ಇಂದು ಪಿಂಗಳಿ ವೆಂಕಯ್ಯ ಜನ್ಮದಿನ

ಬೆಂಗಳೂರು

      ದೇಶದ ಹೆಮ್ಮೆಯ ಸಂಕೇತವಾದ ರಾಷ್ಟ್ರಧ್ವಜದ ವಿನ್ಯಾಸಕಾರ, ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯನವರ 144 ನೆ ಜನ್ಮದಿನ ಆಗಸ್ಟ್ 2. 1876ರ ಆಗಸ್ಟ್ 2 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಬಟ್ಲಪೆನ್ನುಮಾರು ಗ್ರಾಮದಲ್ಲಿ ಜನಿಸಿದ ವೆಂಕಯ್ಯ, ಕೆಲ ದಿನಗಳ ಕಾಲ ಬಳ್ಳಾರಿಯಲ್ಲಿ ಸರ್ಕಾರಿ ನೌಕರಿಯಲ್ಲಿದ್ದರು. ಭೂ ವಿಜ್ಞಾನ ಪದವೀಧರರಾಗಿದ್ದ ವೆಂಕಯ್ಯನವರ ಆಸಕ್ತಿಗಳ ಹರವು ಸುವಿಸ್ತಾರವಾಗಿತ್ತು. ಶಿಕ್ಷಣ, ಕೃಷಿ, ಬಹುಭಾಷಾ ಕಲಿಕೆ ವಿಷಯಗಳಲ್ಲೂ ಅಪಾರ ಆಸಕ್ತಿ ಹೊಂದಿದ್ದ ಅವರು, ವಿಶೇಷವಾಗಿ ಆಂಧ್ರಪ್ರದೇಶದಲ್ಲಿ ಮನೆ-ಮನೆಯ ಮಾತಾಗಿದ್ದಾರೆ. ದೇಶದ ತ್ರಿವರ್ಣಧ್ವಜ ವಿನ್ಯಾಸಗೊಳಿಸಿದ್ದ ಪಿಂಗಳಿ ವೆಂಕಯ್ಯನವರ ಕೊಡುಗೆಗಳನ್ನು ಗೌರವದಿಂದ ಸ್ಮರಿಸುವುದಾಗಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap