ದಾವಣಗೆರೆ
ನಗರದಲ್ಲಿ ಮೇ.07 ರಿಂದ 09 ರವರಗೆ ಜಿಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದಲ್ಲಿ ಸೈಬರ್ ಕ್ರೈಂ ನ ಬಗ್ಗೆ ಏರ್ಪಡಿಸಲಾಗಿದ್ದ ಜಾಗೃತಿ ತರಬೇತಿ ಕಾರ್ಯಕ್ರಮವನ್ನು ಸೈಬರ್ ಕ್ರೈಂ ಇನ್ಸ್‍ಪೆಕ್ಟರ್ ಟಿ.ವಿ. ದೇವರಾಜ್ ಇವರು ಉದ್ಘಾಟಿಸಿದರು.ಈ ವೇಳೆ ಅವರು ಸೈಬರ್ ಕ್ರೈಂಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಮೂರು ದಿನಗಳ ಕಾಲ ಸೈಬರ್ ಕ್ರೈಂಗಳನ್ನು ತಡೆಗಟ್ಟುವ ಬಗ್ಗೆ ಐಟಿ ತಂತ್ರಜ್ಞಾನ ಹಾಗೂ ಐಟಿ ಆಕ್ಟ್‍ಗಳ ಬಗ್ಗೆ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಯಿತು.
ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದ ವ್ಯವಸ್ಥಾಪಕ ಆರ್. ನಾಗರಾಜ್, ತರಬೇತುದಾರರಾದ ಮಂಜುನಾಥ್ ಗೋಡೆಕರ್, ಭರತ್, ಜ್ಯೋತಿ, ವಾಣಿಶ್ರೀ ಶಾಂತರಾಜ್ ಹಾಗೂ ಮಾಧವಿ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.