್ರಮದ ಅಡಿಯಲ್ಲಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲೆಯಲ್ಲಿ ಪ್ರಥಮಸ್ಥಾನ ಹಾಗೂ ರಾಜ್ಯದಲ್ಲಿ 11ನೇ ಸ್ಥಾನವನ್ನು ಪಡೆದಿದೆ.

        ಇಂದು ಬೆಂಗಳೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನೀಡುವ 2017-18 ನೇ ಸಾಲಿನ “ಕಾಯಕಲ್ಪ” ಪ್ರಶಸ್ತಿಯ ವಿತರಣಾ ಸಮಾರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಶಿವಾನಂದಪಾಟೀಲ್‍ರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ ತಾಲ್ಲೂಕು ಮುಖ್ಯ ಆಡಳಿತ ವೈದ್ಯಾಧಿಕಾರಿ ಟಿ.ಎ.ಈಶ್ವರಪ್ಪ ಇಂದು ನಮಗೆ ಪ್ರಶಸ್ತಿ ಬಂದಿರುವು ಸಂತೋಷವನ್ನುಂಟು ಮಾಡುವುದರ ಜೊತೆಗೆ ನಮ್ಮ ಮೇಲಿನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಪ್ರಶಸ್ತಿ ಬರುವುದಕ್ಕೆ ಶ್ರಮಿಸಿದ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link