ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಿಂದ ಪಾರದರ್ಶಕತೆ ವೃದ್ಧಿಯಾಗುತ್ತದೆ : ಪ್ರೊ.ವೈ.ಎಸ್. ಸಿದ್ದೇಗೌಡ

ತುಮಕೂರು

       ವಿಶ್ವವಿದ್ಯಾನಿಲಯ, ಐ.ಕ್ಯೂ.ಎ.ಸಿ.,ಕೌಶಲ್ಯಾಭಿವೃದ್ಧಿ ಘಟಕ ಹಾಗೂ ಭಾರತ ಸರ್ಕಾರ ದೂರ ಸಂಪರ್ಕ ಇಲಾಖೆ ಸಹಯೋಗದಲ್ಲಿ (ಐ-ಮೇಡ್) ಇನೋವೇಶನ್ ಇನ್ ಮೊಬೈಲ್ ಅಪ್ಲಿಕೇಶನ್ಸ್ ಅಂಡ್ ಡೆವಲೆಂಪ್ಮೆಂಟ್ ಎಕೋ ಸಿಸ್ಟಂ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು

        ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರುಗಳಿಗೆ ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಭವನದಲ್ಲಿ ಆಯೋಜಿಸಲಾಗಿತ್ತು, ಕಾರ್ಯಗಾರ ಉದ್ಘಾಟಿಸಿದ ತುಮಕೂರು ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಪ್ರೊ.ವೈ.ಎಸ್.ಸಿದ್ದೇಗೌಡರವರು ಪ್ರಸ್ತುತ ಜಗತ್ತನ್ನು ಮಾಹಿತಿ ಮತ್ತು ತಂತ್ರಜ್ಞಾನ ಯುಗ.

        ಈ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಇದರ ವ್ಯಾಪ್ತಿಗೆ ಒಳಪಟ್ಟಿದ್ದು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಪ್ರಗತಿಯಿಂದಾಗಿ ಬದಲಾವಣೆ ಸಹಜವಾಗಿದೆ ಇಂತಹ ಅನಿವಾರ್ಯ ಸ್ಥಿತಿಗಳಲ್ಲಿ ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಯಗಳು ತಮ್ಮ ವಿದ್ಯಾರ್ಥಿಗಳಿಗೆ ಆಧುನಿಕ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಕೌಶಲ್ಯಗಳನ್ನು ಭೋಧಿಸುವ ಕಾರ್ಯ ಮಾಡಬೇಕಿದೆ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೇ ಸರ್ವಾಂಗೀಣ ವ್ಯಕ್ತಿತ್ವ ರೂಪಿಸುವ ಕಾರ್ಯ ಮಾಡಬೇಕಾಗಿರುವುದು ಆದ್ಯ ಕರ್ತವ್ಯವಾಗಿದೆ.

         ಉನ್ನತ ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಿಂದ ವೇಗ ಮತ್ತು ಪಾರದರ್ಶಕತೆಕಾಪಾಡಿಕೊಳ್ಳವುದರ ಮೂಲಕ ಆಧುನಿಕ ಸಮಾಜದೊಂದಿಗೆ ಸರಿದೂಗಿಸಬಹುದಾಗಿದೆ.ಈ ದೃಷ್ಟಿಯಿಂದ ಪ್ರತಿಯೊಬ್ಬ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

           ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕು.ತಾನಿಯಾ ನಿಗಾರ್ ಮತ್ತು ತಂಡ ಐ-ಮೇಡ್, ದೂರ ಸಂಪರ್ಕ ಇಲಾಖೆ,ಭಾರತ ಸರ್ಕಾರ ನವದೆಹಲಿ ಇವರು ಕಾರ್ಯಗಾರವನ್ನು ನೆಡೆಸಿಕೊಟ್ಟರು,ಈ ಕಾರ್ಯಗಾರದ ಸಂಘಟನಾ ಕಾರ್ಯದರ್ಶಿಗಳಾದ ಪ್ರೊ.ಪರಶುರಾಮ ಕೆ.ಜಿ ಉಪಸ್ಥಿತರಿದ್ದರು.ಈ ಕಾರ್ಯಗಾರದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap