ಬೆಂಗಳೂರು
ಕೆಲಸಕ್ಕೆ ಬಂದಿದ್ದ ಟ್ರಾಕ್ಟರ್ ಮಾಲೀಕರೊಬ್ಬರನ್ನು ಡ್ಯಾಗರ್ನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆಆರ್ ವೃತ್ತದ ಬಳಿ ಶನಿವಾರ ರಾತ್ರಿ ನಡೆದಿದೆ.
ಹೊಸಕೆರೆಹಳ್ಳಿಯ ಟ್ರಾಕ್ಟರ್ ಮಾಲೀಕ ಕಂ ಕಾಂಪ್ರೈಸರ್ ಕೆಲಸ ಮಾಡುತ್ತಿದ್ದ ಶಿವನಾಯಕ್ ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ.ಕೆಆರ್ ವೃತ್ತದ ಬಳಿ ಮುಖ್ಯ ಇಂಜಿನಿಯರ್ಸ್ ಕಚೇರಿ ಗೇಟ್ ಬಳಿ ಶಿವನಾಯಕ್ ಅವರ ಎದೆ ಹಾಗೂ ಪಕ್ಕೆಲುಬಿಗೆ ಡ್ಯಾಗರ್ ನಿಂದ ಇರಿದು ಕೊಲೆಗೈದಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಆಂಧ್ರಪ್ರದೇಶದ ಕುಪ್ಪಂ ಮೂಲದವರಾಗಿದ್ದ ಶಿವನಾಯಕ್ ಕಳೆದ 25 ವರ್ಷಗಳ ಹಿಂದೆ ನಗರಕ್ಕೆ ಬಂದು ಹೊಸಕೆರೆಹಳ್ಳಿಯಲ್ಲಿ ಮನೆ ಮಾಡಿಕೊಂಡು ಟ್ರಾಕ್ಟರ್ ಮಾಲೀಕರಾಗಿ ಕಾಂಪ್ರೈಸರ್ ಕೆಲಸ ಮಾಡುತ್ತಿದ್ದರು.ಶನಿವಾರ ರಾತ್ರಿ ಏಕಾಏಕಿ ಕರೆ ಮಾಡಿ ಮೃತ ಶಿವನಾಯಕ್ ಅವರನ್ನು ಕಂಟ್ರಾಕ್ಟರ್ ವೇಣುಗೋಪಾಲ್ ಎಂಬುವರು ಕೆಲಸಕ್ಕೆ ಕರೆದಿದ್ದರು.
ರಾತ್ರಿ ಕೆಲಸಕ್ಕೆ ಬಂದಿದ್ದ ಶಿವನಾಯಕ್ ಮೊಬೈಲ್ ಯಾರೋ ಸುಲಿಗೆ ಮಾಡಿ ಹೋಗುತ್ತಿದ್ದರು, ಅವರನ್ನು ಅಟ್ಟಿಸಿಕೊಂಡು ಹೋಗಿದ್ದ ಶಿವನಾಯಕ್ ಸುಲಿಗೇಕೋರರೇ ಡ್ಯಾಗರ್ ನಿಂದ ಇರಿದು ಹತ್ಯೆ ಮಾಡಿರುವುದಾಗಿ ಪ್ರಕರಣ ದಾಖಲಿಸಿರುವ ಹಲಸೂರು ಗೇಟ್ ಪೊಲೀಸರು ತಿಳಿಸಿದ್ದಾರೆ.