ಮೊಬೈಲ್ ಟವರ್ ಬ್ಯಾಟರಿ ಕಳವು ಪ್ರಕರಣ ಇಬ್ಬರ ಬಂಧನ,

ದಾವಣಗೆರೆ:

        ಮೊಬೈಲ್ ಟವರ್‍ಗಳ ಬ್ಯಾಟರಿ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಹೊನ್ನಾಳಿ ಪೊಲೀಸರು, ಬಂಧಿತರಿಂದ 5 ಲಕ್ಷ ರೂ. ಮೌಲ್ಯದ 97 ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ತಿಳಿಸಿದ್ದಾರೆ.

         ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲೆಯ ಶಿಕಾರಿಪುರ ತಾಲೂಕಿನ ಕುಸಗೂರು ಮೂಲದ, ಹಾಲಿ ಬೆಂಗಳೂರಿನ ಆನೇಕಲ್ಲು ತಾಲೂಕಿನ ಬಳೆಗಾರನಹಳ್ಳಿ ನಿವಾಸಿ, ಎಲೆಕ್ಟ್ರಿಷಿಯನ್ ಡಿ.ಇ. ಗಣೇಶ(26 ವರ್ಷ) ಹಾಗೂ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಗ್ರಾಮದ ಮುಲ್ಲಾ ಓಣಿಯ ನಿವಾಸಿ, ವಾಹನ ಚಾಲಕ ಜಬೀವುಲ್ಲಾ(32) ಬಂಧಿತ ಆರೋಪಿಗಳಾಗಿದ್ದಾರೆಂದು ಹೇಳಿದರು.

         ಇತ್ತೀಚೆಗೆ ಮೊಬೈಲ್ ಟವರ್‍ಗಳಿಗೆ ಅಳವಡಿಸಿದ ಬ್ಯಾಟರಿಗಳನ್ನು ಕದ್ದೊಯ್ಯುತ್ತಿದುದರ ಬಗ್ಗೆ ಚನ್ನಗಿರಿ, ಹೊನ್ನಾಳಿ, ಹರಿಹರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಆ ಪ್ರಕರಣಗಳನ್ನು ಭೇದಿಸಲು ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ್, ಗ್ರಾಮಾಂತರ ಡಿಎಸ್ಪಿ ಮಂಜುನಾಥ ಕೆ.ಗಂಗಲ್, ಹೊನ್ನಾಳಿ ಸಿಪಿಐ ಬ್ರಿಜೇಶ್ ಮ್ಯಾಥ್ಯು ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಹೊನ್ನಾಳಿ ತಾಲೂಕಿನ ಎಚ್.ಗೋಪಗೊಂಡನಹಳ್ಳಿ ಗ್ರಾಮದ ಮೊಬೈಲ್ ಟವರ್ ಬಳಿ ಕೆಎ 27, ಎ 8782 ಸಂಖ್ಯೆಯ ಟಾಟಾ ಏಸ್ ವಾಹನ ನಿಲ್ಲಿಸಿಕೊಂಡು, ಇಬ್ಬರು ಬ್ಯಾಟರಿ ಕಳವು ಮಾಡಲು ಹೊಂಚು ಹಾಕಿ ನಿಂತಿದ್ದರು. ಪಿಎಸ್‍ಐ ಎನ್.ಸಿ.ಕಾಡದೇವರಮಠ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಪೆಲೀಸ್ ವಾಹನದಲ್ಲಿ ಹೋಗುತ್ತಿದ್ದಂತೆಯೇ, ಇಬ್ಬರೂ ಓಡಿ ಹೋಗಲು ಯತ್ನಿಸಿದ್ದರು.

       ತಕ್ಷಣವೇ ಕಾರ್ಯಪ್ರವೃತರಾದ ಪೊಲೀಸರು ಇಬ್ಬರನ್ನೂ ಹಿಡಿದು ವಿಚಾರಣೆಗೊಳಪಡಿಸಿದಾಗ ಡಿ.ಇ.ಗಣೇಶ ತಾನು ಜಿಯೋ ಮೊಬೈಲ್ ಕಂಪನಿ ಟೆಕ್ನಿಷಿಯನ್ ಎಂಬುದಾಗಿ ಹೇಳಿ, ಗುರುತಿನ ಪತ್ರ ತೋರಿಸಿದ್ದಾನೆ. ಇಬ್ಬರೂ ಅಷ್ಟು ಹೊತ್ತಿನಲ್ಲಿಲ್ಲಿ ಇದ್ದ ಬಗ್ಗೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿ, ತಪಾಸಣೆ ಮಾಡಿದಾಗ ತಾವು ಮೊಬೈಲ್ ಟವರ್‍ಗಳಿಗೆ ಅಳವಡಿಸಿದ ಬ್ಯಾಟರಿ ಕಳವು ಮಾಡಿಕೊಂಡು ಹೋಗಲು ಬಂದಿದ್ದಾಗಿ ಒಪ್ಪಿಕೊಂಡಿದ್ದಾರೆಂದು ಮಾಹಿತಿ ನೀಡಿದರು.

        ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲೂಕುಗಳಷ್ಟೇ ಅಲ್ಲದೇ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ, ಹಲಗೇರಿ, ಹಿರೇಕೆರೂರು ಪೆÇಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ವಾಹನದಲ್ಲಿ ಹೋಗಿ ಮೊಬೈಲ್ ಟವರ್ ಬ್ಯಾಟರಿ ಕಳವು ಮಾಡುತ್ತಿದ್ದುದಾಗಿ, ತಾನು ಹಿಂದೆ ಜಿಯೋ ಕಂಪನಿಯಲ್ಲಿ ಟೆಕ್ನಿಷಿಯನ್ ಆಗಿದ್ದು, ಅದೇ ಗುರುತಿನ ಪತ್ರ, ಅನುಭವದಿಂದ ಬ್ಯಾಟರಿ ಕಳವು ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ. ತಾನು ಜಿಯೋ ಕಂಪನಿ ನೌಕರನೆಂದು ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ನಿಜಾಮ್ ಎಂಬುವರ ಬ್ಯಾಟರಿ ಅಂಗಡಿಗೆ ಆ ಬ್ಯಾಟರಿಗಳನ್ನು ಮಾರಾಟ ಮಾಡುತ್ತಿದ್ದ.

         ಅಲ್ಲದೇ ಹಾಳಾದ ಬ್ಯಾಟರಿಗಳನ್ನು ಕರಗಿಸಿ, ಅದರಲ್ಲಿದ್ದ ಸೀಸವನ್ನು 200ರಿಂದ 250 ರೂ.ಗೆ ಮಾರಾಟ ಮಾಡಿಕೊಳ್ಳುತ್ತಿದ್ದ. ದಾವಣಗೆರೆ ಜಿಲ್ಲೆ ಹೊನ್ನಾಳಿ ಠಾಣೆಯಲ್ಲಿ 3 ಪ್ರಕರಣ, ನ್ಯಾಮತಿ ಠಾಣೆ 1, ಚನ್ನಗಿರಿ ಠಾಣೆ 1. ಹಾವೇರಿ ಜಿಲ್ಲೆ ಹಲಗೇರಿ ಠಾಣೆಯಲ್ಲಿ 1, ರಟ್ಟಿಹಳ್ಳಿ ಠಾಣೆಯಲಲ್ಲಿ 6, ಹಿರೇಕೆಕೂರು ಠಾಣೆಯಲ್ಲಿ 1 ಬ್ಯಾಟರಿ ಕಳವು ಪ್ರಕರಣವನ್ನು ಭೇದಿಸಲಾಗಿದ್ದು, ಒಟ್ಟು 13 ಪ್ರಕರಣದಲ್ಲಿ 13.29 ಲಕ್ಷ ಮೌಲ್ಯದ ಬ್ಯಾಟರಿಗಳನ್ನು ಆರೋಪಿಗಳು ಕಳವು ಮಾಡಿದ್ದು, ಸದ್ಯಕ್ಕೆ ಆರೋಪಿಗಳ ಮಾಹಿತಿಯಂತೆ 2 ಪ್ರಕರಣಕ್ಕೆ ಸಂಬಂ„ಸಿದಂತೆ ಶಿರಾಳಕೊಪ್ಪದಲ್ಲಿ 5 ಲಕ್ಷ ಮೌಲ್ಯದ 97 ಬ್ಯಾಟರಿಗಳು, ಕೃತ್ಯಕ್ಕೆ ಬಳಸಿದ್ದ 2 ಲಕ್ಷ ಮೌಲ್ಯದ ಟಾಟಾ ಎಸಿ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಅವರು ವಿವರಿಸಿದರು.

         ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ, ಗ್ರಾಮಾಂತರ ಡಿಎಸ್ಪಿ ಮಂಜುನಾಥ ಕೆ.ಗಂಗಲ್, ಹೊನ್ನಾಳಿ ಸಿಪಿಐ ಬ್ರಿಜೇಶ್ ಮ್ಯಾಥ್ಯು, ಎಸ್‍ಐ ಎನ್.ಸಿ.ಕಾಡದೇವರ ಮಠ, ಸಿಬ್ಬಂದಿಯಾದ ಫೈರೋಜ್ ಖಾನ್, ವೆಂಕಟರಮಣ, ಸಿದ್ದನಗೌಡ, ಜಗದೀಶ, ರಾಘವೇಂದ್ರ, ತಾಂತ್ರಿಕವಾಗಿ ಸಹಕರಿಸಿದ ರಾಮಚಂದ್ರ ಜಾಧವ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link