ಹರಪನಹಳ್ಳಿ:
ಪಟ್ಟಣದ ಹೊರವಲಯದಲ್ಲಿರುವ ಸುಕ್ಷೇತ್ರ ದೇವರ ತಿಮಲಾಪುರದ ಶ್ರೀ ವೆಂಕಟರಮಣ ಸ್ವಾಮಿಯ ರಥೋತ್ಸವ ಡಿ.22ರಂದು ಶನಿವಾರ ಸಂಜೆ 6.30ಕ್ಕೆ ನೆರವೇರಲಿದೆ.
ಕಂಕಣ ಉತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಶುಕ್ರವಾರ ಪಂಚಾಮೃತ ಅಭಿಷೇಕ, ನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸೇವೆ ನಡೆಯಿತು. ಶನಿವಾರ ಬೆಳಗ್ಗೆ ಶ್ರೀ ವೆಂಕಟರಮಣ ದೇವರಿಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ಶ್ರೀ ಸತ್ಯನಾರಾಯಣ ಪೂಜೆ ನೇರವೇರಲಿದೆ. ನಂತರ ಬ್ರಹ್ಮ ರಥೋತ್ಸವ ಹಾಗೂ ತೀರ್ಥ ಪ್ರಸಾದ ಸೇವೆ ಜರುಗಲಿದೆ.
ಸಂಜೆ ಸಕಲ ವಾದ್ಯಗಳೊಂದಿಗೆ ರಥಬೀದಿಯಲ್ಲಿ ಶ್ರೀ ವೆಂಕಟರಮಣ ದೇವರ ಸಾರ್ವಜನಿಕ ರಥೋತ್ಸವ. ಡಿ.23ರಂದು ಭಾನುವಾರ ಶ್ರೀ ಸ್ವಾಮಿಯು ಬೇಟೆಗೆ ಹೋಗುವುದು, ರಾತ್ರಿ 10ಕ್ಕೆ ಓಕಳಿ ಹಾಗೂ ಅವಾಭೃತ ಮಜ್ಜನ ನೆರವೇರಲಿದೆ.
ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವುದು ಶ್ರೀಸ್ವಾಮಿಯ ರಥೋತ್ಸವದ ವಿಶೇಷತೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
