ಪಾವಗಡ : ವರುಣನ ಆರ್ಭಟಕ್ಕೆ ಧರೆಗುರುಳಿದ ಮರ

ಪಾವಗಡ;-

      ರೊಪ್ಪ ಗ್ರಾಮದ ಸುತ್ತಮುತ್ತ ಸೋಮವಾರ ರಾತ್ರಿ ಸುರಿದ ಬಿರಿಗಾಳಿ ಸಹಿತ ಮಳೆಗೆ ನೂರಾರು ಮರಗಳು ಧರೆಗುಳಿದಿವೆ, ಕಡಮಲಕುಂಟೆ ಗ್ರಾಮದ ಮಲ್ಲಾರೆಡ್ಡಿ ಎನ್ನುವ ರೈತನ ಸುಮಾರು 25 ಮರಗಳು,ನಾಗರಾಜಪ್ಪ ಗೇ ಸೇರಿದ ಸುಮಾರು 200 ನುಗ್ಗೆ ಮರಗಳು ಹಾಗೂ 40 ಕ್ಕೂ ಅಧಿಕ ಮಾವಿನ ಗಿಡಗಳು ಬುಡಸಮೇತ ನೆಲಕಚ್ಚಿವೆ, ಪಟ್ಟಣದ ಗುಟ್ಟಹಳ್ಳಿ ಮತ್ತು ಹುಲಿಬೆಟ್ಟತಾಂಡಾದ ಮನೆಗಳಿಗೆ ಹೊದಿಸಿದ ಶೀಟ್ ಗಳು ಹಾರಿ ಹೋಗಿವೆ.

     ಸಂಬಂದಪಟ್ಟ ಇಲಾಖೆಯವರು ಸ್ಥಳಕ್ಕಾಗಮಿಸಿ ನಷ್ಟಪರಿಹಾರ ವಿತರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.ಸೋಮವಾರ ಮತ್ತು ಮಂಗಳವಾರ ರೊಪ್ಪ ಗ್ರಾಮದಲ್ಲಿ ಮಾರಿ ಹಬ್ಬ ಮತ್ತು ಉತ್ಸª ಅಚರಿಸುತ್ತಿದ್ದು, ಸೋಮವಾರ ರಾತ್ರಿ ಬಿರುಗಾಳಿ ಸಹಿತ ಬಿದ್ದ ಮಳೆಗೆ ರೊಪ್ಪ ಗ್ರಾಮದಲ್ಲಿ ನಾಟಕವಾಡಲು ನಿರ್ಮಿಸಿದ್ದ ನಾಟಕದ ಸೀನ್ ಹಾರಿ ಹೋಗಿ ಅಂದಾಜು 75 ಸಾವಿರ ನಷ್ಟ ಉಂಟಾಗಿದೆ ಎನ್ನಲಾಗಿದೆ.

     ಅಲ್ಲದೇ ಮಾರಿ ಹಬ್ಬ ಅಚರಿಸುತ್ತಿರುವುದರಿಂದ ನಮ್ಮ ಗ್ರಾಮಕ್ಕೆ ಮಳೆಯಾಗಿದೆ ಎಂದು ರೊಪ್ಪ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ,ಐದು ವರ್ಷಕ್ಕೊಮ್ಮೆ ಪಾವಗಡರೊಪ್ಪ ಗ್ರಾಮದಲ್ಲಿ ಮಾರಮ್ಮ ದೇವಿಯ ಊರಹಬ್ಬವನ್ನು ಅಚರಿಸುವುದು ವಾಡಿಕೆಯಾಗಿದ್ದು, ಈ ಬಾರಿಯು ಸಹ ಗ್ರಾಮಸ್ಥರೆಲ್ಲಾ ಒಟ್ಟಾಗಿ ಮಾರಮ್ಮ ದೇವಿಯ ಹಬ್ಬ ಅಚರಿಸಲು ಪೆನುಗೊಂಡ ರಸ್ತೆಯ ಮಾರ್ಗದಲ್ಲಿರುವ ಮಾರಮ್ಮ ದೇವಿಯ ದೇವಸ್ಥಾನಕ್ಕೆ ಮತ್ತು ಗ್ರಾಮದ ಮುಖ್ಯ ರಸ್ತೆಗಳಲ್ಲಿ ವಿದ್ಯತ್ ದೀಪಗಳಿಂದ ಅಲಂಕರಿಸಿದ್ದು, ಮಂಗಳವಾರ ನೂರಾರು ಕುರಿ- ಮೇಕೆ ಮತ್ತು ಕೋಳಿಗಳನ್ನು ಬಲಿಕೊಡಲಾಗಿದೆ,

      ಗ್ರಾಮದ ಮಹಿಳೆಯರು ಆರತಿದೀಪಗಳ ಮೂಲಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ವೆಂಕಟಾಪುರ ಜಿ.ಪಂ. ಸದಸ್ಯೆ ಗಾಯಿತ್ರಿಬಾಯಿ ಸಹ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿದರು,ಸೋಮವಾರ ರಾತ್ರಿ ರೊಪ್ಪ ಸುತ್ತಾಮುತ್ತಾ ಮಳೆಯಾಗಿರುವುದರಿಂದ ಪಕ್ಕದ ಗ್ರಾಮಗಳಾದ ಟಿ.ಎನ್. ಪೇಟೆ, ಕಡಮಲಕುಂಟೆ ಗ್ರಾಮಗಳ ಕೆರೆಕುಂಟೆಗಳಿಗೆ ಹಾಗೂ ಜಿಲ್ಲಾ ಪಂಚಾಯಿತಿಯಿಂದ ನಿರ್ಮಿಸಿರುವ ಪಿಕಪ್ ಗಳು ತುಂಬಿದ್ದು ಈ ಭಾಗದ ರೈತರು ಹರ್ಷ ವ್ಯಕ್ತ ಪಡಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link