ತಾಲ್ಲೂಕು ಅಂಚೆ ಕಚೇರಿ : ನೂಕುನುಗ್ಗಲು ತಡೆಗಟ್ಟಲು ಟೋಕನ್ ವ್ಯವಸ್ಥೆ.

ಚಳ್ಳಕೆರೆ

    ನಗರದ ತ್ಯಾಗರಾಜ ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಪ್ರತಿದಿನ ಬೆಳಗ್ಗೆ ನೂರಾರು ಜನರು ವಿಧವಾ ವೇತನ, ವೃದ್ದಾಪ್ಯಾ ವೇತನ ಮುಂತಾದ ವೇತನಗಳನ್ನು ಪಡೆಯಲು ಸಾಲುಗಟ್ಟಿ ನಿಲ್ಲುವುದು ಸ್ವಾಭಾವಿಕವಾಗಿದೆ. ಈ ಹಿನ್ನೆಲೆಯಲ್ಲಿ ವಯೋವೃದ್ದರೂ ಸಹ ಬಿಸಿಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಪಾಯವನ್ನು ಅಲಕ್ಷಿಸಿ ವೇತನವಕ್ಕಾಗಿ ಹಾತುವರೆಯೂ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಂಚೆ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಣ ವಿತರಿಸಲು ಸೂಚಿಸಿದರು.

    ಅಂಚೆ ಕಚೇರಿ ಒಳ ಆವರಣದಲ್ಲಿ ಮರದ ನೆರಳಿದ್ದು, ಎಲ್ಲರನ್ನೂ ದೂರ, ದೂರ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿ, ಅವರಿಗೆ ಟೋಕನ್ ನೀಡಿ ಹಣ ಪಡೆಯುವಂತೆ ಅಂಚೆ ಕಚೇರಿಯ ವ್ಯವಸ್ಥಾಪಕ ರಾಧಕೃಷ್ಣರವರಿಗೆ ಸೂಚಿಸಿದರು. ನೆರೆದಿದ್ದ ನೂರಾರು ಜನರು ನೆರಳಲ್ಲಿ ನಿಂತು ವೇತನ ಪಡೆಯುವ ಸೌಲಭ್ಯ ಕಲ್ಪಿಸಿದ್ದಕ್ಕಾಗಿ ಶಾಸಕರಿಗೆ ಅಲ್ಲಿಯೇ ಕೃತಜ್ಞತೆಯಿಂದ ಕೈಮುಗಿದರು.

    ಅಂಚೆ ಕಚೇರಿ ವ್ಯವಸ್ಥಾಪಕ ರಾಧಕೃಷ್ಣ ತಮ್ಮ ಕಚೇರಿ ಒಳ ಆವರಣದಲ್ಲೇ ಎಲ್ಲಾ ಪಿಂಚಣಿದಾರರು ನೆರಳಲ್ಲೇ ಇದ್ದು, ಟೋಕನ್ ಪಡೆದು ವೇತನ ಪಡೆಯುವಂತೆ ತಿಳಿಸಿದರು. ಅನಗತ್ಯವಾಗಿ ಯಾರೂ ಸಹ ಸಾಮಾಜಿಕ ಅಂತರವನ್ನು ನಿರ್ಲಕ್ಷಿಸಿ ಮುಂದೆ ಬಂದು ಸೌಲಭ್ಯ ಪಡೆಯಲು ಬಯಸದೆ ಸಿಬ್ಬಂದಿ ವರ್ಗ ಮಾಹಿತಿ ನೀಡಿದಾಗ ತಮ್ಮ ವೇತನ ಪಡೆಯುವಂತೆ ತಿಳಿಸಿದರು. ನಗಸರಭಾ ಸದಸ್ಯ ರಮೇಶ್‍ಗೌಡ, ಎಂ.ಜೆ.ರಾಘವೇಂದ್ರ, ವೀರಭದ್ರಪ್ಪ, ಆರ್.ಪ್ರಸನ್ನಕುಮಾರ್, ಪಿ.ತಿಪ್ಪೇಸ್ವಾಮಿ, ಫರೀದ್‍ಖಾನ್, ಸೈಯದ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link