ತುಮಕೂರು
ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಡೆಯ ದಿನವಾದ ಮಾರ್ಚ್ 26ರಂದು ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಂಸದ ಜಿ.ಎಸ್.ಬಸವರಾಜ್, ಜನತಾದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ಕೆ.ಹುಚ್ಚೇಗೌಡ ಹಾಗೂ 6 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 8 ಅಭ್ಯರ್ಥಿಗಳಿಂದ 9 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಮಾರ್ಚ್ 19ರಿಂದ ಈವರೆಗೂ ಒಟ್ಟು 27 ಅಭ್ಯರ್ಥಿಗಳಿಂದ 35 ನಾಮಪತ್ರಗಳು ಸಲ್ಲಿಕೆಯಾಗಿವೆ.
ಬಿಜೆಪಿ ಅಭ್ಯರ್ಥಿಯಾಗಿ ತುಮಕೂರು ಗಾಂಧಿ ನಗರದ ಜಿ.ಎಸ್ ಬಸವರಾಜ್(77ವರ್ಷ) ಬಿನ್ ಲೇ.ಸಿದ್ದಪ್ಪ, ಜನತಾದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ತುರುವೇಕೆರೆ ತಾಲ್ಲೂಕು ಕಾಳಂಜಿಹಳ್ಳಿಯ ಕೆ.ಹುಚ್ಚೇಗೌಡ(73) ಬಿನ್ ಕರಿಯಣ್ಣಗೌಡ, ಪಕ್ಷೇತರ ಅಭ್ಯರ್ಥಿಗಳಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಭಟ್ಟರಹಳ್ಳಿ ಗ್ರಾಮದ ಬಿ.ಎಸ್.ಮಲ್ಲಿಕಾರ್ಜುನಯ್ಯ(45) ಬಿನ್ ಬಿ.ಜಿ.ಸಿದ್ದರಾಮಯ್ಯ(2 ನಾಮಪತ್ರ), ಬೆಂಗಳೂರಿನ ಹೆಚ್.ಎಂ.ಉದಯಶಂಕರ್(65) ಬಿನ್ ಮರಿಚಿಕ್ಕಯ್ಯ, ಮಧುಗಿರಿ ತಾಲ್ಲೂಕು ಹನುಮಂತಪುರದ ಹೆಚ್.ಎನ್.ನಾಗಾರ್ಜುನ(26) ಬಿನ್ ನಾರಾಯಣಪ್ಪ, ತಿಪಟೂರು ತಾಲ್ಲೂಕು ಹಿಪ್ಪೆತೋಪು ಗ್ರಾಮದ ಟಿ.ಎನ್.ಕುಮಾರಸ್ವಾಮಿ(56) ಬಿನ್ ಲೇ.ಟಿ.ಕೆ.ನಾರಾಯಣಪ್ಪ, ತುಮಕೂರು ನಗರದ ಜೆ.ಕೆ.ಶಮಿ(52) ಬಿನ್ ಮೊಹಮ್ಮದ್ ಜಾಫರ್ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ಎಂ.ಹೆಚ್.ಕಾವಲ್‍ನ ಹನುಮಂತರಾಮ ನಾಯಕ(35) ಬಿನ್ ಭೀಮಾನಾಯಕ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಯ ಮೊದಲನೇ ದಿನ(ಮಾರ್ಚ್ 19)ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ. ಎರಡನೇ ದಿನ ಅಂದರೆ ಮಾರ್ಚ್ 20ರಂದು ಇಬ್ಬರು ಅಭ್ಯರ್ಥಿಗಳಿಂದ 2 ನಾಮಪತ್ರ, ಮಾರ್ಚ್ 21ರಂದು ಇಬ್ಬರು ಅಭ್ಯರ್ಥಿಗಳಿಂದ 3 ನಾಮಪತ್ರ, ಮಾರ್ಚ್ 22ರಂದು ನಾಲ್ವರು ಅಭ್ಯರ್ಥಿಗಳಿಂದ 4, ಮಾರ್ಚ್ 25ರಂದು 11 ಅಭ್ಯರ್ಥಿಗಳಿಂದ 17 ನಾಮಪತ್ರ, ಕಡೆಯ ದಿನವಾದ ಮಾರ್ಚ್ 26ರಂದು 8 ಅಭ್ಯರ್ಥಿಗಳಿಂದ 9 ನಾಮಪತ್ರ ಸೇರಿ ಒಟ್ಟು 27 ಅಭ್ಯರ್ಥಿಗಳಿಂದ 35 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಅಧಿಸೂಚನೆಯನ್ನು ಮಾರ್ಚ್ 19ರಂದು ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಸಲು ಮಾರ್ಚ್ 26 ಕಡೆಯ ದಿನವಾಗಿತ್ತು. ಪರಿಶೀಲನೆ ಕಾರ್ಯ ಮಾರ್ಚ್ 27ರಂದು ನಡೆಯಲಿದ್ದು, ನಾಮಪತ್ರಗಳನ್ನು ಹಿಂಪಡೆಯಲು ಮಾರ್ಚ್ 29 ಕಡೆಯದಿನವಾಗಿದೆ. ಮತದಾನವನ್ನು ಏಪ್ರಿಲ್ 18ರಂದು ಹಾಗೂ ಮತ ಎಣಿಕೆಯನ್ನು ಮೇ 23ರಂದು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ