ಟೆಲಿವಿಷನ್‌ ಸುದ್ದಿ ಕೌಶಲಗಳು ಕುರಿತ ಒಂದು ದಿನದ ಕಾರ್ಯಾಗಾರ

ತುಮಕೂರು:

    ಆಧುನಿಕ ಮಾಧ್ಯಮಗಳ ವೇಗಕ್ಕೆ ಹೊಂದಿಕೊಳ್ಳಬೇಕಾದರೆ ಯುವಪತ್ರಕರ್ತರು ತಮ್ಮ ಪ್ರಾಯೋಗಿಕ ಕೌಶಲಗಳನ್ನು ಹರಿತಗೊಳಿಸುವ ಅಗತ್ಯವಿದೆ ಎಂದು ಪತ್ರಕರ್ತ ಪಿ. ಎಲ್.‌ಮಾರುತೇಶ್‌ ತಿಳಿಸಿದರು.

     ತುಮಕೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು  ಹಮ್ಮಿಕೊಂಡಿದ್ದʼಟೆಲಿವಿಷನ್‌ ಸುದ್ದಿ ಕೌಶಲಗಳುʼ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

      ಬದಲಾಗುತ್ತಿರುವ ಕಾಲದಲ್ಲಿ ಟಿವಿ ವಾಹಿನಿಗಳು ವೇಗ ಹಾಗೂ ದಕ್ಷತೆಯನ್ನು ಬಯಸುತ್ತವೆ. ಪ್ರಚಲಿತ ವಿದ್ಯಮಾನಗಳ ಕುರಿತ ವಿಸ್ತಾರವಾದ ತಿಳುವಳಿಕೆಯೊಂದಿಗೆ ಟಿವಿ ಕ್ಷೇತ್ರ ಬಯಸುವ ಚುರುಕುತನ ಹಾಗೂ ಕೌಶಲಗಳನ್ನು ಯುವ ಪತ್ರಕರ್ತರು ಬೆಳೆಸಿಕೊಳ್ಳಬೇಕು ಎಂದರು.

     ತರಗತಿಯಲ್ಲಿ ತಿಳಿದುಕೊಳ್ಳುವ ಸೈದ್ಧಾಂತಿಕ ವಿಷಯಗಳ ತಳಹದಿಯಲ್ಲಿ ಪ್ರಾಯೋಗಿಕ ಜ್ಞಾನವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ಸಿದ್ಧಾಂತ ಮತ್ತು ಪ್ರಯೋಗಗಳ ನಡುವೆ  ಸಮತೋಲನ ಸಾಧಿಸುವುದು ಇಂದಿನ ಅಗತ್ಯ ಎಂದರು.

      ಮಾಧ್ಯಮ ಕ್ಷೇತ್ರದಲ್ಲಿ ಇಂದು ವಿಫುಲ ಅವಕಾಶಗಳಿವೆ. ಯುವ ಜನರು ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲಬೇಕಾದರೆ ಜ್ಞಾನ ಹಾಗೂ ಆತ್ಮವಿಶ್ವಾಸ ಎರಡರ ಸಮ್ಮಿಳನ ಅಗತ್ಯವಿದೆ ಎಂದರು.

       ವಿಭಾಗದ ಸಂಯೋಜಕ ಸಿಬಂದಿ ಪದ್ಮನಾಭ ಕೆ. ವಿ. ಮಾತನಾಡಿ, ಕೌಶಲಗಳ ಪರಿಣತಿ ಅಚಾನಕ್ಕಾಗಿ ಸೃಷ್ಟಿಯಾಗುವ ವಿದ್ಯೆಯಲ್ಲ. ಅದಕ್ಕೆ ನಿರಂತರ ಪರಿಶ್ರಮಬೇಕು. ಯಾವುದೇ ಕಲೆಯ ಅಭ್ಯಾಸದಲ್ಲಿ ನಿರಂತರತೆ ಇದ್ದಾಗ ಅದರಲ್ಲಿ ಯಶಸ್ಸು ಕಾಣಲುಸಾಧ್ಯ ಎಂದರು.

      ಉಪನ್ಯಾಸಕಕೆ. ಎನ್.‌ಬಾನುಪ್ರಸಾದ್‌ ಉಪಸ್ಥಿತರಿದ್ದರು.ಟಿವಿವಾರ್ತೆಯತಯಾರಿ, ಮಂಡನೆ ಹಾಗೂ ಪ್ರಸಾರದ ವಿವಿಧ ಕೌಶಲಗಳ ಬಗ್ಗೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link