ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಚಿತ್ರದುರ್ಗ ವತಿಯಿಂದ ಕೋಟ್ಪಾ-2003ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ, ಸಾಮಥ್ರ್ಯಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ನಗರದ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ತರಬೇತಿ ಕಾರ್ಯಾಗಾರದಲ್ಲಿ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಡಾ. ಶೈಲಾರಾಣಿ ಇವರು ತಂಬಾಕಿನಿಂದ ಆಗುವಂತಹ ದುಷ್ಪರಿಣಾಮಗಳು ಮತ್ತು ಬಾಯಿಯ ಕ್ಯಾನ್ಸರ್ ಬಗ್ಗೆ ಉಪನ್ಯಾಸ ನೀಡಿದರು. ಬಿ.ಎಂ.ಪ್ರಭುದೇವ್, ಜಿಲ್ಲಾ ಸಲಹಾಗಾರರು, ಇವರು ಕೋಟ್ಪಾ-2003 ಕಾಯ್ದೆಯ ಅಡಿಯಲ್ಲಿ ಬರುವಂತಹ ಸೆಕ್ಷನ್‍ಗಳ ಬಗ್ಗೆ ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು.
ಕೆ.ಎಂ.ತಿಪ್ಪೇಸ್ವಾಮಿ, ಸಮಾಜ ಕಾರ್ಯಕರ್ತರು, ಇವರು ತಂಬಾಕು ಸೇವನೆಯಿಂದ ಬರುವಂತಹ ಕಾಯಿಲೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಮತ್ತು ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗದಲ್ಲಿ ಇರುವ ತಂಬಾಕು ವ್ಯಸನ ಮುಕ್ತ ಕೇಂದ್ರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಶಿವಮೊಗ್ಗದ ಮನಃಶಾಸ್ತ್ರಜ್ಞ ಶಿವಕುಮಾರ್ ಎಸ್.ಟಿ. ಅವರು, ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಮತ್ತು ಮನಶಾಸ್ತ್ರದ ಬಗ್ಗೆ ಮತ್ತು ತಂಬಾಕು ನಿಯಂತ್ರಣದ ಬಗ್ಗೆ ಉಪನ್ಯಾಸ ನೀಡಿದರು. 50ಕ್ಕೂ ಹೆಚ್ಚು ದಂತ ವೈದ್ಯರು, ಐ.ಸಿ.ಟಿ.ಸಿ ಹಾಗೂ ಎ.ಆರ್.ಟಿ ಆಪ್ತಸಮಾಲೋಚಕರು ಮತ್ತು ಆರ್.ಎನ್.ಟಿ.ಸಿ.ಪಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
