ಕೊರಟಗೆರೆ
ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಸಲು ಹಾಗೂ ಜಾತ್ಯತೀತ ಮನೋಭಾವ ಬೆಳೆಸಲು ದೇಶದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದು ಕೆಪಿಸಿಸಿ ಸದಸ್ಯ ಜಿ. ವೆಂಕಟಾಚಲಯ್ಯ ತಿಳಿಸಿದರು.
ಅವರು ಪಟ್ಟಣದ ನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಶಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಯಬೇಕಾದರೆ ಜಾತ್ಯತೀತ ಮನೋಭಾವ ಹಾಗೂ ಪರಿಕಲ್ಪನೆಯನ್ನು ಹೊಂದಿರುವ ಹಾಗೂ ದೇಶದ ಎಲ್ಲಾ ಜನರನ್ನು ಸಮಾನವಾಗಿ ಕಾಣುವ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ದೇಶದಲ್ಲಿ ಅಧಿಕಾರಕ್ಕೆ ಬರಬೇಕಿದೆ.
ನಾವೆಲ್ಲರೂ ಒಟ್ಟಾಗಿ ದುಡಿದು ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕಿದೆ. ಇದರಿಂದ ಸಾಮಾನ್ಯ ವ್ಯಕ್ತಿಯು ಕೂಡ ದೇಶದಲ್ಲಿ ನೆಮ್ಮದಿಯಾಗಿ ಜೀವನವನ್ನು ಸಾಗಿಸಬಹುದು. ಆದ್ದರಿಂದ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾದ ರಾಹುಲ್ಗಾಂಧಿರವರ ಆದೇಶದಂತೆ ಶಕ್ತಿ ಕಾರ್ಯಕ್ರಮವನ್ನು ನಾವೆಲ್ಲರೂ ಕಾರ್ಯರೂಪಕ್ಕೆ ತರುವ ಮುಖಾಂತರ ಪಕ್ಷವನ್ನು ಬಲಪಡಿಸಬೇಕು ಎಂದರು.
ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಟಿ.ಡಿ. ದಿನೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಶಕ್ತಿ ಕಾರ್ಯಕ್ರಮವನ್ನು ಕ್ಷೇತ್ರದಲ್ಲಿ ಮತ್ತಷ್ಟು ಕಾರ್ಯರೂಪಕ್ಕೆ ತಂದು ಪಕ್ಷವನ್ನು ಬಲಪಡಿಸಬೇಕಿದೆ. ಪ್ರತಿಯೊಬ್ಬ ಕಾರ್ಯಕರ್ತನು ತನ್ನ ಚುನಾವಣಾ ಗುರುತಿನ ಚೀಟಿಯನ್ನು 7045006100 ಗೆ ಸಂದೇಶ ಕಳುಹಿಸಿ ನೋಂದಣಿ ಮಾಡಿಕೊಳ್ಳಬೇಕಿದೆ. ಇದರಿಂದ ಕಾರ್ಯಕರ್ತರು ನೇರವಾಗಿ ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯಅಧ್ಯಕ್ಷರೊಂದಿಗೆ ಮಾತನಾಡಿ, ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಬಹುದು. ಆದ್ದರಿಂದ ಶಕ್ತಿ ಕಾರ್ಯಕ್ರಮಕ್ಕೆ ಹೆಚ್ಚಿನದಾಗಿ ದುಡಿಯಬೇಕು ಎಂದು ಕರೆಕೊಟ್ಟರು.
ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಕವಿತಾ ಮಾತನಾಡಿ, ಪಕ್ಷವನ್ನು ಬಲಪಡಿಸಲು ಮಹಿಳಾ ಕಾರ್ಯಕರ್ತೆಯರೂ ಸಹ ಈ ಶಕ್ತಿ ಕಾರ್ಯಕ್ರಮಕ್ಕೆ ದುಡಿಯಬೇಕು. ಇದರಿಂದ ಮಹಿಳಾ ಕಾರ್ಯಕರ್ತೆಯರೂ ಸಹ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿ ತಮ್ಮ ಕೊಡುಗೆಯನ್ನು ನೀಡಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ರಾಮಕೃಷ್ಣ, ಜಿ,ಪಂ ಸದಸ್ಯ ನಾರಾಯಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವತ್ಥನಾರಾಯಣ, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವ ಅಧ್ಯಕ್ಷ ವಿನಯ್ಕುಮಾರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ್, ಚಂದ್ರಶೇಖರ್ಗೌಡ, ತಾ,ಪಂ ಸದಸ್ಯರುಗಳಾದ ವೆಂಕಟಪ್ಪ, ಈರಣ್ಣ, ಪಪಂ ಸದಸ್ಯರುಗಳಾದ ಓಬಳರಾಜು, ನರಸಿಂಹಪ್ಪ, ನಾಗರಾಜು, ಓಬಿಸಿ ಅಧ್ಯಕ್ಷ ಪುಟ್ಟರಾಜು, ಗ್ರಾಪಂ ಅಧ್ಯಕ್ಷರಾದ ಲಕ್ಷ್ಮೀ, ಮಹಿಮಾ, ಎಪಿಎಂಸಿ ಮಾಜಿ ಸದಸ್ಯರುಗಳಾದ ಜಯರಾಮ್, ಗೊಂದಿಹಳ್ಳಿ ರಂಗರಾಜು, ರವಿಕುಮಾರ್, ಮುಖಂಡರುಗಳಾದ ಜಾಲಗಿರಿ ಕೃಷ್ಣ ಮೂರ್ತಿ, ಎಚ್ಆರ್ ಮಲ್ಲಿಕಾರ್ಜುನ್, ರವಿ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








