ಕುಣಿಗಲ್
ವೇಗವಾಗಿ ಚಲಿಸುತ್ತಿದ್ದ ಬೈಕ್ ಸವಾರನೊಬ್ಬ ಆಯತಪ್ಪಿ ಹುಲ್ಲಿನ ಕೊಪ್ಪಲಿಗೆ ನುಗ್ಗಿದ ಪರಿಣಾಮ ಅಲ್ಲಿದ್ದ ಮರದಕೊಂಬ್ಬೆ ಕುತ್ತಿಗೆಯನ್ನು ಸೀಳಿಕೊಂಡು ಸಾವು ಬದುಕಿನ ನಡುವೆ ಬೈಕ್ ಚಾಲಕ ನರಳಾಡುತ್ತಿದ್ದಾನೆ.
ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮೇನಹಳ್ಳಿ ಗ್ರಾಮದ ಬಳಿ ವೇಗವಾಗಿ ಚಲಿಸುತ್ತಿದ್ದ ಬೈಕ್ ಇದ್ದಕ್ಕಿದ್ದಂತೆ ಆಯತಪ್ಪಿ ಹುಲ್ಲುಕೊಪ್ಪಲಿಗೆ ನುಗ್ಗಿದೆ. ಅಲ್ಲಿದ್ದ ಮರದ ಕೊಂಬೆಯೊಂದು ಬೈಕ್ ಸವಾರನ ಕತ್ತು ಸೀಳಿಕೊಂಡ ಒಳ ಹೋಗಿದೆ. ಇದೀಗ ಬೈಕ್ ಸವಾರ ಸಾವು ಬದುಕಿನಲ್ಲಿದ್ದಾನೆ. ಅಮೃತೂರು ಹೋಬಳಿಯ ಯಡವಾಣಿ ಗ್ರಾಮದ ನಂಜೇಶ್ (40) ಎಂದು ಗುರುತಿಸಲಾಗಿದ್ದು ಈತನನ್ನು ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








