ಗುಬ್ಬಿ
ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಸುರಿದ ಬಿರುಗಾಳಿ ಮಳೆಗೆ ರಸ್ತೆ ಬದಿಯ ಮರಗಳು, ವಿದ್ಯುತ್ ಕಂಬಗಳು, ಅಡಕೆ, ಬಾಳೆ ಮರಗಳು ಧರೆಗರುಳಿವೆ.
ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ಮಳೆ ತಂಪು ತಂದಿದೆ. ಉತ್ತಮವಾಗಿ ಬಿದ್ದ ಮಳೆ ರೈತರಿಗೆ ನೆಮ್ಮದಿ ತಂದಿದೆಯಾದರೂ ಜೋರಾಗಿ ಬೀಸಿದ ಬಿರುಗಾಳಿಯಿಂದಾಗಿ ಉತ್ತಮವಾಗಿ ಬೆಳೆಕೊಡುತ್ತಿದ್ದ ಸಾವಿರಾರು ಬೆಲೆಬಾಳುವ ಅಡಕೆ, ಬಾಳೆ ಮರಗಳು ನೆಲಕ್ಕುರುಳಿವೆ.
ಪಟ್ಟಣದ ಗಟ್ಟಿ ಬಡಾವಣೆಯಲ್ಲಿ ವಿದ್ಯುತ್ ಕಂಬ ಉರುಳಿ ಬಿದ್ದ ಕಾರಣ ರಾತ್ರಿ 9 ಗಂಟೆಯವರೆಗೂ ವಿದ್ಯುತ್ ಇಲ್ಲದೆ ಪಟ್ಟಣವಾಸಿಗಳು ತೀವ್ರ ಸಮಸ್ಯೆ ಎದುರಿಸುವಂತಾಯಿತು. ಪಟ್ಟಣದ ರಸ್ತೆ ಬದಿಯ ಮರಗಳ ಕೊಂಬೆಗಳು ಬಿರುಗಾಳಿಗೆ ಉರುಳಿ ಬಿದ್ದ ಕಾರಣ ಸಂಚಾರಕ್ಕೆ ತೊಂದರೆಯಾಯಿತು. ಪಟ್ಟಣದ ಯುವಕರು ರಸ್ತೆಗೆ ಅಡ್ಡಲಾಗಿ ಬಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸುವ ಮೂಲಕ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








