ನಿಧಿಯಾಸೆಗೆ ಮಂಟಪದ ಕಂಬ ಕೆಡವಿದರು

ಮಿಡಿಗೇಶಿ

      ಮಿಡಿಗೇಶಿ ಹೋಬಳಿ ಬೇಡತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಗ್ರಾಮ ಎಮ್ಮೆತಿಮ್ಮನಹಳ್ಳಿಯ ಹಳೆಯೂರು ಈಗ ಹಾಲಿ ಜಮೀನಾಗಿ ಪರಿವರ್ತನೆಗೊಂಡಿದೆ. ಈ ಭೂಮಿ ಇದೇ ಗ್ರಾಮದ ಪ್ರಸನ್ನಕುಮಾರ ಬಿನ್ ದಾಸಪ್ಪನವರಿಗೆ ಸೇರಿದ್ದು, ಸದರಿ ಭೂಮಿಯಲ್ಲಿ ಏಳೆಂಟು ಕಲ್ಲಿನ ಕಂಬಗಳ ಹಳೆಯ ಮಂಟಪವಿದೆ.

     ಇತ್ತೀಚೆಗಷ್ಟೆ ಗೋಚರಿಸಿದ ಸೂರ್ಯಗ್ರಹಣದಂದು ರಾತ್ರಿ ಸಮಯದಲ್ಲಿ ಸದರಿ ಕಂಬಗಳಿಗೆ ನೂಲಿನ ದಾರದಿಂದ ದಿಗ್ಬಂಧನ ಮಾಡಿದ್ದಾರೆ. ನಿಂಬೆಹಣ್ಣುಗಳನ್ನು ಹಚ್ಚಿ, ಅರಿಸಿನ ಕುಂಕುಮ ಹಾಕಿ, ಪೂಜೆ ನಡೆಸಿದ್ದಾರೆ. ಕಂಬಗಳನ್ನು ಕೆಡವಿದ್ದಾರೆ. ಕಳೆದ ಒಂದು ತಿಂಗಳ ಕಾಲಾವಧಿಯಲ್ಲಿ ಮೂರು ಬಾರಿ ನಿಧಿ ಶೋಧನೆಗಾಗಿ ಇಲ್ಲಿ ಅಗೆಯಲಾಗಿದೆ. ಈ ಕೃತ್ಯವೆಸಗಿರುವುದು ಕಂಬಗಳ ಕೆಳಗೆ ನಿಧಿ ಇರುತ್ತದೆಂಬ ಮೂರ್ಖತನದಿಂದ. ಘಟನೆ ಬಗ್ಗೆ ಪ್ರಸನ್ನಕುಮಾರ್ ಮೌಖಿಕವಾಗಿ ಮಿಡಿಗೇಶಿ ಪೊಲೀಸ್‍ಠಾಣೆಗೆ ಸುದ್ದಿ ಮುಟ್ಟಿಸಿರುತ್ತಾರೆ. ಮಧುಗಿರಿ ಪಟ್ಟಣದ ಸರ್ಕಲ್ ಇನ್‍ಸ್ಪೆಕ್ಟರ್‍ಗೂ ಸಹ ಘಟನೆ ಬಗ್ಗೆ ವಿಷಯ ತಿಳಿಸಿರುತ್ತಾರೆ.

     ಮಿಡಿಗೇಶಿ ಠಾಣೆಯ ಕಾನ್‍ಸ್ಟೇಬಲ್ ಸ್ಥಳಕ್ಕೆ ಭೇಟಿ ನೀಡಿ ಕೈತೊಳೆದು ಕೊಂಡಿರುತ್ತಾರೆ. ಆದ್ದರಿಂದ ಮಿಡಿಗೇಶಿ ಹೋಬಳಿಯ ವ್ಯಾಪ್ತಿಯಲ್ಲಿ ಅಗಿದ್ದಾಂಗ್ಗೆ ಅಮಾವಾಸ್ಯೆ, ಪೌರ್ಣಮಿ ದಿನಗಳ ರಾತ್ರಿ ಸಮಯದಲ್ಲಿ ನಿಧಿ ಶೋಧನೆಗೆ ಪ್ರಯತ್ನ ಪಡುತ್ತಿರುವಂತಹ ನಿಧಿ ಶೋಧಕರನ್ನು ಪತ್ತೆ ಮಾಡಬೇಕೆಂದು ಎಮ್ಮೇತಿಮ್ಮನಹಳ್ಳಿ, ಶ್ರವಣಗುಡಿ, ಎಸ್ ಅಪ್ಪೇನಹಳ್ಳಿ ಗ್ರಾಮಸ್ಥರು ಈ ಮೂಲಕ ಮನವಿ ಮಾಡಿಕೊಂಡಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap