ವೃದ್ದಾಪ್ಯ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಆಧ್ಯಾತ್ಮ ಮತ್ತು ಧ್ಯಾನದತ್ತ ಗಮನ ನೀಡಿ

ಚಳ್ಳಕೆರೆ

       ದೇಹಕ್ಕೆ ವಯಸ್ಸು ಆದಂತೆಲ್ಲಾ, ದೇಹದ ಬಹುತೇಕ ಅಂಗಗಳು ಶಕ್ತಿಯನ್ನು ಕಳೆದುಕೊಳ್ಳುವುದಲ್ಲದೆ ಕಾರ್ಯನಿರ್ವಹಿಸಲು ಸಹ ಸಾಧ್ಯವಾಗುವುದಿಲ್ಲ, ಕಾರಣ ದೇಹದ ಎಲ್ಲಾ ಅಂಗಾಗಳು ದಿನನಿತ್ಯ ಕಾರ್ಯನಿರ್ವಹಿಸಿ ನಿಷ್ಕ್ರಿಯವಾಗತೊಡಗಿದಾಗ ನಮಗೆ ಅನಾರೋಗ್ಯ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ವೃದ್ದಾಪ್ಯದಲ್ಲಿ ಆರೋಗ್ಯ ನಿರ್ವಹಣೆಯ ಬಗ್ಗೆ ಪ್ರತಿಯೊಬ್ಬರು ಜಾಗೃತೆ ವಹಿಸಬೇಕೆಂದು ರಾಜ್ಯಸ್ಥಾನದ ಗ್ಲೋಬಲ್ ಹಾಸ್ಪಿmಲ್ ವೃದ್ದರೋಗ ತಜ್ಞ ಡಾ.ಮಹೇಶ್ ಹೇಮಾದ್ರಿ ತಿಳಿಸಿದರು.

        ಅವರು, ಗುರುವಾರ ಇಲ್ಲಿನ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಕಚೇರಿಯಲ್ಲಿ ವೃದ್ದಾಫ್ಯದಲ್ಲಿ ಆರೋಗ್ಯ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ವೃದ್ದಾಪ್ಯವನ್ನು ಅನುಭವಿಸಲೇಬೇಕಿದೆ. ಈ ಸಂದರ್ಭದಲ್ಲಿ ಮಿತ ಆಹಾರ ಸೇವಿಸುವುದಲ್ಲದೆ ಕೆಲವೊಂದು ಚಿಕ್ಕಪುಟ್ಟ ಆಸನಗಳನ್ನು ಮಾಡಬೇಕಿದೆ. ಯಾವುದೇ ದುಶ್ಚಟಗಳಿಗೆ ಒಳಗಾಗಬಾರದು, ಹಿತಮಿತ ಆಹಾರವನ್ನು ಸೇವಿಸಬೇಕು, ಸಮಯಕ್ಕೆ ಸರಿಯಾಗಿ ಆಹಾರ ಸೇವೆನೆ ನಿಮ್ಮ ಆರೋಗ್ಯವನ್ನು ಸಧೃಡಗೊಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.  

        ಬೀದರ್‍ನ ಮಾಜಿ ಜಿಲ್ಲಾ ಸ್ಕೌಟ್ ಕಮಿಷನರ್ ಡಾ.ಹನುಮಂತ ಭಾರಶೆಟ್ಟಿ ಮಾತನಾಡಿ, ಹಿರಿಯರು ಸಮಾಜದ ಆಸ್ತಿಯಾಗಿದ್ದು, ಸರ್ವೆ ಸಾಮಾನ್ಯವಾಗಿ ಎಲ್ಲಾ ವಿಷಯಗಳಲ್ಲಿ ಪರಿಣಿತಿಯನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯ ಹಾಗೂ ಇತರೆ ವಿಚರಗಳಿಗಾಗಿ ಹಿರಿಯರಿಂದ ಮಾರ್ಗದರ್ಶನ ಪಡೆಯಬೇಕಿದೆ. ಯಾವ ವ್ಯಕ್ತಿ ಚಿಂತನೆಯಿಂದ ದೂರವಿರುತ್ತಾನೋ ಅಂತಹ ವ್ಯಕ್ತಿ ಮಾತ್ರ ವೃದ್ದಾಫ್ಯದಲ್ಲಿ ಸಂತೋಷದಿಂದ ಇರಲು ಸಾಧ್ಯ. ಬದುಕಿನ ಎಲ್ಲಾ ಜಂಜಾಟವನ್ನು ಬದಿಗಿಟ್ಟು ಉತ್ತಮ ಭರವಸೆಗಳೊಂದಿಗೆ ಜೀವನ ನಡೆಸಬೇಕು, ಅನಗತ್ಯವಾಗಿ ಯಾರ ಮೇಲು ಕೋಪಗೊಳ್ಳದೆ ಸೌಹಾರ್ಥಿತವಾಗಿ ಜೀವನ ನಿರ್ವಹಿಸಬೇಕೆಂಧರು.

       ಕಾರ್ಯಕ್ರಮದಲ್ಲಿ ವಾಸವಿ ಕ್ಲಬ್ ಅಧ್ಯಕ್ಷ ಸಿ.ಎಸ್.ನರಸಿಂಹಗುಪ್ತ, ಈಶ್ವರಿಯ ವಿದ್ಯಾಲಯದ ಕೆ.ಜೆ.ಅಶೋಕ್‍ಕುಮಾರ್, ಬಿ.ಕೆ.ವಿಮಲಕ್ಕ, ಡಾ.ಎಲ್.ವೀರೇಶ್, ಡಿ.ಎಂ.ತಿಪ್ಪೇಸ್ವಾಮಿ, ಶ್ರೀನಿವಾಸಲು ಮುಂತಾದವರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap