ತುಮಕೂರು
ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಮತ್ತು ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರುಗಳ ಆಯ್ಕೆಗೆ ಬುಧವಾರ (ಜ.30) ಚುನಾವಣೆ ನಡೆಯಲಿದೆ. ಇದರೊಂದಿಗೆ ಈವರೆಗಿನ ಆಡಳಿತಾಧಿಕಾರಿಗಳ ಅವಧಿ ಮುಕ್ತಾಯಗೊಂಡು, ಮುಂದಿನ ಐದು ವರ್ಷಗಳ ಅವಧಿಗೆ ಚುನಾಯಿತ ಮಂಡಲಿ ಅಸ್ತಿತ್ವಕ್ಕೆ ಬರಲಿದೆ.
ಪಾಲಿಕೆಗೆ ಕಳೆದ ವರ್ಷ ಅಂದರೆ 2018 ರ ಆಗಸ್ಟ್ 31 ರಂದು ಪ್ರಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಸೆಪ್ಟೆಂಬರ್ 3 ರಂದು ಫಲಿತಾಂಶ ಪ್ರಕಟವಾಗಿತ್ತು. ಅದಾಗಿ ಬರೋಬ್ಬರಿ ಆರು ತಿಂಗಳುಗಳ ಬಳಿಕ ಇದೀಗ ಚುನಾಯಿತ ಮಂಡಲಿ ಅಧಿಕಾರಗ್ರಹಣ ಮಾಡಲಿದೆ.
ಮೇಯರ್ ಸ್ಥಾನವನ್ನು “ಹಿಂದುಳಿದ ವರ್ಗ -ಎ (ಮಹಿಳೆ)”ಗೆ ಮೀಸಲಿರಿಸಲಾಗಿದೆ. ಉಪಮೇಯರ್ ಸ್ಥಾನವನ್ನು “ಪರಿಶಿಷ್ಟ ಜಾತಿ (ಮಹಿಳೆ)”ಗೆ ಮೀಸಲಿರಿಸಲಾಗಿದೆ. ಇದರೊಂದಿಗೆ ಹೊಸ ಚುನಾಯಿತ ಮಂಡಲಿಯಲ್ಲಿ ಮಹಿಳಾ ಆಡಳಿತ ಮತ್ತೆ ಮುಂದುವರೆಯಲಿದೆ.
ಈವರೆಗಿನ ಮೇಯರ್‍ಗಳು
ಹಿಂದಿನ ಮಹಾನಗರ ಪಾಲಿಕೆಯ ಅಧಿಕಾರಾವಧಿಯಲ್ಲಿ ಐವರು ಮೇಯರ್‍ಗಳಾಗಿದ್ದರು. ಕಾಂಗ್ರೆಸ್‍ನ ಗೀತಾ ರುದ್ರೇಶ್ ದಿನಾಂಕ 20-12-2013 ರಿಂದ ದಿ. 04-02-2015 ರವರೆಗೆ; ಜೆಡಿಎಸ್‍ನ ಲಲಿತಾ ರವೀಶ್ ದಿನಾಂಕ 05-02-2015 ರಿಂದ ದಿ. 09-02-2016 ರವರೆಗೆ; ಕಾಂಗ್ರೆಸ್‍ನ ಯಶೋದಮ್ಮ ಶ್ರೀನಿವಾಸ್ ದಿನಾಂಕ 10-02-2016 ರಿಂದ ದಿ. 03-03-2017 ರವರೆಗೆ; ಜೆಡಿಎಸ್‍ನ ಎಚ್.ರವಿಕುಮಾರ್ ದಿನಾಂಕ 04-03-2017 ರಿಂದ 04-03-2018 ರವರೆಗೆ; ಕಾಂಗ್ರೆಸ್‍ನ ಸುಧೀಶ್ವರ್ ದಿನಾಂಕ 24-03-2018 ರಿಂದ ಪಾಲಿಕೆಗೆ ಚುನಾವಣೆ ಘೋಷಣೆ ಆಗುವವರೆಗೆ ಮೇಯರ್‍ಗಳಾಗಿ ಕಾರ್ಯನಿರ್ವಹಿಸಿದರು.