ದಾವಣಗೆರೆ :
ನಗರದ ಗುರುಭವನದಲ್ಲಿ ಭಾನುವಾರ ಶ್ರೀತಿರುಮಲ ತಿರುಪತಿ ದೇವಸ್ಥಾನದ ಆಶ್ರಯದಲ್ಲಿ ಹಾಗೂ ಪಗಡಾಲ ಅನಂತ ತೀರ್ಥ ವಿಶೇಷಾಧಿಕಾರಿಗಳು ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿ ಇವರ ನಿರ್ದೇಶನದಂತೆ ಜಿಲ್ಲೆಯ ಟಿಟಿಡಿ ಜಿಲ್ಲಾ ಸಂಚಾಲಕ ಬಿ.ಟಿ. ಸಿದ್ಧಪ್ಪರ ನೇತೃತ್ವದಲ್ಲಿ ಪ್ರಾಜೆಕ್ಟ್‍ನ ಅಡಿಯಲ್ಲಿ 2000 ಜನ ಭಜನಾ ಮಂಡಳಿಯ ಸದಸ್ಯರುಗಳಿಗೆ ನೊಂದಣಿಪತ್ರಗಳನ್ನು ವಿತರಿಸಲಾಯಿತು.
ನವೆಂಬರ್ 16, 17 ಹಾಗೂ 18ರಂದು ತಿರುಪತಿಯಲಿ ನಡೆಯಲಿರುವ 3 ದಿನಗಳ ಮೆಟ್ಟಿಲೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಸಹ ಇದೇ ಸಂದರ್ಭದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷೆ ನಳಿನಿ, ಶೀಲಾ ನಟರಾಜ್, ಮಹಾಲಕ್ಷ್ಮಿ, ಕುಮಾರಿ, ಸುಜಾತ, ಪವನ್ ಕುಮಾರ್, ಪಂಚಾಕ್ಷರಯ್ಯ, ರಾಧಮ್ಮ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ