ದಾರ್ಶನಿಕರ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಕರೆ

ತುಮಕೂರು:

       ಕರ್ನಾಟಕ ಬೌದ್ಧ ಸಮಾಜ ತುಮಕೂರುರವರ ವತಿಯಿಂದ 62ನೇ ದಮ್ಮಚಕ್ಕ ಪ್ರವರ್ತನ ದಿನಾಚರಣೆಯ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಚಿಂತನೆಗಳು: ಯುವಜನತೆ ಸಾಗಬೇಕಾದದಾರಿ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಕ್ರಮವನ್ನು ಬಾಲಭವನ ಸಂಭಾಗಂಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

        ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿಶ್ವವಿದ್ಯಾನಿಲಯದ ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಬಸವರಾಜು ಪ್ರಸ್ತುತ ದಿನಗಳಲ್ಲಿ ಶೋಷಿತ ಮತ್ತು ಹಿಂದುಳಿದ ಸಮುದಾಯದ ಯುವ ಸಮುದಾಯವು ಪ್ರಜ್ಞಾಪೂರ್ವಕವಾಗಿ ವೈಚಾರಿಕ ಜೀವನವನ್ನು ನಡೆಸಲು ಅಂಬೇಡ್ಕರ್ ಮತ್ತು ಈ ದೇಶದ ಸಾಮಾಜಿಕ ನ್ಯಾಯಕ್ಕಾಗಿ ದುಡಿದ ದಾರ್ಶನಿಕರ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು.

      ನಮ್ಮ ಮುಂದಿನ ಭವಿಷ್ಯಕ್ಕಾಗಿ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು ಬಹುತ್ವದ ಭಾರತವನ್ನು ಸದೃಢವಾಗಿ ನಿರ್ಮಿಸಿ ವಿವಿಧತೆಯಲ್ಲಿ ಏಕತೆಯನ್ನು ಸಾರಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತುಮಕೂರು ವಿಶ್ವವಿದ್ಯಾನಿಲಯದಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಲೋಕೇಶ್‍ಎಂ.ಯು ಡಾ.ಬಿ.ಆರ್ ಅಂಬೇಡ್ಕರ್ ರವರ ಚಿಂತನೆಗಳು ವಾಸ್ತವಕ್ಕೂ ಮತ್ತು ಭವಿಷ್ಯಕ್ಕೂ ಸರ್ವಕಾಲಿಕ ಒಪ್ಪಿತವಾದ ವಿಷಯಗಳಾಗಿವೆ.

      ಸಾಮಾಜಿಕ ವ್ಯವಸ್ಥೆಯಲ್ಲಿನ ಜಾತಿ ಪದ್ಧತಿ ಮತ್ತು ಅಸ್ಪಷ್ಯತೆ ತೊಳೆಯಲು ಜಾತಿ ವಿನಾಶ ಕೃತಿಯು ಹೇಳುವಂತೆ ಸಹ ಪಂಕ್ತಿ ಭೋಜನ ಮತ್ತು ಅಂತರ್‍ಜಾತಿ ವಿವಾಹಗಳು ಸಾಮಾನ್ಯವಾಗಿ ನಡೆದಾಗ ಸಮಾಜದ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಂಪನ್ನೂಲ ವ್ಯಕ್ತಿಗಳಾದ ಕರ್ನಾಟಕ ಭೌದ್ಧಸಮಾಜದ ರಾಜ್ಯಾಧ್ಯಕ್ಷರಾದ ಹ.ರಾ. ಮಹೇಶ್ ಮಾತನಾಡಿ ಭಾರತದ ನೈಜ್ಯ ಇತಿಹಾಸ ಅವಲೋಕಿಸಿದ್ದೇ ಆದಲ್ಲಿ ಈ ದೇಶದ ಶೋಷಿತ ಮತ್ತು ಹಿಂದುಳಿದ ವರ್ಗದವರೆಲ್ಲರೂ ಬೌದ್ಧರೇ ಆಗಿದ್ದರು.

       ಈ ಒಂದು ನೈಜ ಚಾರಿತ್ರಿಕ ಸಂಗತಿಯನ್ನು ಸಂಶೋಧಿಸಿದ ಡಾ.ಬಿ.ಆರ್‍ಅಂಬೇಡ್ಕರ್‍ರವರು ಈ ನೆಲದ ಧರ್ಮವಾದ ಬೌದ್ಧಧರ್ಮವನ್ನು ಒಪ್ಪಿಕೊಂಡು ಗೌತಮ ಬುದ್ಧ ಸಮಾಜಕ್ಕೆ ನೀಡಿದ ತತ್ವ ಉಪದೇಶಗಳನ್ನು ಹಾಗೂ ಸಮಾಜದಲ್ಲಿರುವ ಕಳಂಕಗಳನ್ನು ತೊಳೆಯಲು ಪ್ರಯತ್ನಿಸಿರುವುದನ್ನು ಶೋಷಿತ ಸಮುದಾಯದ ಯುವ ಸಮುದಾಯ ಅರ್ಥ ಮಾಡಿಕೊಂಡು ಭಾತೃತ್ವ, ಸಹಭಾಳ್ವೆ, ಸಹಿಷ್ಣುತೆ, ಸಮಾನತೆ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಘನತೆಯುತ ಜೀವನ ಸಾಗಿಸಲು ಸಂವಿಧಾನವನ್ನು ಅರ್ಥಮಾಡಿಕೊಂಡು ಅಂಬೇಡ್ಕರ್‍ರವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಪ್ರಬುದ್ದರಾಷ್ಟ್ರ ನಿರ್ಮಿಸಬೇಕು ಎಂದು ತಿಳಿಸಿದರು.

       ಕಾರ್ಯಕ್ರಮದಲ್ಲಿ ಲಕ್ಷ್ಮೀರಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಷಮೀಂ ಉನ್ನೀಸಾ, ಅಬ್ದುಲ್ ವಹಾಬ್, ಶಿವಪ್ಪ, ದೈಹಿಕ ನಿರ್ದೇಶಕರಾದ ಶಿವಪ್ರಸಾದ್, ರಾಜಶೇಖರ್.ಸಿ, ಸರವಣ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap