ಚನ್ನಗಿರಿ
ದೇಶದಲ್ಲಿ ಪೌರತ್ವ ಕಾಯಿದೆ ಜಾರಿಯಾಗಲು ಪ್ರಧಾನಿ ಮೋದಿ, ಹಾಗೂ ಅಮಿತ್ ಷಾ ಕಾರಣರಲ್ಲಾ ಬದಲಾಗಿ ಅವರ ಹಿಂದೆ ಕಾಣದ ಕೈಗಳು ಕೆಲಸ ಮಾಡಿಸಿದ್ದಾವೆ ಎಂದು ವಿಧಾನ ಪರಿಷತ್ ಸದಸ್ಯ ಸಿ,ಎಂ ಇಬ್ರಾಹಿಂ ಅಭಿಪ್ರಾಯ ಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ಕಾಯಿದೆ ತಿದ್ದುಪಡಿ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಸಂವಿಧಾನ ತೆಗೆದುಹಾಕುತ್ತಾರೆ ಇದರಲ್ಲಿ ಯಾವುದೇ ಅನುಮಾನವಿಲ್ಲ, ಈಗಾಗಲೇ ಆನಂತ್ ಕುಮಾರ್ ಹೆಗಡೆ ಮತ್ತು ತೇಜಸ್ವಿಸೂರ್ಯ ಅವರು ನಾವು ಬಂದಿರೊದೇ ಸಂವಿಧಾನ ಬದಲಾಯಿಸಲು ಎಂದು ಹೇಳಿದ್ದಾರೆ,
ಸಂವಿಧಾನ ತೆಗೆದುಹಾಕಿ ನಮ್ಮದೇ ಸಂವಿಧಾನ ಅಂದರೆ ಚರ್ತುವರ್ಣ ಪಧ್ದತಿಯನ್ನು ಈ ರಾಷ್ಟ್ರದಲ್ಲಿ ಜಾರಿಗೆ ತರಬೇಕೆಂಬುದು ಇವರ ಗುರಿಯಾಗಿದ್ದು, ಇದರ ವಿರುಧ್ದ ರಾಷ್ಟ್ರದಲ್ಲೇ ಈಗಾಗಲೇ ಪ್ರತಿಭಟನೆಗಳು ನಡೆಯುತ್ತಿದ್ದು, ಅಂತರ್ ರಾಷ್ಟ್ರೀಯ ಸಂಸ್ಥೆಯಾದ ಸಿ.ಎಸ್.ಡಿ.ಎ ಸುಮಾರು 300 ಲೋಕಸಭಾ ಕ್ಷೇತ್ರಗಳಲ್ಲಿ ಸರ್ವೇ ಮಾಡಿದ್ದು, ಈ ದೇಶ ಹಿಂದೂ ದೇಶ ಆಗಬೇಕು ಅನ್ನುವವರ ಸಂಖ್ಯೆ 17% ಇದ್ದು, ಇನ್ನುಳಿದ ಜನತೆ ಇಲ್ಲ ಇದು ಜ್ಯಾತ್ಯಾತೀತ ರಾಷ್ಟ್ರವಾಗಬೇಕು,
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಅತ್ಯಂತ ಶ್ರೇಷ್ಠವಾದದ್ದು, ಮಹಾತ್ಮ ಗಾಂಧಿ ಅವರು ರಾಷ್ಟ್ರಪೀತ ನಮ್ಮ ದೇಶದ ತತ್ವ ಸಿಧ್ಧಾಂತದ ಆದಾರದ ಮೇಲೆ ನಿಂತಿರುವಂತಹವರು ಎಂದಿದ್ದಾರೆ, ಇದೀಗಾ ದೆಹಲಿಯ ಚುನಾವಣೆಯಲ್ಲಿ ಇದೇ ವಿಚಾರವನ್ನು ಮಂಡಿಸಿದ್ದು ಫಲಿತಾಂಶದ ಬಳಿಕ ಸಂಘಪರಿವಾರಗಳು ಮೋದಿಯವರನ್ನು ಇಟ್ಟುಕೊಳ್ಳುತ್ತಾರೋ ಇಲ್ಲವೋ ಎಂಬುವುದನ್ನು ಕಾದು ನೋಡಬೇಕಿದೆ.
ಬಿ.ಎಸ್.ವೈ ಅವರ ಪರಿಸ್ಥಿಯೂ ಅದೇ ಗತಿಯಾಗಿದೆ, ಪಾಪ ಅವರಿಗೆ ಮದುವೆ ಮಾಡಿದ್ದಾರೆ ಆದರೆ ಹೆಣ್ಣು ಗಂಡನ್ನು ಕೂಡಲು ಬಿಡುತ್ತಿಲ್ಲ, ಅವರ ಸಚಿವ ಸಂಪುಟ ರಚನೆ ಮಾಡಲು ಇವತ್ತು, ನಾಳೆ, ನಾಡಿದ್ದು ಎನ್ನುತಿದ್ದು, ಅವರ ಸಮಸ್ಯೆಯಲ್ಲಿ ಅವರಿದ್ದಾರೆ, ಅದ್ದರಿಂದ ರಾಜ್ಯದಲ್ಲಿ ಈ ಅಂದೋಲನ ರಾಜಕೀಯ ಪಕ್ಷ ಜಾತಿ ಭಾಷೆ ಬಿಟ್ಟು ಹೊಂದಾಗಿ ಹೋರಾಟ ಮಾಡುತ್ತಿದ್ದಾರೆ, ಸಿರಿಗೆರೆಯ ಸಾಣಿಹಳ್ಳಿ ಸ್ವಾಮೀಜಿ ಅವರ ಮಾತುಗಳನ್ನು ನೆನೆದು ಹಿಂದೂ ಧರ್ಮ ಸಮಾಜವನ್ನು ಕೂಡಿಸುವುದೇ ಹೊರತು ಹೊಡೆಯುವುದಲ್ಲ ಎಂದಿದ್ದಾರೆ, ಕರುಣಾ ಮೂರ್ತಿಯಾದ ಶ್ರೀರಾಮ ಎಂದರೆ ಎಲ್ಲರ ಮನಸಲ್ಲಿ ಪ್ರೀತಿ ಮೂಡಬೇಕು ಆದರೆ ಜೈ ಶ್ರೀರಾಮ್ ಎಂದರೆ ಎಲ್ಲರಲ್ಲೂ ಭಯ ಶುರುವಾಗುವಂತಾಗಿದೆ, ಇಂದು ರಾಮಾಯಣ ಬೇಕು ವಾಲ್ಮೀಕಿ ಬೇಡವಾಗಿದೆ.
ಚಾಣುಕ್ಯನ ಮಾತಿನಂತೆ ಯಾವ ದೇಶದ ರಾಜ ವ್ಯಾಪಾರಿಯಾಗುತ್ತಾನೋ ಅ ದೇಶದ ಜನ ಬಿಕಾರಿಯಾಗುತ್ತಾರೆ ಎಂಬುವಂತೆ ಅದು ನಮ್ಮ ದೇಶದಲ್ಲಿ ಆಗಿದ್ದಾಗದೆ. ಎನೇ ಆಗಲಿ ಹಿಂಸೆಗೆ ಅವಕಾಶ ಕೊಡದೇ ಗಾಂಧಿ, ಅಂಬೇಡ್ಕರ್ ಅವರಂತೆ ರಾಷ್ಟ್ರ ಧ್ವಜ ಹಿಡಿದು ಹೋರಾಟ ಮಾಡಬೇಕು ಎಂದು ಸರ್ವ ಸಮಾಜದ ಜನತೆಗೆ ಕರೆ ಕೊಡಲಾಗಿದೆ ಒಟ್ಟಾರೆ ರಾಜ್ಯ. ದೇಶದ ಅಭಿವೃಧ್ದಿ ನಾವೆಲ್ಲರೂ ಕೈ ಜೋಡಿಸಬೇಕಿದೆ ಎಂದರು.ಈ ವೇಳೆ ಮುಸ್ಲಿಂ ಸಮಾಜದ ಮುಖಂಡರಾದ ಅಸಾದುಲ್ಲಾ, ಸಯ್ಯದ್ ಸರ್ದಾರ್, ಖದೀರ್, ಜೋಳದಾಳ್‍ಕುಮಾರ್, ರುದ್ರಪ್ಪ,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
