ಬೆಂಗಳೂರು
2018-19 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ನಾಳೆ ಬೆಳಗ್ಗೆ ,11.30 ಕ್ಕೆ ಪ್ರಕಟಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್ ಹೇಳಿದ್ದಾರೆ. ಮೇ 2 ರಂದು ಫಲಿತಾಂಶ ಪ್ರಕಟಿಸುವುದಾಗಿ ತಾವು ಎಲ್ಲಿಯೂ ಹೇಳಿಲ್ಲ. ಅದು ಕೇವಲ ಊಹಾಪೋಹ ಎಂದು ಅವರು ಯುಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪ್ರೌಢಶಿಕ್ಷಣ ಮಂಡಳಿಯ ವೆಬ್ ಸೈಟ್ ನಲ್ಲಿ 12 ಗಂಟೆಗೆ ಫಲಿತಾಂಶ ದೊರೆಯಲಿದೆ. ಎಸ್ ಎಂಎಸ್ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ಫಲಿತಾಂಶ ಕಳುಹಿಸಲಾಗುತ್ತದೆ. ಮೇ 1ರಂದು ಶಾಲೆಗಳ ನೋಟಿಸ್ ಬೋರ್ಡ್ ನಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.ಈ ವರ್ಷ 2847 ಪರೀಕ್ಷಾ ಕೇಂದ್ರಗಳು 8.41 ಲಕ್ಷ ಪರೀಕ್ಷೆ ಬರೆದಿದ್ದಾರೆ.ಇಲಾಖೆಯ ವೆಬ್ ಸೈಟ್ www.karresults.nic.in ಹಾಗೂ www.kaceb.kar.nic.in