ತುಮಕೂರು
ಯುಪಿಎಸ್‍ಸಿ ಪರೀಕ್ಷೆಯಲ್ಲಿ ತಿಪಟೂರಿನ ನಾಗಾರ್ಜುನ ಬೆಟ್ಟೇಗೌಡ 418ನೇ ರ್ಯಾಂಕ್ ಗಳಿಸಿದ್ದಾರೆ. ಈ ವಿದ್ಯಾರ್ಥಿ ತುಮಕೂರಿನ ಚೇತನ ಪ್ರೌಢಶಾಲೆಯಲ್ಲಿ, ಆನಂತರ ಸರ್ವೋದಯ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿ ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರ್ಪಡೆಯಾಗಿದ್ದರು. ಯುಪಿಎಸ್‍ಸಿ ಪರೀಕ್ಷೆಯಲ್ಲಿ 2ನೇ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರ ತಂದೆ ಬೆಟ್ಟೇಗೌಡ ಅವರು ತಿಪಟೂರು ಪಲ್ಲಾಘಟ್ಟಿ ಅಡವಪ್ಪ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದರು. ಬೆಟ್ಟೇಗೌಡರು ಮತ್ತು ಪ್ರಭಾ ದಂಪತಿಗಳ ಪುತ್ರನಾದ ನಾಗಾರ್ಜುನ್ ರಾಷ್ಟ್ರೀಯ ಖೋ ಖೋ ಆಟಗಾರರಾಗಿ ಗಮನ ಸೆಳೆದಿದ್ದಾರೆ. ಇವರಿಗೆ ಐಎಎಸ್ ಪದವಿ ಸಿಗುವ ಸಾಧ್ಯತೆಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ