ಗೌರಿ ಲಂಕೇಶ್ ಹತ್ಯೆ ಪ್ರಕರಣ ಇತ್ಯರ್ಥಕ್ಕೆ artificial intelligence ಬಳಕೆ

ಬೆಂಗಳೂರು

         ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ವಿಶೇಷ ತನಿಖಾ ತಂಡ(ಎಸ್‍ಐಟಿ) ಅಧಿಕಾರಿಗಳು ಇದೇ ಮೊದಲ ಬಾರಿಗೆ ಜಾಗತಿಕ ಮಟ್ಟದ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡಿರುವುದು ಪತ್ತೆಯಾಗಿದೆ.

        ನಗರದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಎಸ್‍ಐಟಿ ಅಧಿಕಾರಿಗಳು ಇದೇ ದೇಶದಲ್ಲಿ ಮೊದಲ ಬಾರಿಗೆ ಜಾಗತಿಕ ಮಟ್ಟದ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡಿರುವುದು ಕಂಡುಬಂದಿದೆ.

      ಜಾಗತಿಕ ಮಟ್ಟದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದು ಅದನ್ನು ಗೌರಿ ಹಂತಕರ ಪತ್ತೆಯಲ್ಲಿ ಪ್ರಯೋಗಿಸಿ ದೇಶದಲ್ಲಿ ಮೊದಲ ಬಾರಿ ಕೊಲೆ ಆರೋಪಿಗಳ ಪತ್ತೆಗೆ ಕೃತಕ ಬುದ್ಧಿಮತ್ತೆಯನ್ನು ಬಳಸಿರುವ ಹೆಗ್ಗಳಿಕೆಗೆ ಎಸ್‍ಐಟಿ ಪಾತ್ರವಾಗಿದೆ

       ರಾಜರಾಜೇಶ್ವರಿನಗರದ ಬಳಿ ಕಳೆದ 2017ರ ಸೆ.5ರ ರಾತ್ರಿ ಗೌರಿ ಲಂಕೇಶ್ ಕಾರಿನಲ್ಲಿ ಬಂದಿಳಿದು ಮನೆಯೊಳಗೆ ಹೋಗುವಾಗ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹತ್ಯೆಯ ನಂತರ ತನಿಖಾ ತಂಡ ಆಕೆಯ ನಿವಾಸದಲ್ಲಿ ಅಳವಡಿಸಿದ್ದ ನಾಲ್ಕು ಸಿಸಿಟಿವಿ ಕ್ಯಾಮರಾಗಳಲ್ಲಿ ಅಳವಡಿಸಲಾಗಿದ್ದ ಮೂರು ಡಿಜಿಟಲ್ ವಿಡಿಯೋ ದೃಶ್ಯಗಳನ್ನು ಜಪ್ತಿ ಮಾಡಿ ಹಂತಕರ ಹೆಜ್ಜೆ ಜಾಡನ್ನು ಪತ್ತಹಚ್ಚಿದ್ದಾಗಿ ವಿಶೇಷಾ ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿರುವ ಹೆಚ್ಚುವರಿ ಆರೋಪಪಟ್ಟಿಯಲ್ಲಿ ತಿಳಿಸಿದೆ.

       ವಿಡಿಯೋದಲ್ಲಿ ದಾಖಲು: ಗೌರಿ ಮನೆಯ ಪೋರ್ಟಿಕೋದಲ್ಲಿ ದುಷ್ಕರ್ಮಿಗಳು ನಾಲ್ಕು ಬಾರಿ ಗುಂಡು ಹಾರಿಸಿರುವ ದೃಶ್ಯಗಳು ಡಿಜಿmಲ್ ವಿಡಿಯೋದಲ್ಲಿ ದಾಖಲಾಗಿವೆ. ಇದರ ಜೊತೆಗೆ ನಿವಾಸದಿಂದ ಐದು ಕಿ.ಮೀ.ವ್ಯಾಪ್ತಿಯಲ್ಲಿ ಆಳವಡಿಸಲಾಗಿರುವ ಸಿಸಿಟಿವಿಗಳಲ್ಲಿ ದಾಖಲಾಗಿದ್ದ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ಬಗ್ಗೆ ಪರಿಶೀಲನೆ ನಡೆಸಿರುವ ವಿವರನ್ನು ಎಸ್‍ಐಟಿ ನ್ಯಾಯಾಲಯಕ್ಕೆ ತಿಳಿಸಿದೆ.

       ಕೃತಕ ಬುದ್ಧಿಮತ್ತೆಯ ವ್ಯವಸ್ಥೆಗಳಿಂದ ಶಂಕಿತರ ವ್ಯಕ್ತಿಗಳ ನಿಖರ ಚಿತ್ರಗಳು ಮತ್ತು ವಾಹನಗಳನ್ನು ಪತ್ತೆಹಚ್ಚಲು ಬಳಸಿಕೊಳ್ಳಲಾಯಿತು. ಆನಂತರ ಸಿಸಿಟಿವಿಯಲ್ಲಿ ದೊರೆತ ದೃಶ್ಯಗಳನ್ನು ಹೋಲಿಕೆ ಮಾಡಿ ಕೂಲಂಕುಶವಾಗಿ ಪರಿಶೀಲಿಸಲಾಯಿತು. ಇದರಿಂದ ಗೌರಿ ಹತ್ಯೆಯ ಪ್ರಮುಖ ಆರೋಪಿ ಅಮೂಲ್ ಕಾಳೆ ಮತ್ತು ಹಂತಕ ಪರಶುರಾಮ್ ಅಶೋಕ್ ವಾಗ್ಮೋರೆ ಸೇರಿದಂತೆ 18 ಮಂದಿ ಶಂಕಿತರನ್ನು ಬಂಧಿಸಲಾಯಿತು ಎಂದು ಎಸ್‍ಐಟಿ ತಿಳಿಸಿದೆ.

       ಕೇವಲ ತಾಂತ್ರಿಕ ಕಣ್ಗಾವಲು ಮಾತ್ರವಲ್ಲದೆ ಗೌರಿ ಲಂಕೇಶ್ ಕಚೇರಿಯಿಂದ ಆಗಮಿಸುವ ಮಾರ್ಗದ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿರುವ ನೂರಾರು ಸಿಸಿಟಿವಿ ಕ್ಯಾಮರಾಗಳು ಮತ್ತು ಖಾಸಗಿ ಕಟ್ಟಡಗಳಲ್ಲಿ ಆಳವಡಿಲಾಗಿದ್ದ ಸಿಸಿಟಿವಿ ಕ್ಯಾಮರಾಗಳನ್ನು ತನಿಖಾ ತಂಡ ಜಾಲಾಡಿದೆ.

ಸಕ್ರಿಯ ಕಾರ್ಯಕರ್ತರು

      ಸಾಕ್ಷಿಗಳ ಆಧಾರದ ಮೇಲೆ 2,500ಕ್ಕೂ ಹೆಚ್ಚು ವ್ಯಕ್ತಿಗಳನ್ನು ತನಿಖೆ ವೇಳೆ ಸಂದರ್ಶನ ಮಾಡಿ ಪರಿಶೀಲನೆ ನಡೆಸಿದೆ. ಇದರ ಜೊತೆಗೆ ರಾಜ್ಯಾದ್ಯಂತ 10 ಸಾವಿರಕ್ಕೂ ಹೆಚ್ಚು ದ್ವಿಚಕ್ರವಾಹನಗಳನ್ನು ತನಿಖಾ ತಂಡ ಗುರುತಿಸಿ ಆ ವಾಹನ ಮಾಲೀಕರಿಂದಲೂ ತಂಡ ಮಾಹಿತಿ ಕಲೆಹಾಕಿದೆ. ಹತ್ಯೆಗೆ ಬಳಸಲಾದ ಬೈಕ್ ದಾವಣಗೆರೆಯಿಂದ ಕಳ್ಳತನವಾಗಿತ್ತು ಎಂಬ ಸುಳಿವು ತನಿಖೆ ವೇಳೆ ಮಾಹಿತಿ ಲಭ್ಯವಾಯಿತು ಎಂದು ಆರೋಪಪಟ್ಟಿಯಲ್ಲಿ ತಿಳಿಸಿದೆ.

      ಈಗ ಬಂಧನಕ್ಕೊಳಗಾಗಿರುವ 18 ಆರೋಪಿಗಳು 2010-11ರಲ್ಲಿ ಡಾ. ವೀರೇಂದ್ರ ತವಾಡೆ ಅಲಿಯಾಸ್ ಬಡೆ ಭಾಯಿಸಾಬ್ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದರು ಹಾಗೂ ಸನಾತನ್ ಪ್ರಭಾತ್ ಪತ್ರಿಕೆಯ ಸಂಪಾದಕರು ಈ ಸಂಸ್ಥೆಗೆ ಹಣಕಾಸು ನೆರವು ಒದಗಿಸಿದ್ದರು ಎಂದು ಎಸ್‍ಐಟಿ ಸಲ್ಲಿಸಿರುವ ಹಚ್ಚುವರಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap