ಹಾವೇರಿ :
ತಾಲೂಕಿನ ಆಲದಕಟ್ಟಿ ಹೊಸಳ್ಳಿ ಗ್ರಾಮಗಳ ನಡುವೆ ಹಾವೇರಿಯಿಂದ ಸುಮಾರು 5 ಕಿ.ಮೀ. ಗಳಷ್ಟು ದೂರದಲ್ಲಿ ನಿರ್ಮಾಣವಾಗಿರುವ ರಸ್ತೆ ಶುಲ್ಕ ವಸೂಲಾತಿ ಕೇಂದ್ರವು ಸ್ಥಳೀಯ ಗ್ರಾಮಗಳಿಗೆ ಹಾಗೂ ರೈತರಿಗೆ ತೊಂದರೆಯಾಗಿದ್ದು, ಈ ಶುಲ್ಕ ವಸೂಲಾತಿ ಕೇಂದ್ರವನ್ನು ಬಂದ ಮಾಡಿ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಕರವೇ ಪದಾಧಿಕಾರಿಗಳು ತಹಶೀಲ್ದಾರ ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಹಾವೇರಿಯಿಂದ ಸ್ವಗ್ರಾಮಕ್ಕೆ ಹಾಗೂ ಸ್ವಗ್ರಾಮದಿಂದ ಹಾವೇರಿಗೆ ವಿವಿಧ ಊರುಗಳಿಗೆ ಹೋಗಬೇಕಾದರೆ ಸಮೀಪದ ಗ್ರಾಮಸ್ಥರು ಈ ಕೇಂದ್ರದಲ್ಲಿ ಶುಲ್ಕ ಪಾವತಿಸಿ ಹೋಗಬೇಕಾಗುವುದು. ದಿನಕ್ಕೆ 10 ಬಾರಿ ಹೋಗಬೇಕಾದಲ್ಲಿ ಗ್ರಾಮಸ್ಥರು 10 ಬಾರಿಯೂ ಶುಲ್ಕ ಪಾವತಿಸಿಯೇ ಹೋಗಬೇಕು ಹಾಗೂ ವಾಹನಗಳ ದಟ್ಟಣೆಯಿಂದ ಹೋಗಬೇಕಾದ ಕೆಲಸಗಳಿಗೆ ತಡವಾಗಿ ಹೋಗಬೇಕಾಗುವುದು.
ರೈತರ ಟ್ರಾಕ್ಟರ್,ಚಕ್ಕಡಿಗಳು,ಹೋಗಲು ಹೆಚ್ಚಿನ ರಸ್ತೆ ಅಥವಾ ಸರ್ವೀಸ ರಸ್ತೆಯನ್ನು ಇನ್ನೂ ಮಾಡಿಲ್ಲದ ಕಾರಣ ಬಹಳ ತೊಂದರೆಯಾಗಿದೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಇರುವ ಯಾವದೇ ಮೂಲಭೂತ ಸೌಕರ್ಯಗಳನ್ನು ಇರುವದಿಲ್ಲ. ಈ ದೃಷ್ಟಿಯಿಂದ ಸಾರ್ವಜನಿಕವಾಗಿ ತೊಂದರೆಯಾಗಿದೆ.
ರೈತರ ವಾಹನಗಳಿಗೆ ಓಡಾಡಲು ಹೆಚ್ಚಿನ ಸರ್ವೀಸ್ ರಸ್ತೆ ಇಲ್ಲವಾಗಿದೆ. ಇಲ್ಲಿನ ಸಿಬ್ಬಂದಿ ವರ್ಗದಲ್ಲಿ ಭಾಷಾ ಜ್ಞಾನವಿಲ್ಲ ಇದರಿಂದ ತೊಂದರೆ ಉಂಟಾಗಿ ಜನರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಅಧ್ಯಕ್ಷರಾದ ಸತೀಶಗೌಡ ಮುದಿಗೌಡ್ರ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶವಂತಗೌಡ ದೊಡ್ಡಗೌಡ್ರ.
ಮುಖಂಡರಾದ ಗಿರೀಶ ಬಾರ್ಕಿ. ಹಸನಸಾಬ ಹತ್ತಿಮತ್ತೂರ.ಟಿಪ್ಪು ಸುಲ್ತಾನ ಮಕಾನದಾರ,ಪ್ರಭು ಗೊಡ್ಡೆಮ್ಮಿ.ರಾಮಕೃಷ್ಣ ಅಕುಡಕರ.ಶೀವಯೋಗೆಪ್ಪ ನಲವತ್ತವಾಡ.ರಾಘವೇಂದ್ರ ಕನವಳ್ಳಿ.ದಾದಾಪೀರ ಖಾಲೇಖಾನನವರ. ಗೌಸಪಾಕ ಭಾಲೇಭಾಯಿ ಹಾಗೂ ಮುಂತಾದ ಕಾರ್ಯಕರ್ತರು ಪಾಲ್ಗೊಂಡಿದ್ದರು.