ಚಿಕ್ಕನಾಯಕನಹಳ್ಳಿ
ಪಟ್ಟಣದಲ್ಲಿ ಅನೇಕ ಜನರು ಸಾಲ ಮಾಡಿಕೊಂಡು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ, ಪುರಸಭೆ ಫಲಾನುಭವಿಗಳಿಗೆ ಇನ್ನು ಬಿಲ್ಲನ್ನು ನೀಡಿಲ್ಲ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೇರಡು ದಿನಗಳಲ್ಲಿ ಬಿಲ್‍ಪಾವತಿ ಮಾಡದೇ ಇದ್ದರೆ ಅನಿರ್ದಿಷ್ಠಾವಧಿ ಮುಷ್ಕರ ಮಾಡಲಾಗುವುದು ಎಂದು ಪುರಸಭೆ ಸದಸ್ಯ ನಾಗರಾಜು ಎಚ್ಚರಿಕೆ ನೀಡಿದರು.
ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶೌಚಾಲಯಗಳು ನಿರ್ಮಿಸಿಕೊಂಡವರಿಗೆ ಎರಡು ಮೂರು ವರ್ಷಗಳು ಕಳೆದರು ಶೌಚಾಲಯದ ಅನುದಾನದ ಹಣ ಪಾವತಿಯಾಗಿಲ್ಲ ಎಂದು ಪಟ್ಟಣದ 4 ಹಾಗೂ 5ನೇ ವಾರ್ಡ್‍ನ ಫಲಾನುಭವಿಗಳು ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದಬ್ಬೇಘಟ್ಟ ಶಂಕರಯ್ಯ ಮಾತನಾಡಿ, ಪುರಸಭೆಯಲ್ಲಿನ ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. ಶೌಚಾಲಯದ ಬಿಲ್ ಪಾವತಿ ಮಾಡಲು ಲಂಚ ನೀಡಲಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳು ಬಿಲ್‍ಮಾಡುತ್ತಿಲ್ಲ, ಬಿಲ್ ಪಾವತಿಸಲು ಎರಡು ಸಾವಿರ ಲಂಚ ಕೇಳಿದ್ದರು, ಲಂಚ ನೀಡಿದ್ದರೆ ಈ ವೇಳೆಗೆ ನಮಗೂ ಬಿಲ್‍ಪಾವತಿ ಆಗುತ್ತಿತ್ತು, ಇಲ್ಲಿನ ಅಧಿಕಾರಿಗಳು ಬ್ರಷ್ಠಾಚಾರದಲ್ಲಿ ಮುಳುಗಿದ್ದಾರೆ ಎಂದು ದೂರಿದರು.
ಶಿಲ್ಪಕಲಾ ಆಕಾಡಮಿ ಸದಸ್ಯ ಶಿಲ್ಪಿ ವಿಶ್ವನಾಥ್ ಮಾತನಾಡಿ, ಸ್ವಚ್ಛಭಾರತ್ ಯೋಜನೆ ಅಡಿ, ಬಯಲು ಬಹಿರ್ದೆಸೆ ಮುಕ್ತ ಸಮಾಜ ನಿರ್ಮಿಸುವ ದೊಡ್ಡ ಗುರಿ ಇಟ್ಟುಕೊಂಡು ಸರ್ಕಾರ ಬಡವರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಧನಸಹಾಯ ನೀಡುತ್ತಿದೆ ಅದರೆ ಪುರಸಭೆ ಅಧಿಕಾರಿಗಳು ಬಡವರ ಶೌಚಾಲಯದ ಹಣವನ್ನೂ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿದರು.ಪ್ರತಿಭಟನೆಯಲ್ಲಿ ಭಾಗ್ಯಮ್ಮ, ಗೌರಮ್ಮ, ಸಿದ್ದಗಂಗಮ್ಮ, ಸುಜಾತ, ಕೇದಿಗೆಹಳ್ಳಿ ಪಾಳ್ಯದ ನಾಗರಾಜು, ಗಿರೀಶ್, ಕಂಬಳಿ ರಮೇಶ್ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ