ಚಿತ್ರದುರ್ಗ
ಪ್ರವಾಸಿಗರ ಅನುಕೂಲಕ್ಕಾಗಿ ಕೋಟೆಯ ಬಳಿ ಶಾಸಕರ ಅನುದಾನ ಅಥವಾ ನಗರಸಭೆಯಿಂದಾಗಲಿ ಶೌಚಾಲಯವನ್ನು ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ನಗರದ ಕೋಟೆಯ ಮುಂಭಾಗದ ಮಹಾರಾಣಿ ಕಾಲೇಜಿನ ಪಕ್ಕದ ಕಾಳಿಕಾಂಬ ದೇವಾಲಯದ ರಸ್ತೆಯ ಸಿ.ಸಿ. ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಇಲ್ಲಿಗೆ ಬಂದಾಗ ಸುತ್ತಾ-ಮುತ್ತಲ್ಲಿನ ಜನತೆ ಕೋಟೆಯನ್ನು ವೀಕ್ಷಣ ಮಾಡಲು ಆಗಮಿಸುವ ಪ್ರವಾಸಿಗರ ಸಮಸ್ಯೆಯಾದ ಶೌಚಾಲಯದ ಬಗ್ಗೆ ನನಗೆ ತಿಳಿಸಿದರು, ಇಲ್ಲಿ ಶೌಚಾಲಯ ಇಲ್ಲದೆ ಬರುವ ಪ್ರವಾಸಿರಿಗೆ ತೊಂದರೆಯಾಗಿದ್ದಲ್ಲದೆ ಇಲ್ಲಿನ ಮನೆಯವರಿಗೆ ಮನವಿ ಮಾಡುವುದರ ಮೂಲಕ ಅವರ ಮನೆಯ ಶೌಚಾಲಯವನ್ನು ಬಳಕೆ ಮಾಡಿಕೊಳ್ಳುತ್ತಿದ್ಧಾರೆ ಇದರಿಂದ ಇಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದಾರೆ ಎಂದರು.
ಮಹಾರಾಣಿ ಕಾಲೇಜಿನ ಕಾಂಪೊಂಡಿಗೆ ಹೊಂದಿಕೊಂಡಂತೆ ಸರ್ಕಾರದ ಜಾಗ ಇದೇ ಇಲ್ಲಿ ಹಿಂದೆ ಶೌಚಾಲಯ ಇತ್ತು ಎಂದು ಜನತೆ ತಿಳಿಸಿದ್ಧಾರೆ ಇದರ ಬಗ್ಗೆ ಪರೀಶೀಲನೆಯನ್ನು ನಡೆಸುವುದರ ಮೂಲಕ ಶೀಘ್ರವಾಗಿ ಶಾಸಕರ ಅನುದಾನ ಅಥವಾ ನಗರಸಭೆವತಿಯಿಂದ ಪುರುಷರಿಗೆ ಮತ್ತು ಮಹಿಳೆಯರಿಗೆ ತಲಾ 10 ಶೌಚಾಲವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಭಾಸ್ಕರ್. ಶ್ರೀಮತಿ ಗೀತಾ ಮಾಜಿ ಸದಸ್ಯ ವೆಂಕಟೇಶ್ ನಗರಸಭೆ ಇಂಜಿನಿಯರ್ ರೇವಣಸಿದ್ದಪ್ಪ ಸೇರಿದಂರೆ ಬಡಾವಣೆಯ ನಾಗರೀಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ