ದೇಶದ ಮೊದಲ ಮಾನವ ಸ್ಪರ್ಶ ರಹಿತ ಸ್ವಾಬ್ ಲ್ಯಾಬ್ ..!

ಬೆಂಗಳೂರು

    ಕೊರೋನಾ ಸೋಂಕಿತರನ್ನು ಪರೀಕ್ಷಿಸುವ ಹಾಗೂ ಶುಶ್ರೂಷೆ ನೀಡುವ ವೈದ್ಯಕೀಯ ಸಿಬ್ಬಂದಿ, ಆಶಾಕಾರ್ಯಕರ್ತೆಯರೂ ಸಹ ಕೋವಿಡ್‍ಗೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ. ಕೆಲವು ವೈದ್ಯಕೀಯ ಸಿಬ್ಬಂದಿ ಗಂಟಲು ದ್ರವ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ. ಇನ್ನು ಸ್ವ್ಯಾಬ್ ಟೆಸ್ಟಿಂಗ್‍ಗೆ ಒಳಪಡುವವರ ಸಂಖ್ಯೆಯೂ ಸಹ ಗಣನೀಯವಾಗಿ ಏರಿಕೆಯಾಗುತ್ತಿದ್ದು, ವರದಿ ತಡವಾಗುತ್ತಿದೆ. ಹೀಗಾಗಿ ಸೋಂಕಿತರ ತ್ವರಿತ ಪತ್ತೆ ವಿಳಂಬವಾಗುತ್ತಿದೆ.

    ಈ ಸಮಸ್ಯೆಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರದಂತೆ “ರೊಬೋಟಿಕ್ ಅಂದರೆ ಮಾನವ ಸ್ಪರ್ಶ ರಹಿತ ಸ್ವಾಬ್ ಟೆಸ್ಟಿಂಗ್ ಲ್ಯಾಬ್ ಶುರುವಾಗಿದೆ. ಅಂದಹಾಗೆ ಇದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮತಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಶುಭಾರಂಭವಾಗಿದೆ. ಭವಿಷ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಪತ್ತೆ ಮಾಡುವ ಕಾರ್ಯಕ್ಕೆ ಮಾನವ ಬಳಕೆ ಸಾಧ್ಯವಾಗದಿದ್ದರೆ ರೊಬೋಟಿಕ್ ತಂತ್ರಜ್ಞಾವನ್ನು ವ್ಯಾಪಕಗೊಳಿಸುವ ಉದ್ದೇಶದಿಂದ ಈ ಆಧುನಿಕ ಲ್ಯಾಬ್ ಪರಿಚಯಿಸಲಾಗಿದೆ.

     ಇದು ದೇಶದ ಮೊಟ್ಟಮೊದಲ ಮಾನವ ಸ್ಪರ್ಶ ರಹಿತ ಸ್ವಾಬ್ ಟೆಸ್ಟಿಂಗ್ ಲ್ಯಾಬ್ ಎನ್ನುವುದು ವಿಶೇಷ. ಲ್ಯಾಬ್ನಲ್ಲಿ ಮೊದಲ 96 ಸ್ವಾಬ್ ವರದಿಗೆ 3.5 ಗಂಟೆ ಸಮಯ ತಗುಲುತ್ತದೆ. ಇದಾದ ಬಳಿಕ ಪ್ರತೀ 90 ನಿಮಿಷಕ್ಕೆ 96 ಸ್ವಾಬ್ ತಪಾಸಣೆ ನಡೆಸಿ ವರದಿ ನೀಡಬಹುದು. ಇನ್ನು ಮುಂದೆ ಜಿಲ್ಲೆಯ ಜನ ಬಹುಬೇಗನೇ ಸ್ವಾಬ್ ರಿಪೆÇೀರ್ಟ್ ನೋಡಬಹುದಾಗಿದೆ.

      ಈ ಸ್ವಾಬ್ ಲ್ಯಾಬ್‍ನಲ್ಲಿ ಒಂದು ದಿನಕ್ಕೆ ಸುಮಾರು 500-800 ಮಂದಿಯ ನಿಖರ ವರದಿ ದೊರೆಯಲಿದೆ. ಅಲ್ಲದೇ ಇದಕ್ಕಾಗಿ ಬಳಕೆಯಾಗುತ್ತಿದ್ದ ಸಿಬ್ಬಂದಿ ಸಂಖ್ಯೆ ಕಾಲು ಭಾಗಕ್ಕಿಂತಲೂ ಕಡಿಮೆಯಾಗಲಿದೆ. ಸ್ವಾಬ್ ಲ್ಯಾಬ್ನಲ್ಲಿ ಪರೀಕ್ಷೆ ಮಾಡಲು 20ರಿಂದ 22 ಜನ ಆರೋಗ್ಯ ಸಿಬ್ಬಂದಿ ಕೆಲಸ ಮಾಡಬೇಕಿತ್ತು. ಈಗ ಸ್ವಾಬ್ ತೆಗೆಯುವ ವಿಧಾನ ಹೊರತುಪಡಿಸಿ ಹೆಚ್ಚುವರಿ ಸಿಬ್ಬಂದಿ ಬೇಕಿಲ್ಲ. ಒಂದು ಬಾರಿ ಯಾರಾದರೂ ಸ್ವಾಬ್ ತೆಗೆದು ಮಾನವ ಸ್ಪರ್ಶ ರಹಿತ ಲ್ಯಾಬ್ ದ್ವಾರದ ಪಾಸ್ ಬಾಕ್ಸ್ ನಲ್ಲಿ ಇಟ್ಟರೆ ಸಾಕು ಕೇವಲ 90 ನಿಮಿಷಕ್ಕೆ 96 ನಿಖರ ವರದಿ ಹೊರ ಬರಲಿದೆ.

    ಸಂಪೂರ್ಣ ಮಾಲಿನ್ಯ ರಹಿತ ಕೊಠಡಿಯಲ್ಲಿ ಇಂತಹ ಆಧುನಿಕ ವ್ಯವಸ್ಥೆ ಇದೆ. ಗಾಳಿ ಪ್ರತಿ ಗಂಟೆಗೆ 36 ಬಾರಿ ಪಿಲ್ಟರ್ ಮಾಡಿ ಹೊಸ ಗಾಳಿ ಬರುವಂತೆ ಮಾಢುತ್ತದೆ. ವಾತಾವರಣಕ್ಕೆ ಸಂಪೂರ್ಣ ಮಾಲಿನ್ಯ ರಹಿತ ಗಾಳಿ ಹೊರ ಹರಿಸುವುದು ಸಹ ಇದರ ಮತ್ತೊಂದು ವೈಶಿಷ್ಟ್ಯ. ವೈರಾಲಜಿ ಟೆಸ್ಟ್ ವ್ಯವಸ್ಥೆ, ಸೇಫ್ಟಿ ಕ್ಯಾಬಿನೆಟ್, ಕೋಲ್ಡ್ ಸೆಂಟರ್ ಫ್ಯೂಜ್ ಅನ್ನು ಇದು ಹೊಂದಿದೆ. 18 ಡಿಗ್ರಿಯಲ್ಲಿ ನಿಮಿಷಕ್ಕೆ 15 ಸಾವಿರ ಆರ್ಪಿಎಂ ಒಳಗೊಂಡ ವಿಶೇಷ ಲ್ಯಾಬ್ ಇದಾಗಿದೆ.

    0.3 ಮೈಕ್ರಾನ್ಗಿಂತ ಕಡಿಮೆ ಇರುವ ವಸ್ತುಗಳನ್ನೂ ಹಿಡಿಯುವ (ಟ್ರಾಪ್) ಮಾಡುವ ಸಾಮರ್ಥ್ಯ ಹೊಂದಿರುವ ನೂತನ ಲ್ಯಾಬ್ ಇದಾಗಿದ್ದು 22 ಮಂದಿ ಮಾಡುವ ಕೆಲಸಕ್ಕೆ ರೋಬೋಟಿಕ್ ಟೆಕ್ನಾಲಜಿಯಲ್ಲಿ 5 ಜನರು ಮಾತ್ರ ಸಾಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap