ತಿಪಟೂರು
ನಮ್ಮ ಕಲ್ಪತರು ನಾಡು ಕ್ರೀಡೆ, ಸಾಹಿತ್ಯ, ಸಂಸ್ಕøತಿಗಳ ತವರೂರು. ನಮ್ಮ ಮಣ್ಣಿನಲ್ಲಿ ಅಂತಹ ಗುಣವಿದೆ ಎಂದು ಶಾಸಕ ಬಿ.ಸಿ. ನಾಗೇಶ್ ತಿಳಿಸಿದರು.
ಶನಿವಾರ ನಗರದ ವಿನೋದ ಟಾಕೀಸ್ ಪಕ್ಕದ ಮೈದಾನದಲ್ಲಿ ತಿಪಟೂರು ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಆಯೋಜಿಸಿರುವ ತುಮಕೂರು ಜಿಲ್ಲಾ ಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಿಪಟೂರು ಕ್ರೀಡೆಗೆ ರಾಜ್ಯದಲ್ಲೇ ಹೆಸರುವಾಸಿಯಗಿದೆ. ನಮ್ಮ ತಾಲ್ಲೂಕಿನಲ್ಲಿ ಕ್ರೀಡಾಪಟುಗಳು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟವನ್ನು ಪ್ರತಿನಿಧಿಸುತ್ತಿದ್ದಾರೆ.
ಶಾಲಾ ಮಟ್ಟದಲ್ಲಿ ಕ್ರೀಡೆಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸದ ಕಾರಣ ಕ್ರೀಡೆ ಎಂದರೆ ಜನರಲ್ಲಿ ಬೇಸರದ ಭಾವನೆ ಮೂಡುತ್ತಿದೆ. ನಮ್ಮ ತಿಪಟೂರು ಹಿಂದೆ ಫುಟ್‍ಬಾಲ್‍ಗೆ ಹೆಸರುವಾಸಿಯಾದ ತಂಡವಾಗಿದ್ದು, ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆ ಮತ್ತು ಭದ್ರಾವತಿ ಉಕ್ಕು ಕಾರ್ಖಾನೆಯಲ್ಲಿದ್ದ ಜರ್ಮನಿ ಅಧಿಕಾರಿಗಳು ಫುಟ್‍ಬಾಲ್ ಪಂದ್ಯಾವಳಿಗಳನ್ನು ಆಡಲು ತಿಪಟೂರಿಗೆ ಬರುತ್ತಿದ್ದರು.
ತಿಪಟೂರು ಸ್ಪೋಟ್ರ್ಸ್ ಕ್ಲಬ್ ಹಿಂದಿನಿಂದಲೂ ಕ್ರೀಡೆಗೆ ಸಹಕಾರ ನೀಡುತ್ತಾ ಕಬಡ್ಡಿ, ಖೋ-ಖೋ ಪಂದ್ಯಾವಳಿಗಳನ್ನು ಆಯೋಜಿಸಿ, ಕ್ರೀಡಾಪಟುಗಳನ್ನು ಉತ್ತೇಜಿಸುತ್ತಾ ಬರುತ್ತಿರುವುದು ಪ್ರಶಂಸನೀಯವಾದುದು. ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವೆ ಹೊರತು ಸೋಲು ಗೆಲುವು ಮುಖ್ಯವಲ್ಲ. ಎರಡನ್ನೂ ಸಮಾನವಾಗಿ ಸ್ವೀಕರಿಸಿ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ತಿಪಟೂರು ಸ್ಪೋಟ್ರ್ಸ್ ಕ್ಲಬ್ ಗೌರವಾಧ್ಯಕ್ಷ ಲೋಕೇಶ್ವರ ಮಾತನಾಡಿ, ಸ್ವಾಮಿ ವಿವೇಕಾನಂದರು ಹತ್ತಾರು ಆಸ್ಪತ್ರೆಗಳನ್ನು ಕಟ್ಟಿಸುವ ಬದಲು ಒಂದು ಕ್ರೀಡಾಂಗಣವನ್ನು ಕಟ್ಟಿಸಿ ಎಂದಿದ್ದರು. ಕ್ರೀಡೆಯಲ್ಲಿ ಭಾಗವಹಿಸಿದರೆ ಮನಸ್ಸು ಮತ್ತು ದೇಹ ಹಗುರಾಗಿ ದೇಹದಲ್ಲಿ ಹೊಸ ಚೈತನ್ಯ ತುಂಬುತ್ತದೆ.
ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ನಮ್ಮ ಸಂಸ್ಥೆಯು ಪ್ರಯತ್ನಿಸುತ್ತಿದೆ. ಕಲ್ಪತರು ನಾಡಿನಲ್ಲಿ ನೂರಾರು ಕ್ರೀಡಾ ಪ್ರತಿಭೆಗಳಿದ್ದು, ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಕಲ್ಪತರು ನಾಡಿಗೆ ಕೀರ್ತಿ ತಂದಿದ್ದಾರೆ. ತಾಲ್ಲೂಕಿನಲ್ಲಿ 1972ರಲ್ಲಿ ಸ್ಥಾಪನೆಗೊಂಡ ತಿಪಟೂರು ಸ್ಪೋಟ್ರ್ಸ್ ಕ್ಲಬ್ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿ ಇತಿಹಾಸ ನಿರ್ಮಿಸಿದೆ. ಖೋ-ಖೋ, ಕಬಡ್ಡಿಯ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಕಬಡ್ಡಿ ಅಪ್ಪಟ ಗ್ರಾಮೀಣ ಕ್ರೀಡೆಯಾಗಿದ್ದು, ಇದಕ್ಕೆ ಹೆಚ್ಚಿನ ಖರ್ಚು ಇರುವುದಿಲ್ಲ.
ಇಂದು ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಪ್ರೊ.ಕಬಡ್ಡಿ ಲೀಗ್‍ನಿಂದ ಎಷ್ಟ್ಟೊ ಬಡ ಕೀಡಾಪಟುಗಳು ಬೆಳಕಿಗೆ ಬಂದು, ಹಣವನ್ನು ನೋಡುವಂತಾಗಿದೆ. ಇಂದಿನ ಯುವಜನತೆ ಮತ್ತು ಮಕ್ಕಳು ಕಂಪ್ಯೂಟರ್ ಮತ್ತು ಮೊಬೈಲ್‍ಗಳನ್ನು ಬಿಟ್ಟು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಟಿ.ಎನ್. ಪ್ರಕಾಶ್, ನಗರಸಭಾ ಸದಸ್ಯರಾದ ಸೊಪ್ಪು ಗಣೇಶ್, ರಾಜಶೇಖರ್, ನಿಜಗುಣ, ತಹಸೀಲ್ದಾರ್ ಡಾ.ವಿ. ಮಂಜುನಾಥ್, ಗ್ರಾಮಾಂತರ ಸಿ.ಪಿ.ಐ ಕೃಷ್ಣಂರಾಜು, ರೋಟರಿ ಅಧ್ಯಕ್ಷ ಶಿವಶಂಕರ್, ಹಿರಿಯ ಕ್ರೀಡಾಪಟುಗಳಾದ ಟಿ.ಎಸ್. ಶಿವಪ್ರಸಾದ್, ಬಸವರಾಜು, ಸೇರಿದಂತೆ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







