ಬೆಂಗಳೂರು
ವಾಹನ ನೋಂದಣಿ ಫಲಕಗಳ ಮೇಲೆ ಹೆಸರು ಚಿಹ್ನೆಗಳನ್ನು ಹಾಕಿಸಿರುವುದನ್ನು ಕೂಡಲೇ ತೆರವುಗೊಳಿಸದಿದ್ದರೆ ದಂಡ ಪಾವತಿಸುವ ಜೊತೆಗೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ವಾಹನಗಳ ಮಾಲೀಕರು ತಮ್ಮ ವಾಹನಗಳ ನೋಂದಣಿ ಸಂಖ್ಯೆಗಳು ಫಲಕದ ಮೇಲೆ ವಿವಿಧ ಬಣ್ಣ ವಿವಿಧ ಶೈಲಿಯ ಚಿಹ್ನೆ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದು, ವಿವಿಧ ಬಣ್ಣಗಳಲ್ಲಿ ನೋಂದಣಿ ನಂಬರ್ ಬರೆದಿರುವುದನ್ನು ತೆರವುಗೊಳಿಸುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.
ವಾಹನಗಳ ನೋಂದಣಿ ಫಲಕದಲ್ಲಿ ನೋಂದಣಿ ಮಾರ್ಕ್ ಮತ್ತು ಸಂಖ್ಯೆಗಳು ನಿಗದಿತ ಅಳತೆಯಲ್ಲಿ ಇರಬೇಕು.
ಕೇಂದ್ರ ಮೋಟಾರು ವಾಹನ ನಿಯಮಾವಳಿಯ ಪ್ರಕಾರ ನಂಬರ್ ಪ್ಲೇಟ್ ಇಲ್ಲದ ವಾಹನಗಳ ಮಾಲೀಕರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವಾರದೊಳಗೆ ಅನಧಿಕೃತ ದೋಷಪೂರಿತ ನಂಬರ್ ಪ್ಲೇಟ್ ಗಳನ್ನು ತೆರವುಗೊಳಿಸಬೇಕೆಂದು ಸಾರಿಗೆ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ವಾಹನಗಳ ನೋಂದಣಿ ಫಲಕಗಳಲ್ಲಿ ಅನಧಿಕೃತವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗ ಹೆಸರನ್ನು ಹೋಲುವಂತಹ ರಾಷ್ಟ್ರೀಯ/ ರಾಜ್ಯ ಮಾನವ ಹಕ್ಕುಗಳ ಸಂಸ್ಥೆ, ಒಕ್ಕೂಟ ಇತ್ಯಾದಿ ಹೆಸರುಗಳನ್ನು ಲಾಂಛನಗಳನ್ನು ಮತ್ತು ಇತರ ಸಂಘ – ಸಂಸ್ಥೆಗಳ ಹೆಸರುಗಳನ್ನು ಹಾಕಿಸಿಕೊಳ್ಳುವುದು ಕೇಂದ್ರ ಮೋಟಾರು ವಾಹನ ನಿಯಮಗಳು ಉಲ್ಲಂಘನೆಯಾಗಲಿದೆ. ವಾರದೊಳಗೆ ಇಂತಹ ದೋಷಪೂರಿತ ನಂಬರ್ ಪ್ಲೇಟ್ ತೆರವುಗೊಳಿಸಬೇಕೆಂದು ಹೇಳಲಾಗಿದೆ.