ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಮಾಧ್ಯಮ ಮತ್ತು ಸಾರ್ವಜನಿಕರ ಸಹಕಾರ ಮುಖ್ಯ : ರಮೇಶ್ ಅಭಿಮತ

ಬೆಂಗಳೂರು

     ರಾಜ್ಯದಲ್ಲಿ ಏ.18 ಮತ್ತು ಏ.23 ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಮತದಾರರು ಯಾವುದೇ ಆಮೀಷಕ್ಕೆ ಒಳಗಾಗದಂತೆ ಪಾರದರ್ಶಕ ವಾಗಿ ಮತ ಚಲಾಯಿಸುವಂತೆ ಮಾಧ್ಯಮಗಳು ಹೆಚ್ಚಿನ ರೀತಿಯಲ್ಲಿ ಅರಿವು‌ ಮೂಡಿಸಬೇಕು ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಚುನಾವಣಾ ಆಯುಕ್ತ ರಮೇಶ್ ಹೇಳಿದರು.

      ಬೆಂಗಳೂರಿನ ಆಕಾಶವಾಣಿ ಕಚೇರಿಯಲ್ಲಿ ಶನಿವಾರ ಪಿಟಿಸಿ ಗಳಿಗೆ ಹಮ್ಮಿಕೊಳ್ಳಲಾಗಿದ್ದ “2019 ರ ಲೋಕಸಭಾ ಚುನಾವಣೆಯ ತರಬೇತಿ ಕಾರ್ಯಗಾರ” ದಲ್ಲಿ ಮುಖ್ಯ ಅತಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಮತ್ತು ಮತದಾನದ ಬಗ್ಗೆ ಅರಿವು ಮೂಡಿಸಲು ಈಗಾಗಲೆ ಹಲವು ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳಲಾಗಿದೆ. ಮತದಾನ ಜಾಗೃತಿಗಾಗಿ ಸ್ಥಳಿಯ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳೊಂದಿಗೆ ಮನೆಮನೆಗೆ ತೆರಳಿ‌ ಸಾರ್ವಜನಿಕರಿಗೆ ಅರಿವು‌ ಮೂಡಿಸಲಾಗುತ್ತಿದೆ ಎಂದರು.

      ಮತದಾರ ಪಟ್ಟಿಯ ಪರಿಷ್ಕರಣೆಯು ನಾಮಪತ್ರವನ್ನು ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದವರೆಗೆ ಚಾಲನೆಯಲ್ಲಿದ್ದು, ಅಂದಿನವರೆಗೆ ಹೊಸದಾಗಿ ಹೆಸರನ್ನು ಸೇರ್ಪಡೆ ಮಾಡಬಹುದಾಗಿದೆ ಎಂದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಓಟರ್ ಸ್ಲಿಪ್ ಬಳಸಿ ಮತದಾನ ಮಾಡಬಹುದಾಗಿತ್ತು.

        ಆದರೆ ಚುನಾವಣಾ ಆಯೋಗ ಈ ಬಾರಿ ಇದನ್ನು ನಿರ್ಭಂದಿಸಿದ್ದು, ಆಯೋಗ ಸೂಚಿಸಿದ ಗುರುತಿನ ಚೀಟಿಗಳಲ್ಲಿ ಒಂದನ್ನು‌ ಮತದಾನದ ಸಂದರ್ಭದಲ್ಲಿ‌ ಹಾಜರುಪಡಿಸುವುದು ಖಡ್ಡಾಯವಾಗಿದೆ ಎಂದರು.ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಬಗ್ಗೆ ಕ್ರಿಮಿನಲ್ ಮೊಕದಮ್ಮೆಗಳು ದಾಖಲಾಗಿದ್ದಲ್ಲಿ ಅದನ್ನು ಹೆಚ್ಚು ಪ್ರಸಾರದ ಮೂರು ದಿನಪತ್ರಿಕೆಗಳು ಮತ್ತು ವಿದ್ಯನ್ಮಾಧ್ಯಮಗಳಲ್ಲಿ ಜಾಹಿರಾತು ಪ್ರಕಟಿಸಿ ಚುನಾವಣಾಧಿಕಾರಿಗಳಿಗೆ ನೀಡಬೇಕು. ಮತ್ತು ಪಕ್ಷಗಳು ಸಹ ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಮೊಕದಮ್ಮೆಗಳ ಬಗ್ಗೆ ಪತ್ರಿಕೆಗಳಲ್ಲಿ ಜಾಹಿರಾತು ನೀಡಿ ಚುನಾವಣಾ ಆಯೋಗಕ್ಕೆ ನೀಡುವುದು ಖಡ್ಡಯವಾಗಿರುತ್ತದೆ ಎಂದರು.

        ಮತದಾನದಲ್ಲಿ ಬಳಕೆ ಮಾಡುವ ಇವಿಎಂ ಗಳ ಬಗ್ಗೆ ಸಾರ್ವಜನಿಕರಾಗಲಿ, ರಾಜಕೀಯ ಮುಖಂಡರಾಗಲಿ ಅನುಮಾನ ಪಡುವ ಅಗತ್ಯವಿಲ್ಲ. ಪ್ರತಿಯೊಂದು ಹಂತದಲ್ಲಿ ಇವಿಎಂ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿರುತ್ತದೆ. ಅಲ್ಲದೆ ಮತದಾನ ಪ್ರಾರಂಭಕ್ಕೂ ಮುನ್ನ ಇವಿಎಂ ಗಳ ಬಗ್ಗೆ ಖಾತರಿಪಡಿಸಿಕೊಳ್ಳ ಬಹುದಾಗಿದೆ ಎಂದು ಹೇಳಿದರು.

        ರಾಜ್ಯ ಚುನಾವಣಾ ಆಯೋಗದ ಸ್ವೀಪ್ ಸಮಿತಿ ಸಂಚಾಲಕ ವಸ್ತ್ರದ್ ಮಾತನಾಡಿ, ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈಗಾಗಲೇ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಮತದಾನದಿಂದ ಯಾವೊಬ್ಬ ಪ್ರಜೆಯು ಹೊರಗೆ ಉಳಿಯಬಾರದೆಂಬ ನಿಟ್ಟಿನಲ್ಲಿ ಪ್ರಕಟಣೆಗಳನ್ನು ನೀಡಲಾಗಿದೆ. ಮಹಿಳಾ ಮತದಾರರನ್ನು ಸೆಳೆಯಲು‌ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ” ಸಖಿ” ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

         ಅಲ್ಲದೆ ಮತಗಟ್ಟೆಯಲ್ಲಿ ಕುಡಿಯುವ ನೀರು ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಶೇಷ ಚೇತನ ಮತದಾರರನ್ನು ಮತಗಟ್ಟೆಗೆ ಕರೆತಂದು ಮತ ಚಲಾಯಿಸಿದ ನಂತರ ವಾಪಸ್ ಮನೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ ಎಂದರು.

          ಆಕಾಶವಾಣಿ ಸುದ್ಧಿ ವಿಭಾಗದ ಉಪನಿರ್ದೇಶಕರಾದ ನಂಜುಂಡಸ್ವಾಮಿ‌ ಪ್ರಾಸ್ತಾವಿಕವಾಗಿ ಮಾತನಾಡಿ, ಚುನಾವಣೆ ಎಂಬುದು ಪ್ರತಂತ್ರ ವ್ಯವಸ್ಥೆಯ ಹಬ್ಬವಾಗಿದ್ದು ಇದು ಪಾರದರ್ಶಕವಾಗಿ ನಡೆಯಲು ಆಕಾಶವಾಣಿ ಸುದ್ಧಿ ವಿಭಾಗದ ಪಾತ್ರ ಪ್ರಮುಖವಾಗಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link